Advertisement

ಕೆಂಡಸಂಪಿಗೆ

ಕಾಶಿಗೆ ಹೋಗಲೂ ಚೌಕಾಶಿಯೇ: ಡಾ. ಚಂದ್ರಮತಿ ಸೋಂದಾ ಸರಣಿ

ಕೆಲವು ಬಾರಿ ಮನೆಯ ತಾಪತ್ರಯವಿದ್ದಾಗ ಸುಗ್ಗಿ ಮಾಡಲು ಕಷ್ಟ ಅಂತ ಫಸಲುಗುತ್ತಿಗೆ ಅಂತ ಕೊಡುವ ರೂಢಿಯಿತ್ತು. ಬೆಳೆಯ ಅಂದಾಜು ಮಾಡಿ ಇಂತಿಷ್ಟು ಹಣ ಅಂತ ನಿಗದಿಮಾಡಿ ಒಟ್ಟಾಗಿ ಹಣವನ್ನು ಸಂದಾಯ ಮಾಡುತ್ತಿದ್ದರು. ಆ ವರ್ಷ ಬೆಳೆ ಅಂದಾಜಿಗಿಂತ ಹೆಚ್ಚಾದರೆ ಅಥವಾ ಇವರ ಬೆಳೆಗೆ ಒಳ್ಳೆಯ ದರ ಬಂದರೆ ಬೆಳೆಗಾರರು ಕೈಕೈ ಹಿಸುಕಿಕೊಳ್ಳುತ್ತಿದ್ದರು. ʻಅಯ್ಯೋ! ಅನ್ಯಾಯವಾಗಿ ದುಡ್ಡು ಕಳಕಂಡೆ.ʼ ಅಂತ.
ಡಾ. ಚಂದ್ರಮತಿ ಸೋಂದಾ ಬರೆಯುವ “ಮಾತು ಮಂದಲಿಗೆ” ಸರಣಿಯ ಎರಡನೆಯ ಬರಹ

Read More

ಡಾ. ಚಂದ್ರಮತಿ ಸೋಂದಾ ಬರೆಯುವ ಸರಣಿ “ಮಾತು ಮಂದಲಿಗೆ” ಆರಂಭ

ಅದೃಷ್ಟದ ಪೆನ್ನು ಎಂದು ತಮ್ಮ ಪೆನ್ನಿನ ಬಗ್ಗೆ ಬಹಳ ಮುತುವರ್ಜಿವಹಿಸುವುದೂ ಇದೆ. ಅದೇನಾದರೂ ಕಳೆದುಹೋಯಿತು ಅಂದ್ರೆ ಆಗ ನೋಡಬೇಕು ಭೂಮಿ ಆಕಾಶ ಒಂದು ಮಾಡುವ ಥರಾ ಕೂಗಾಡುವುದನ್ನು. ಸಿಗಲಿಲ್ಲ ಅಂದರೆ ಮನೆಮಂದಿಗೆಲ್ಲ ಮಂತ್ರಾಕ್ಷತೆ ಬೇರೆ. ಅವರ ಅವತಾರ ನೋಡಿದ್ರೆ ಏನೋ ಆಗಬಾರದ್ದು ಆಗಿದೆ ಅನ್ನುವ ರೀತಿ ನಡವಳಿಕೆ. ಪೆನ್ನು ಕೈಗೆ ಬಂತು ಅಂದರೆ ಎಲ್ಲವೂ ತಣ್ಣಗೆ. ಕೆಲವರ ಸಹಿಯನ್ನಂತೂ ಯಾರಿಗೂ ನಕಲು ಮಾಡಲು ಆಗದಂತಹುದು.
ಡಾ. ಚಂದ್ರಮತಿ ಸೋಂದಾ ಬರೆಯುವ ಹಳೆ ಕಾಲದ ನೆನಪುಗಳ ಸರಣಿ “ಮಾತು ಮಂದಲಿಗೆ” ಇಂದಿನಿಂದ ಮೂರುವಾರಗಳಿಗೊಮ್ಮೆ ನಿಮ್ಮ ಕೆಂಡಸಂಪಿಗೆಯಲ್ಲಿ

Read More

ಎಮ್ಮೆಎಮ್ಮೆಯೆಂದೇಕೆ ಬೀಳುಗಳೆವಿರಿ?

ಕೆಲವು ಎಮ್ಮೆಗಳು ಬಹಳ ಸೂಕ್ಷ್ಮ. ಎಮ್ಮೆ ಕರುಹಾಕಿ ನಂತರದಲ್ಲಿ ಒಬ್ಬರೇ ಹಾಲು ಕರೆಯುತ್ತಿದ್ದರೆ ಅದು ಕೆಲವು ದಿನಗಳ ನಂತರ ಇನ್ನೊಬ್ಬರಿಗೆ ಹಾಲನ್ನು ಕೊಡುವುದಿಲ್ಲ. ಸೊರವು ಬಿಡದೆ ಸುಮ್ಮನೆ ನಿಂತಿರುತ್ತದೆ. ಮೊಲೆಗಳನ್ನು ಎಷ್ಟೇ ಜಗ್ಗಿದರೂ ಮೊಲೆಗೆ ಹಾಲು ಇಳಿಸುವುದೇ ಇಲ್ಲ. ಇದನ್ನು ನಮ್ಮೂರಕಡೆ ಕೈಮರ್ಚಲು ಎನ್ನುತ್ತಾರೆ. ಇನ್ನೊಬ್ಬರು ಹಾಲು ಕರೆಯಬೇಕೆಂದರೆ ಸಾಕಷ್ಟು ಸರ್ಕಸ್ ಮಾಡಬೇಕಾಗುತ್ತದೆ.
ಎಮ್ಮೆಯ ಕುರಿತು ಹಲವು ಕುತೂಹಲಕರ ಪ್ರಸಂಗಗಳನ್ನು ಬರೆದಿದ್ದಾರೆ ಚಂದ್ರಮತಿ ಸೋಂದಾ

Read More

“ದೋಸೆ”ಯ ವೈಭೋಗ…..

ಮಿಕ್ಸಿ ಇಲ್ಲದ ಕಾಲವಾದರೂ ವಾರದಲ್ಲಿ ನಾಲಕ್ಕೋ ಐದೋ ದಿನ ದೋಸೆಯೇ ಬೆಳಗಿನ ತಿಂಡಿಗೆ. ಅವಲಕ್ಕಿ, ಉಪ್ಪಿಟ್ಟು ಅಂದರೆ ಅದು ಸೋಮಾರಿಗಳ ತಿಂಡಿ ಎನ್ನುವ ಅಭಿಪ್ರಾಯವಿತ್ತು. ಒಮ್ಮೆ ಮನೆಯಲ್ಲಿ ಹೆಂಗಸರಿಲ್ಲದೆ, ಗಂಡಸು ತಿಂಡಿಮಾಡಿಕೊಳ್ಳುವ ಪ್ರಮೇಯ ಬಂದರೆ ಅಕ್ಕಪಕ್ಕದ ಮನೆಯ ಹೆಂಗಸರು `ಮನೇಲ್ಲಿ ಯಾರೂ ಹೆಂಗಸ್ರಿಲ್ಲೆ. ನಮ್ಮನೆಗೆ ತಿಂಡಿಗೆ ಬಾ, ದೋಸೆ ತಿನ್ನಲಕ್ಕು’ ಎಂದು ಕರೆಯುವುದಿತ್ತು.
ಚಂದ್ರಮತಿ ಸೋಂದಾ ಬರೆದ ದೋಸೆ ಕುರಿತ ಪ್ರಬಂಧ ನಿಮ್ಮ ಓದಿಗೆ

Read More

ಬೋನಿಗೆ ಬಂದನಾ ಇಲಿರಾಯನು

ನಮ್ಮೂರಿನಲ್ಲಿದ್ದಂತೆ ಈ ನಗರದಲ್ಲಿ ಗದ್ದೆ ಇದೆಯಾ? ಗೊಣಬೆ ಇದೆಯಾ? ಅಥವಾ ಭತ್ತದ ಕಣಜವೋ, ಅಕ್ಕಿ ಮೂಟೆಯೋ ಅವಕ್ಕೆ ಸಿಗುತ್ತಾ? ಅಂದ್ಮೇಲೆ ಯಾರಾದ್ರೂ ಚೂರುಪಾರು ತರಕಾರಿ ಬೆಳೆಯೋಣ ಅಂತ ಹೊರಟರೆ ಅದರಲ್ಲಿ ಬಿಡೋ ಕಾಯಿಗಳನ್ನುತಿನ್ನದೇ ಮತ್ತೇನು ಮಾಡಲು ಸಾಧ್ಯ. ಅಕ್ಕಿ ಭತ್ತ, ತರಕಾರಿ ಏನಾದರೂ ಸರಿ, ಹೊಟ್ಟೆಪಾಡು ನೋಡಿಕೊಳ್ಳಬೇಕು. ಆದರೂ ಈ ಸುಂಡಿಲಿಗಳು ಚಳ್ಳೇ ಹಣ್ಣು ತಿನ್ನಿಸುವುದರಲ್ಲಿ ಭಾರೀ ಹುಶಾರು.

Read More

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಸೋಷಿಯಲ್‌ ಮೀಡಿಯಾ



ಆನಂದ್‌ ಗೋಪಾಲ್‌ ಬರೆದ ಈ ಭಾನುವಾರದ ಕತೆ “ಆಟ”
https://tinyurl.com/5575hs6r

ಮದುವೆ ಮದುವೆ ಆ ಸಿಹಿ ಪದವೆ
ಲಾಸ್‌ ವೇಗಸ್‌ನ ‘ಲಿಟಲ್ ವೈಟ್ ವೆಡ್ಡಿಂಗ್ ಚಾಪೆಲ್’ ಕುರಿತು ಅಚಲ ಸೇತು ಬರಹ
https://tinyurl.com/2v28abrv

ಭಾರತಕ್ಕೆ ಹತ್ತಿರವಾದ ಅಮೇರಿಕ
ಎಂ.ವಿ. ಶಶಿಭೂಷಣ ರಾಜು ಅಂಕಣ “ಅನೇಕ ಅಮೆರಿಕಾ” ನಿಮ್ಮ ಓದಿಗೆ
https://tinyurl.com/35mrwwsn

Load More

Polls

ಬದುಕಿನಲ್ಲಿ....

View Results

Loading ... Loading ...

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ