Advertisement

ವಿನಾಯಕ ಅರಳಸುರಳಿ

ಕಲೆ ಮತ್ತು ಭ್ರಾಮಕ ವಾಸ್ತವ: ಚಿತ್ರಾ ವೆಂಕಟರಾಜು ಸರಣಿ

ಪ್ರತಿ ಕಲಾಭ್ಯಾಸಿಗೂ ತಾನು ಯಾವಾಗ ರಂಗದ ಮೇಲೆ ಪ್ರದರ್ಶನ ನೀಡುತ್ತೇನೋ ಎನ್ನುವ ಕಾತರ ಇರುತ್ತದೆ. ಇರಬೇಕು ಕೂಡಾ‌. ಒಮ್ಮೆ ನಾವು ರಂಗದಲ್ಲಿ ಪೂರ್ಣಪ್ರಮಾಣದ ಪ್ರದರ್ಶನ ನೀಡಿದೆವೋ ನಮ್ಮೊಳಗಿನ ಆ ಚಡಪಡಿಕೆ ಆ ಕ್ಷಣಕ್ಕೆ ಥಟ್ಟನೆ ಕಡಿಮೆ ಆಗುತ್ತದೆ. ನಮ್ಮೊಳಗೆ ಹುದುಗಿದ್ದ ಅಪಾರವಾದ ಆಸೆ, ಕಾವನ್ನು ಆ ಒಂದು ಪ್ರದರ್ಶನ ತಣಿಸಿರುತ್ತದೆ. ಮತ್ತೆ ನಮ್ಮನ್ನು ನಾವು ಅಭ್ಯಾಸಕ್ಕೆ ನಮ್ಮ ಮನಸ್ಸು ದೇಹವನ್ನು ಹುರಿಗೊಳಿಸಿಕೊಳ್ಳಲು ಕೆಲವು ಸಮಯವೇ ಬೇಕಾಗುತ್ತದೆ. ಹೀಗೆ ಒಂದು ಪ್ರದರ್ಶನ ದ ಹಿಂದೆ ಮತ್ತು ಪ್ರದರ್ಶನ ನಂತರ ಒಬ್ಬ ಕಲಾವಿದನ ಮನಸಿನಲ್ಲಿ ಇಷ್ಟೆಲ್ಲಾ ಕೆಲಸಗಳು ನಡೆದಿರುತ್ತದೆ.
ಚಿತ್ರಾ ವೆಂಕಟರಾಜು ಬರೆಯುವ “ಚಿತ್ತು-ಕಾಟು” ಸರಣಿ

Read More

ರಂಗ ಕಲಾವಿದೆಯರ ಬದುಕು…: ಚಿತ್ರಾ ವೆಂಕಟರಾಜು ಸರಣಿ

ಹಾಗೆ ನೋಡಿದರೆ, ನಾಟಕಗಳಲ್ಲಿ ಅಭಿನಯಿಸುವ ಹೆಣ್ಣುಮಕ್ಕಳು ಸಮಾಜದ ಉಳಿದ ಹೆಣ್ಣುಮಕ್ಕಳಿಗಿಂತ ದಿಟ್ಟರಾಗಿರುತ್ತಾರೆ. ಹಾಗೆ ಮುಕ್ತವಾಗಿಲ್ಲದಿದ್ದರೆ ರಂಗಭೂಮಿಯಲ್ಲಿ ಕೆಲಸ ಮಾಡಲು ಸಾಧ್ಯವೇ ಆಗುವುದಿಲ್ಲ. ನಾಟಕಾಭ್ಯಾಸದಲ್ಲಿ ಮೊದಲು ಹೇಳಿಕೊಡುವ ಪಾಠವೇ ಮುಜುಗರವನ್ನು ಬಿಟ್ಟು ಧೈರ್ಯವಾಗಿ ಅನಿಸಿದ್ದನ್ನು ಮಾಡುವುದು. ಹಾಗಾಗಿಯೇ ನಾಟಕದಲ್ಲಿ ಅಭಿನಯಿಸುವ ನಟಿಯರ ವ್ಯಕ್ತಿತ್ವ ಗುಂಪಿನಲ್ಲಿ ಎದ್ದುಕಾಣುವಂತಿರುತ್ತದೆ. ಹೊಸದಾಗಿ ನಾಟಕಕ್ಕೆ ಬಂದಾಗ ಗುಬ್ಬಿಯಂತಿರುವ ನಟಿಯರು ದಿನ ಕಳೆದಂತೆ ರಂಗದ ಆಕಾಶದಲ್ಲಿ ಗರಿಬಿಚ್ಚಿ ಹಾರುತ್ತಾರೆ, ಬೀಳುತ್ತಾರೆ‌, ಸಾವರಿಸಿಕೊಂಡು ಮತ್ತೆ ಏಳುತ್ತಾರೆ.
ಚಿತ್ರಾ ವೆಂಕಟರಾಜು ಬರೆಯುವ “ಚಿತ್ತು-ಕಾಟು” ಸರಣಿ

Read More

ರಾಮಮನೋಹರ ಲೋಹಿಯಾ ಮತ್ತು ರಾಮ ಕೃಷ್ಣ ಶಿವ: ಚಿತ್ರಾ ವೆಂಕಟರಾಜು ಸರಣಿ

ಪ್ರಬಂಧದಲ್ಲಿ ರಾಮಮನೋಹರ ಲೋಹಿಯಾ ಅವರು ರಾಮ, ಕೃಷ್ಣ, ಶಿವ ಮೂವರಲ್ಲಿ ಒಂದೊಂದು ವ್ಯಕ್ತಿತ್ವವನ್ನು ಗುರುತಿಸಿದ್ದಾರೆ. ಆ ಮೂರೂ ವ್ಯಕ್ತಿತ್ವಗಳೂ ಭಾರತಕ್ಕೆ ಹೇಗೆ ಮತ್ತು ಯಾಕೆ ಬೇಕು ಎನ್ನುವುದೇ ಲೇಖನದ ಆಶಯ. ರಾಮನಲ್ಲಿನ ಸೀಮಿತ ವ್ಯಕ್ತಿತ್ವ, ಕೃಷ್ಣ ನ ಸಮೃದ್ಧ ವ್ಯಕ್ತಿತ್ಚ ಮತ್ತು ಶಿವ ನ ಪ್ರಮಾಣಾತೀತ ವ್ಯಕ್ತಿತ್ವ. ಈ ವ್ಯಕ್ತಿತ್ವಗಳನ್ನು ಆ ಪಾತ್ರಗಳ ಘಟನೆಗಳ ಮೂಲಕವೇ ನಿರೂಪಿಸುತ್ತಾರೆ. ರಾಮನೊಳಗೆ ಕೃಷ್ಣ ನ ಸಮೃದ್ಧ ವ್ಯಕ್ತಿತ್ವವೂ, ಕೃಷ್ಣನೊಳಗೆ ರಾಮನ ಸೀಮಿತತೆಯೂ ಬಂದುಬಿಡುತ್ತದೆ.
ಚಿತ್ರಾ ವೆಂಕಟರಾಜು ಬರೆಯುವ “ಚಿತ್ತು-ಕಾಟು” ಸರಣಿ

Read More

ಒಂದು ಡೈಲಾಗ್‌ ಹೇಳಿ!: ಚಿತ್ರಾ ವೆಂಕಟರಾಜು ಸರಣಿ

ಕಲಿಕೆಯ ಪ್ರಾರಂಭದಲ್ಲಿ ಎಲ್ಲಾ ಕಲೆಗಳಲ್ಲೂ ಅದನ್ನು ಕಲಿಸುವವರನ್ನು ಅನುಕರಣೆ ಮಾಡುತ್ತಾರೆ. ಒಂದು ಹಂತದಲ್ಲಿ ಅದು ಅನಿವಾರ್ಯ ಕೂಡಾ. ನಂತರ ನಿಧಾನವಾಗಿ ಅದನ್ನು ಬಿಡಿಸಿಕೊಂಡು ಅಂದರೆ ಕೌಶಲವನ್ನು ಮೀರಿ, ಒಂದು ನಿರ್ದಿಷ್ಟ ಸನ್ನಿವೇಶದಲ್ಲಿ ಒಂದು ಪಾತ್ರದ ನಡವಳಿಕೆ ಹೇಗಿರಬಹುದು ಎನ್ನುವುದರಿಂದ ನಟನೆಯ ಪ್ರಕ್ರಿಯೆಯನ್ನು ಪ್ರಾರಂಭ ಮಾಡಬೇಕಾಗುತ್ತದೆ. ಇಲ್ಲದಿದ್ದರೆ, ವರ್ಷಗಳ ಹಿಂದೆ ಅನುಕರಣೆ ಮಾಡಿದ ರೀತಿಯಲ್ಲೇ ಎಲ್ಲಾ ಸಂಭಾಷಣೆಗಳನ್ನೂ ಹೇಳುತ್ತೇವೆ. ಕಾಳಿದಾಸನಿಂದ ಹಿಡಿದು ಷೇಕ್ಸ್‌ಪಿಯರ್‌ ನವರೆಗೂ ಎಲ್ಲಾ ನಾಟಕದ ಎಲ್ಲಾ ಪಾತ್ರಗಳೂ ಒಂದೇ ರೀತಿ ಮಾತನಾಡುತ್ತವೆ. ನಿಜ ಜೀವನದಲ್ಲಿ ಮಾತನಾಡುವಂತೆ ರಂಗದ ಪಾತ್ರಗಳು ಮಾತನಾಡಲು ಆಗುವುದಿಲ್ಲ ಅದಕ್ಕೊಂದು ನಾಟಕೀಯತೆ ಇರಬೇಕಾಗುತ್ತದೆ.
ಚಿತ್ರಾ ವೆಂಕಟರಾಜು ಬರೆಯುವ “ಚಿತ್ತು-ಕಾಟು”

Read More

ನೀನು ಬೆಳೆದರೆ ನಾನು ಬೆಳೆವೆನು: ಚಿತ್ರಾ ವೆಂಕಟರಾಜು ಸರಣಿ

ಎಷ್ಟು ಸಲ ಪ್ರವೇಶ ಕೊಡಬಾರದ ಸೀನ್‌ಗಳಲ್ಲಿ ತಪ್ಪಿ ಪ್ರವೇಶ ಕೊಟ್ಟಿರುತ್ತೇವೆ, ಆಡಲೇಬೇಕಾದ ಮಾತನ್ನು ಆಡದೇ ಉಳಿದಿದ್ದೇವೆ. ಆಡಬಾರದಿದ್ದ ಸಂಭಾಷಣೆಗಳನ್ನು ಸುಲಭವಾಗಿ ಆಡಿಬಿಟ್ಟಿರುತ್ತೇವೆ. ಏನೇ ಮಾಡಲಿ ಒಮ್ಮೆ ಆ ನಾಟಕ ಮುಗಿದ ಮೇಲೆ ಮುಗಿಯಿತು… ಒಮ್ಮೆ ಪ್ರದರ್ಶನ ಮುಗಿದ ಮೇಲೆ ಮತ್ತೆ ಆ ದೃಶ್ಯದಲ್ಲಿ ನಮ್ಮ ಎಂಟ್ರಿ ಇಲ್ಲ. ಮತ್ತೆ ಬೇರೆಯದೇ ನಾಟಕದಲ್ಲಿ ಬೇರೆಯದೇ ಪಾತ್ರ! ನಾಟಕದ ಮಜಾ ಎಂದರೆ ಬದುಕಿಗಿಲ್ಲದ ಮರು ಪ್ರದರ್ಶನದ ಅವಕಾಶ ನಾಟಕದಲ್ಲಿದೆ. ಎಲ್ಲ ನಟರೂ ಒಪ್ಪಿದರೆ ಮತ್ತೆ ಅದೇ ನಾಟಕವನ್ನು ಆಡಬಹುದು. ಬೇಕಿದ್ದರೆ ಬೇರೆ ರೀತಿಯಲ್ಲಿ. ಆದರೆ, ಪ್ರತಿ ಬಾರಿಯೂ ಹೊಸದಾಗಿ ಅಭಿನಯಿಸಬೇಕು.
ಚಿತ್ರಾ ವೆಂಕಟರಾಜು ಬರೆಯುವ “ಚಿತ್ತು-ಕಾಟು” ಸರಣಿ

Read More

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಫೇಸ್ ಬುಕ್

Polls

ಬದುಕಲು ನಿಮಗೆ....

View Results

Loading ... Loading ...

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ