ದಾದಾಪೀರ್ ಜೈಮನ್ ಬರೆದ ಈ ದಿನದ ಕವಿತೆ
“ನಿಂತ ನೆಲ ಕಾಲ ಕೆಳಗೆ ಕುಸಿಯುವಾಗ ಆಕಾಶಕ್ಕೆ ಮುಖಮಾಡಿ ಮರವಾಗಿ ರೆಕ್ಕೆಬಿಚ್ಚುವ ವಿಶ್ವಾಸದಲ್ಲಿ
ಮಿಣುಕುಹುಳುಗಳ ಸಂಗ ಕಟ್ಟುವಾಗ ಅವರ ತವರ ಕತ್ತಲ ನೆನಪನ್ನೂ ಸೇರಿಸಿಕೊಳ್ಳುವ ಮಮತೆಯಲ್ಲಿ
ಎಂಥದೆಂತು ಘನಕಾರ್ಯಗಳ ಚರ್ಚೆ ಮುನಿಸುಗಳೆಲ್ಲ ಕೂಡಿ ಅನ್ನ ಬೇಯಿಸುವಾಗ ಆವಿಯಾಗುವ ಘಳಿಗೆಗಳಲ್ಲಿ
ಸ್ನೇಹಿತರ ಜೊತೆ ಹರಟುವ ಮೆಹಫಿಲ್ಲಿನಲ್ಲಿ ಆರಾಮಾಗಿ ಕವಿತೆ ಓದುವ ನಿನ್ನ ಪ್ರೀತಿಯಲ್ಲಿ” -ದಾದಾಪೀರ್ ಜೈಮನ್ ಬರೆದ ಈ ದಿನದ ಕವಿತೆ