ನೀಲ ಕುರುಂಜಿಯ ನಾಡಿನಲ್ಲಿ ರಕ್ತಸಿಕ್ತ ಅಧ್ಯಾಯ
ಯಾವುದೇ ಮನೆ, ಕಾಂಕ್ರೀಟ್ ಕಾಡಿನ ಕಟ್ಟಡಗಳಿಲ್ಲದ, ಒಂದು ಪ್ರಶಾಂತವಾದ ಜಾಗ. ಆದರೆ ಅಲ್ಲಿಗೆ ಹೋಗಿ ತಲುಪುವುದು ಸ್ವಲ್ಪ ಕಷ್ಟದ ಕೆಲಸ. ಹತ್ತು ಕಿಲೋಮೀಟರು ದೂರದವರೆಗೆ ನಿಮ್ಮ ವಾಹನಗಳಲ್ಲಿ ಹೋಗಿ, ಅಲ್ಲಿಂದ ಮುಂದೆ ಅದಕ್ಕೆಂದೇ ಬಾಡಿಗೆ ಇರುವ ಕೆಲವು ಫೋರ್ ವ್ಹೀಲ್ ಜೀಪ್‌ಗಳಲ್ಲಿ ಮಾತ್ರ ಹೋಗಬಹುದು. ಓರೆ ಕೋರೆ, ನೀರು ಹರಿದು, ಅರ್ಧ ಹಾಳಾದ ರಸ್ತೆಯಲ್ಲಿ ಹೋಗುವುದೇ ಒಂದು ಸಾಹಸ ಕ್ರೀಡೆ ಅರ್ಥಾತ್ ಅಡ್ವೆಂಚರ್. ಸಮುದ್ರ ಮಟ್ಟದಿಂದ ನಾಲ್ಕು ಸಾವಿರ ಅಡಿ ಮೇಲೆ ಇರುವ ಸ್ಥಳ.
ಡಾ. ಕೆ.ಬಿ. ಸೂರ್ಯಕುಮಾರ್ ಬರೆಯುವ ‘ನೆನಪುಗಳ ಮೆರವಣಿಗೆ’