ಕಲ್ಲೇಶ್ ಕುಂಬಾರ್ ಕಥಾಸಂಕಲನದ ಕುರಿತು ವೇದಾಂತ ಏಳಂಜಿ ಬರಹ
“ಗ್ರಾಮೀಣ ಭಾಗದ ಜನಜೀವನವನ್ನು ಆರಂಭದ ಎರಡು ಕಥೆಗಳಲ್ಲಿ ತೋರ್ಪಡಿಸುತ್ತಲೇ ಜಾಗತೀಕರಣದ ಸಮಸ್ಯೆಗಳಿಗೆ ಹಾರೊಗೇರಿ ತೆರೆದುಕೊಳ್ಳುವ ಕಥನಗಾರಿಕೆ ವಿಶಿಷ್ಟವಾದದ್ದು. ಆಧುನಿಕ ಕಾಲದಲ್ಲೂ ಊಳಿಗಮಾನ್ಯ ಪದ್ಧತಿಯನ್ನು ಅನುಸರಿಸುವ ‘ನಿಂದ ನಿಲುವಿನ ಘನ’ ಕಥೆಯ ಮಾನಿಂಗಯ್ಯನಂತವರು ದಲಿತ ಮಹಿಳೆಯರ ಮೇಲೆ ನೀರೆರೆಚುವ ಪದ್ಧತಿಯು ಆತನ ರಾಕ್ಷಸ ಸ್ವಭಾವ ತೋರುತ್ತದೆ. ಮೇಲ್ವರ್ಗದ ಈ ಸಂಪ್ರದಾಯವನ್ನು ರಮೇಶನ ಪ್ರಭಾವದಿಂದ ಕೆಂಚವ್ವಳು ನೀರೋಕುಳಿ ಆಚರಣೆಗೆ ವಿರೋಧಿಸುತ್ತಾಳೆ.”
ಕಲ್ಲೇಶ್ ಕುಂಬಾರ್ ಬರೆದ ‘ನಿಂದ ನಿಲುವಿನ ಘನʼ ಕಥಾಸಂಕಲನದ ಕುರಿತು ಡಾ.ಎಂ.ವೇದಾಂತ ಏಳಂಜಿ ಬರಹ