ಅಮೆರಿಕದ ಥೇಟರಿನಲ್ಲಿ ಬ್ಯಾಟರಿ ಬಿಟ್ಟ ಕತೆ!: ಗುರುಪ್ರಸಾದ ಕುರ್ತಕೋಟಿ ಸರಣಿ
ಒಂದು ಎಡವಟ್ಟಾಗಿತ್ತು! ನಾನು ಹಳೆಯ, ಕಮಲ್ ಹಾಸನ್ ನಟಿಸಿದ್ದ ಪುಷ್ಪಕ ವಿಮಾನದಂತೆಯೇ ಇದು ಕೂಡ ತಮಾಷೆಯಾಗಿಯೇ ಇರಬಹುದು ಅಂದುಕೊಂಡಿದ್ದೆ. ಆದರೆ ಇದು ಅಪ್ಪ ಮಗಳ ನಡುವೆ ಪ್ರೀತಿ ವಾತ್ಸಲ್ಯದ ಬಗ್ಗೆ ಕೇಂದ್ರಿತವಾಗಿದ್ದು, ಕತೆಯಲ್ಲಿ ಬಹಳಷ್ಟು ಭಾವನಾತ್ಮಕ ಘಟನೆಗಳು ಇದ್ದವು. ಸ್ವಲ್ಪ ಸಮಯದಲ್ಲೇ ಅತ್ತಿತ್ತ ಗಮನಿಸಲು ಶುರು ಮಾಡಿದರೆ ಎಷ್ಟೋ ಹೆಣ್ಣು ಮಕ್ಕಳು ಕಣ್ಣೀರು ಹಾಕಲು ಶುರು ಮಾಡಿದ್ದರು. ಇತ್ತೀಚೆಗಷ್ಟೇ ಅಪ್ಪನನ್ನು ಕಳೆದುಕೊಂಡಿದ್ದ ನನ್ನ ಹೆಂಡತಿ ಕೂಡ ಗೊಳೋ ಅಂತ ಅಳಲು ಶುರು ಮಾಡಿದ್ದಳು.
ಗುರುಪ್ರಸಾದ ಕುರ್ತಕೋಟಿ ಬರೆಯುವ “ಅಮೆರಿಕದಲ್ಲಿ ಕುರ್ತಕೋಟಿ” ಸರಣಿ