ಹೊಸ ಹಾದಿ ಹಿಡಿದ ಬರವಣಿಗೆ…: ಎಚ್. ಗೋಪಾಲಕೃಷ್ಣ ಸರಣಿ
ಗೆಳೆಯರ ಪರಿಚಯದ ಮೊದಲನೇ ಭೇಟಿಯಲ್ಲೇ ಅವರು ಒಬ್ಬ ಬರಹಗಾರರು ಎಂದು ತಿಳಿಯಿತು. ಆಗಲೇ ಸುಮಾರು ಕತೆಗಳು ಮತ್ತು ಹಾಸ್ಯ ಲೇಖನ ಬರೆದಿದ್ದರು. ಸುದ್ದಿ ಹಾಗೇ ನನ್ನ ಬರವಣಿಗೆಯತ್ತ ತಿರುಗಿತು. ಒಂದೋ ಎರಡೋ ಕತೆ ಬರೆದಿರುವ ಸಂಗತಿಯನ್ನು ಕೊಂಚ ನಾಚಿಕೆಯಿಂದ ಹೇಳಿಕೊಂಡೆ. ಬರಹಗಾರರಿಗೆ ಮುಖೇಡಿತನ ಹೆಚ್ಚಾಗಿಯೇ ಇರುತ್ತದೆ ಎನ್ನುವುದು ಅನುಭವವಾಗಿತ್ತು. ಮತ್ತು ನನಗಂತೂ ಈಗಲೂ ಅದು ಮೆದುಳಿನ ಮೇಲಿನ ಸ್ತರದಲ್ಲಿ ಅಂಟಿಕೊಂಡು ಬಿಟ್ಟಿದೆ!
ಎಚ್. ಗೋಪಾಲಕೃಷ್ಣ ಬರೆಯುವ “ಹಳೆ ಬೆಂಗಳೂರ ಕಥೆಗಳು” ಸರಣಿಯ ೭೩ನೇ ಬರಹ ನಿಮ್ಮ ಓದಿಗೆ
