Advertisement

ಸುವರ್ಣ ಚೆಳ್ಳೂರು

ಹತ್ತು ಮಹಡಿಯ ಭರ್ಜರಿ ಪ್ಲಾನು….: ಎಚ್.ಗೋಪಾಲಕೃಷ್ಣ ಸರಣಿ

ಬೆಳಗಿಂದ ಸಂಜೆವರೆಗೂ ನನ್ನ ಸಂಗಡವೆ ಇತ್ತು ಅದು. ಮಧ್ಯಾಹ್ನ ನಿದ್ದೆ ಕೂಡ ಮಾಡದೇ ನನ್ನ ಜತೆಗೆ ಇದ್ದುಬಿಡ್ತು. ಮನೆಗೆ ಹೊರಡ್ತಾ ಮಗೂನ ಮುದ್ದಿಸಿದೆ. “ಮಗು ತುಂಬಾ ಮುದ್ದು, ನನ್ನನ್ನ ತುಂಬಾ ಹಚ್ಚಿಕೊಂಡಿದೆ “ಅಂದೆ. ಬೆಳಿಗ್ಗೆಯಿಂದ ನನ್ನ ಸಂಗಡವೇ ಇತ್ತು. ಪುಟ್ಟ ಕೂಸು, “ಅಂಕಲ್‌ನ ಒಬ್ಬರನ್ನೇ ಬಿಡಬೇಡ, ಸಿಕ್ಕಿದ್ದೆಲ್ಲಾ ಜೇಬಲ್ಲಿ ಹಾಕ್ಕೊಳತ್ತೆ ಅದು, ಅದರ ಹಿಂದೇನೆ ಇರು ಅಂತ ಅಜ್ಜಿ ಹೇಳಿತ್ತು…” ಅಂತ ಸತ್ಯ ಬಯಲು ಮಾಡಿತು.
ಎಚ್. ಗೋಪಾಲಕೃಷ್ಣ ಬರೆಯುವ “ಹಳೆ ಬೆಂಗಳೂರ ಕಥೆಗಳು” ಸರಣಿ

Read More

ನಮ್‌ ಸೈಟ್‌ ಎಲ್ಲಿದೆ! : ಎಚ್. ಗೋಪಾಲಕೃಷ್ಣ ಸರಣಿಯ ಐವತ್ತನೆಯ ಕಂತು!

ಮೊದಲನೇ ಮಗನ ಚೆಡ್ಡಿಗೆ ಕೂಡುವ ಭಾಗದಲ್ಲಿ ತೇಪೆ ಹಾಕಿಸಿ ಎರಡನೆಯವನಿಗೆ ಹಾಕುತ್ತಿದ್ದರು, ಅವನ ನಂತರ ಮೂರನೇ ಅವನು, ಅದಾದ ಮೇಲೆ ನಾಲ್ಕು, ಐದು ಹೀಗೆ. ಕೊನೇ ಹುಡುಗನ ಬಳಿ ಬರುವ ಹೊತ್ತಿಗೆ ಚಡ್ಡಿಗೆ ತೇಪೆ ಹಾಕಲು ಜಾಗವೇ ಇರ್ತಾ ಇರಲಿಲ್ಲ. ಆಗಿನ್ನೂ ಪ್ರೈವೇಟ್ ಸ್ಕೂಲ್ ಬಂದಿರಲಿಲ್ಲ ಮತ್ತು ಎಲ್ಲರೂ ಸರ್ಕಾರಿ ಶಾಲೆ. ತೇಪೆ ಇಲ್ಲದಿರುವ ಚೆಡ್ಡಿ ಹಾಕಿದವನು ಮನೆಯ ಮೊದಲ ಮಗ ಎಂದು ಸುಲಭವಾಗಿ ಗೊತ್ತಾಗುತ್ತಿತ್ತು.
ಎಚ್. ಗೋಪಾಲಕೃಷ್ಣ ಬರೆಯುವ “ಹಳೆ ಬೆಂಗಳೂರ ಕಥೆಗಳು” ಸರಣಿಯ ಐವತ್ತನೆಯ ಕಂತು

Read More

ಬೇಡದ್ದಲ್ಲೇ ಸೈಟು ಖರೀದಿಸಿದ್ದು: ಎಚ್. ಗೋಪಾಲಕೃಷ್ಣ ಸರಣಿ

ತೆಪ್ಪಗೆ ಜೇಬಿಂದ ಎರಡು ಹತ್ತರ ನೋಟು ಬಿಡಿಸಿ ಕೊಟ್ಟೆ. ಇನ್ನೂ ಬೇಕು.. ಅಂದ. ಮೂರು ನೋಟು ಅವನ ಕೈ ಸೇರಿದ ಮೇಲೆ ಅದನ್ನು ಅವನ ಜೇಬಿಗೆ ತುರುಕಿಕೊಂಡ. ನಂತರ ನನ್ನ ಬೆರಳು ಬಾಂಡ್ ಪೇಪರಿನ ಮೇಲೆ ಬಲವಾಗಿ ಊರಿ ಅವನ ಭಾರ ಎಲ್ಲಾ ಬಿಟ್ಟು ಹೊರಳಿಸಿದ. ಅವನು ಎಷ್ಟು ಕೋಪ ರೋಷದಿಂದ ಬೆರಳನ್ನು ಹೊರಳಿಸಿದ್ದ ಅಂದರೆ ಒಂದು ಕಾಲ ಮೇಲೆ ನಿಂತು ಇಡೀ ಅವನ ತೂಕವನ್ನು ನನ್ನ ಬೆರಳಿಗೆ ಹೊರೆಸಿದ್ದ.
ಎಚ್. ಗೋಪಾಲಕೃಷ್ಣ ಬರೆಯುವ “ಹಳೆ ಬೆಂಗಳೂರ ಕಥೆಗಳು” ಸರಣಿಯ ನಲವತ್ತೊಂಭತ್ತನೆಯ ಕಂತು ನಿಮ್ಮ ಓದಿಗೆ

Read More

ದೊಡ್ಡಬೊಮ್ಮಸಂದ್ರ ಪುರ ಪ್ರವೇಶ: ಎಚ್. ಗೋಪಾಲಕೃಷ್ಣ ಸರಣಿ

ಅಲ್ಲೊಂದು ಮೂಲೆಯಲ್ಲಿ ತೆಂಗಿನ ತಡಿಕೆ, ಸೊಂಟದಷ್ಟು ಎತ್ತರ. ಒಳಗಡೆ ಒಂದು ಗಂಡಸು. ಉರಿಯುತ್ತಿರುವ ಸೀಮೆ ಎಣ್ಣೆ ಸ್ಟೋವು. ಆಗ ಒಂದು ಕಡೆ ಸೀಮೆ ಎಣ್ಣೆ ತುಂಬಲು ಒಂದು ಸಿಲಿಂಡರ್ ಆಕಾರದ ಡಬ್ಬ ಮತ್ತು ಅದಕ್ಕೆ ಅಂಟಿದ ಹಾಗೆ ಸೀಮೆ ಎಣ್ಣೆ ಉರಿಯ ಬರ್ನರ್ ಇರುವ ಒಲೆ ತುಂಬಾ ಪಾಪ್ಯುಲರ್. ಅದರ ಮೇಲೆ ಒಂದು ಬಾಂಡಲಿ ಮತ್ತು ಕುದಿ ಎಣ್ಣೆ ಒಳಗೆ ಬೋಂಡಾ. ಒಬ್ಬ ಸ್ಟೋವಿನ ಆಕಡೆ ಕೂತು ಕೈಯಲ್ಲಿ ಪುಟ್ಟ ಜಾಲರಿ ಸೌಟು ಹಿಡಿದು ಕೂತು ಬೋಂಡಾ ಕರೀತಾ ಕೂತಿದ್ದಾನೆ!
ಎಚ್. ಗೋಪಾಲಕೃಷ್ಣ ಬರೆಯುವ “ಹಳೆ ಬೆಂಗಳೂರ ಕಥೆಗಳು” ಸರಣಿಯ ನಲವತ್ತೆಂಟನೆಯ ಕಂತು ನಿಮ್ಮ ಓದಿಗೆ

Read More

ಸೈನ್‌ ಹಾಕೋ ಫ್ರೆಂಡು…: ಎಚ್. ಗೋಪಾಲಕೃಷ್ಣ ಸರಣಿ

ಏನು ನೀನಿಲ್ಲಿ… ಅಂತ ಕೇಳಿದವರಿಗೆ ನನ್ನ ಹುಡುಕಾಟ ವಿವರಿಸಿ ವಿವರಿಸಿ ಬಾಯಿಪಾಠ ಆಗಿತ್ತು. ಬರೀ ಜಾಲಹಳ್ಳಿ ಅಂತ ಇದ್ದರೆ ಹುಡುಕೋದು ಅಸಾಧ್ಯ. ಆದರೂ ಇಂತ ಕಡೆ ಕೇಳು ಅಂತ ಅವರು ಸಿಕ್ಕಿದ ಜಾಗದಿಂದ ಒಂದು ಕಿಮೀ ದೂರ ಇರುವ ಮತ್ತೊಂದು ಜಾಗಕ್ಕೆ ಕಳಿಸಿ ಕೈ ತೊಳೆದವರು ಹೆಚ್ಚು. ಎಷ್ಟು ಉತ್ಸಾಹದಿಂದ ಬೆಳಿಗ್ಗೆ ಸೈಕಲ್ ಹತ್ತಿ ಹೊರಟಿದ್ದೆನೋ ಅಷ್ಟರ ನೂರು ಪಾಲು ಬೇಸರದಿಂದ ಮನೆಗೆ ವಾಪಸ್ ಆದೆ. ಅಣ್ಣನಿಗೆ ಈ ವಿಷಯ ವರದಿ ಮಾಡಿದೆ.
ಎಚ್. ಗೋಪಾಲಕೃಷ್ಣ ಬರೆಯುವ “ಹಳೆ ಬೆಂಗಳೂರ ಕಥೆಗಳು” ಸರಣಿಯ ನಲವತ್ತೇಳನೆಯ ಕಂತು ನಿಮ್ಮ ಓದಿಗೆ

Read More

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಫೇಸ್ ಬುಕ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ