Advertisement

ಕ್ಷಮಾ ವಿ. ಭಾನುಪ್ರಕಾಶ್

ರೇಗಿಸ್ತಾನದಲ್ಲಿ ಉರಿಯುವ ಬಣ್ಣಗಳು: ಹೇಮಾ ನಾಯಕ ಪ್ರವಾಸ ಕಥನ

ಶಾಮ ಸುಮ್ಮನೆ ಮಾತನಾಡುವವನಲ್ಲ, ಹೇಳಿದ್ದನ್ನು ಕೇಳಿಸಿಕೊಂಡು ಆಳವಾಗಿ ವಿಚಾರ ಮಾಡಿ, ಎದುರಿಗೆ ಇರುವವರಿಗೆ ಆಸಕ್ತಿ ಇದ್ದರೆ ಮಾತ್ರ ವಿಷಯ ಹಂಚಿಕೊಳ್ಳುವವನು. ನಸುಕಿನ ನಾಲ್ಕಕ್ಕೇ ಎಬ್ಬಿಸಿ ನಮ್ಮನ್ನು ಗಾಡಿಯಲ್ಲಿ ಹತ್ತಿಸಿಕೊಂಡು ಹೊರಟ. ಧೋಲಿಯಾದಿಂದ ಹೊರಟು ಪೋಖ್ರನ್ ತಹಶೀಲಿನ ಹುಲ್ಲುಗಾವಲುಗಳ ಕಡೆ ಹೊರಟೆವು. ದಾರಿಯುದ್ದಕ್ಕೂ ಮೌನ, ಚಳಿಯಲ್ಲಿ ಬಾಯಿ ತೆರೆಯಲೂ ಆಗದೇ ಹಲ್ಲು ಕಡಿಯುತ್ತ ಕೂರಬೇಕಾಯಿತು. ಹೋಗಿ ತಲುಪಿದ್ದು ಎಲ್ಲಿ ಎಂದು ಗುರುತಿಸಲಾಗದಂತ ಒಣ ಕಡ್ಡಿಗಳ ನಡುವೆ.
ಹೇಮಾ ನಾಯಕ ಬರೆದ ಪ್ರವಾಸ ಕಥನ ನಿಮ್ಮ ಓದಿಗೆ

Read More

ನೀರ ನೆಲದ ಮೇಲೆ ನೂರಾರು ಮನೆ – ಧೊದಿಯಾ: ಹೇಮಾ ನಾಯಕ ಬರಹ

ಹೀಗೆ ನೆಲದಿಂದ ಎತ್ತರಿಸಿ ಕಟ್ಟಿದ ಚಿಕ್ಕ ಚಿಕ್ಕ ಗೂಡುಗಳು ಅಲ್ಲಲ್ಲಿ ಚದುರಿಕೊಂಡಂತೆ ಇದ್ದು, ನೀರೇ ಬುಡಕ್ಕೆ ಕೈ ಹಾಕಿ ಎಬ್ಬಿಸಿ ಕೂರಿಸಿದಂತೆ ಕಾಣಿಸುತ್ತವೆ. ಹೆಚ್ಚುಕಮ್ಮಿ ಎಲ್ಲ ತೊಳೆದುಕೊಂಡು ಹೋಗುವಂತೆ ಕಾಣುತ್ತಿದ್ದ ಊರಿನಲ್ಲಿ, ಅಟ್ಟದ ಕೋಣೆಗಳಿಗೆ ಹೊಂದಿಕೊಂಡಂತೆ ಹೂವಿನ ಕುಂಡಗಳನ್ನು ಸುಂದರವಾಗಿ ಜೋಡಿಸಿದ್ದು ನೋಡಿ ಅಚ್ಚರಿಯ ಜೊತೆ ಖುಷಿಯೂ ಆಯಿತು. ಧೊದಿಯಾದಲ್ಲಿ ಒಂದೇ ಒಂದು ಕಿರಾಣಿ ಅಂಗಡಿಯಿದೆ. ಅದರ ಮಾಲೀಕ ನನ್ನನ್ನು ಕರೆದು ತನ್ನ ಮೊಟ್ಟಮೊದಲ ಅಂಗಡಿ ಅದೋ ಅಲ್ಲಿಯೇ ಇತ್ತೆಂದು ದಿಬ್ರು ನದಿಯ ನಡುವೆ ಕಾಣದ ಯಾವುದೋ ಬಿಂದುವಿನತ್ತ ಬೆರಳು ತೋರಿಸಿದ.
ಅಸ್ಸಾಮ್ ರಾಜ್ಯದ ಧೊದಿಯಾ ಹಳ್ಳಿಗೆ ನೀಡಿದ ಭೇಟಿಯ ಕುರಿತು ಹೇಮಾ ನಾಯಕ ಬರಹ

Read More

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಫೇಸ್ ಬುಕ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ