ನಿಜವಾದ ಸೋದರಮಾವ: ಕೆ. ಸತ್ಯನಾರಾಯಣ ಕೃತಿಯ ಬರಹ
ಬೆಂಗಳೂರಿನಿಂದ ಗೌಹಾತಿಗೆ ಹೊರಟಿದ್ದ ರೈಲಿನಲ್ಲಿ ಒಬ್ಬ ಕನ್ನಡಿಗ ಪ್ರಯಾಣಿಕರ ಪರಿಚಯವಾಯಿತು. ಸದ್ಯದಲ್ಲೇ ಅವರು ನಿವೃತ್ತರಾಗಲಿದ್ದರು. ಬೆಂಗಳೂರಿಗೆ ಬಂದು ಬಂಧು-ಮಿತ್ರರ ಜೊತೆ ಬದುಕುತ್ತಾರೆ ಎಂಬುದು ನನ್ನ ನಿರೀಕ್ಷೆ. ಆದರೆ ಅವರು ಬೆಂಗಳೂರಿನಲ್ಲಿದ್ದ ಆಸ್ತಿಯನ್ನೆಲ್ಲ ಮಾರಿ, ಗೌಹಾತಿಯಲ್ಲೇ ಖಾಯಂ ಆಗಿ ನೆಲೆಸಲು ಹೊರಟಿದ್ದರು. ಈಗ ನಾವು ಅಲ್ಲಿ ಜೀವನ ಲಯಕ್ಕೆ ಹೊಂದುಕೊಂಡುಬಿಟ್ಟಿದ್ದೇವೆ. ನಮ್ಮ ತಂದೆ-ತಾಯಿ ಇಬ್ಬರೂ ಖಾಯಿಲೆ ಬಿದ್ದಾಗ ನಮಗಾಗಿ ಬಂದವರು ನೆಂಟರಿಷ್ಟರಲ್ಲ, ನಮ್ಮ ಕಾಲೊನಿಯ ಅಸ್ಸಾಮಿ ಬಂಧುಗಳು. ಅವರಿಗೆ ಕೃತಜ್ಞತೆ ಸಲ್ಲಿಸುವುದೆಂದರೆ, ಅವರೊಡನೆಯೇ ಮುಂದೆ ಬದುಕುವುದು ಎಂದುಬಿಟ್ಟರು.
ಕತೆಗಾರ ಕೆ. ಸತ್ಯನಾರಾಯಣ ಅವರ “ನನ್ನ ಪುಸ್ತಕಗಳ ಆತ್ಮಚರಿತ್ರೆ” ಕೃತಿಯ ಒಂದು ಬರಹ ನಿಮ್ಮ ಓದಿಗೆ