ಪ್ರೇಮ ಕವಿತೆಗಳಿಲ್ಲದ ಸಾಹಿತ್ಯ ಅಪೂರ್ಣ: ಕಮಲಾಕರ ಕಡವೆ
ಪ್ರೇಮಕವನಗಳನ್ನು ಬರೆಯುವ ಕವಿ ಎದುರಿಸುವ ಮುಖ್ಯ ಸವಾಲು ಅಂದರೆ ಅಭಿವ್ಯಕ್ತಿಯ ಸವಕಲು ಗುಣ. ಅತಿಬಳಕೆಯಿಂದಾಗಿ ಪ್ರೇಮದ ಕುರಿತಾಗಿ ಹೇಳಬಹುದಾದ ಅನೇಕ ಮಾತುಗಳು ತೀರಾ ಸವಕಲಾಗಿ, ಈಗ ಕೃತ್ರಿಮ ಅನಿಸಿಬಿಡುವುದು ಸಹಜ. ಈ ನಿಟ್ಟಿನಲ್ಲಿ ನನಗೆ ಜಬಿವುಲ್ಲಾ ಅವರ ಸೃಜನಶೀಲ ಮರುರೂಪಿಸುವಿಕೆ ಇಷ್ಟವಾಯಿತು. ವ್ಯಾಪಕವಾಗಿ ಬಳಕೆಯಾದ ಭಾವನೆಯೊಂದನ್ನು ಬಳಸುವಾಗ ಅವರು ಅದಕ್ಕೊಂದು ಟ್ವಿಸ್ಟ್ ಕೊಡುತ್ತಾರೆ. ಅವರು ಕೊಡುವ ಈ ತಿರುವು ಆ ಭಾವನೆ ಮತ್ತು ಅಭಿವ್ಯಕ್ತಿಗೆ ಹೊಸ ಚಾಲ್ತಿ ಸಾಧ್ಯವಾಗಿಸುತ್ತದೆ:
ಜಬಿವುಲ್ಲಾ ಅಸದ್ ಕವನ ಸಂಕಲನ “ಪ್ರೇಮಾಯತನ”ಕ್ಕೆ ಕಮಲಾಕರ ಕಡವೆ ಮುನ್ನುಡಿ