ಜಿ. ಎಸ್. ಶಿವರುದ್ರಪ್ಪ ಬರೆದ ಕವಿತೆ: “ನನ್ನ ಹಣತೆ”
“ನನಗೂ ಗೊತ್ತು, ಈ ಕತ್ತಲೆಗೆ
ಕೊನೆಯಿರದ ಬಾಯಾರಿಕೆ,
ಎಷ್ಟೊಂದು ಬೆಳಕನ್ನು ಇದು ಉಟ್ಟರೂ, ತೊಟ್ಟರೂ
ತಿಂದರೂ, ಕುಡಿದರೂ ಇದಕ್ಕೆ ಇನ್ನೂ ಬೇಕು
ಇನ್ನೂ ಬೇಕು ಎನ್ನುವ ಬಯಕೆ.” -ಜಿ. ಎಸ್. ಶಿವರುದ್ರಪ್ಪ ಬರೆದ ಕವಿತೆ: “ನನ್ನ ಹಣತೆ”
ಕೆಂಡಸಂಪಿಗೆ ಸಂಪಾದಕೀಯ ತಂಡದ ಆಶಯ ಬರಹಗಳು ಇಲ್ಲಿರುತ್ತವೆ
Posted by ಕೆಂಡಸಂಪಿಗೆ | Oct 20, 2025 | ದಿನದ ಕವಿತೆ |
“ನನಗೂ ಗೊತ್ತು, ಈ ಕತ್ತಲೆಗೆ
ಕೊನೆಯಿರದ ಬಾಯಾರಿಕೆ,
ಎಷ್ಟೊಂದು ಬೆಳಕನ್ನು ಇದು ಉಟ್ಟರೂ, ತೊಟ್ಟರೂ
ತಿಂದರೂ, ಕುಡಿದರೂ ಇದಕ್ಕೆ ಇನ್ನೂ ಬೇಕು
ಇನ್ನೂ ಬೇಕು ಎನ್ನುವ ಬಯಕೆ.” -ಜಿ. ಎಸ್. ಶಿವರುದ್ರಪ್ಪ ಬರೆದ ಕವಿತೆ: “ನನ್ನ ಹಣತೆ”
Posted by ಕೆಂಡಸಂಪಿಗೆ | Sep 22, 2025 | ದಿನದ ಕವಿತೆ |
“ಏನೆಂದು ಹಾಡುವುದು ಕಹಿಯ ಗೂಡು ಕಟ್ಟೆ ಒಡೆದಿರುವಾಗ ಯಾರು ಕೇಳರು ಅಪಸ್ವರವನ್ನು
ಈ ನೆನಪುಗಳಿಗೇನು ಗೊತ್ತು ಮನ ಮಧುರವಾಗದೆ ಸಮಾಧಿಯಾಯಿತೆಂದು.
ಹಂಗು ತೊರೆದ ಮೇಲೆ ಬಂಧಗಳು ಬಳುವಳಿ ನೀಡಲಾರವು ಸಾಕಿ
ಆ ಭಾವನೆಗಳಿಗೇನು ಗೊತ್ತು
ಬಂಧುತ್ವ ಬರಡಾಗಿ ಜ್ವಾಲೆಯಾಯಿತೆಂದು”-ವಾಣಿ ಭಂಡಾರಿ ಬರೆದ ಗಜಲ್
Posted by ಕೆಂಡಸಂಪಿಗೆ | Sep 17, 2025 | ದಿನದ ಕವಿತೆ |
“ಲೋಕದ ಅಳಲಿನ ಮುಂದೆ ನಮ್ಮದೆಂಥ ದುಃಖ..
ಇಷ್ಟಿಷ್ಟೇ ತಾಳ್ಮೆಯನ್ನೆ ಗುಣಿಸುವುದಿದೆ ಬದುಕಿನ ತುಂಬಾ
ಅಂಬೆಗಾಲಿಡುತ್ತಲೇ ಬರುತ್ತದೆ ಅಷ್ಟಷ್ಟೇ ನೋವು
ತುಸು ನಷ್ಟವನ್ನೇ ಹೊರುವುದಿದೆ ಬದುಕಿನ ತುಂಬಾ…” -ದೇವರಾಜ್ ಹುಣಸಿಕಟ್ಟಿ ಬರೆದ ಗಜಲ್
Posted by ಕೆಂಡಸಂಪಿಗೆ | Sep 14, 2025 | ವಾರದ ಕಥೆ, ಸಾಹಿತ್ಯ |
ಅದರ ಚಿತ್ರವನ್ನೇ ಮನದಲ್ಲಿ ತುಂಬಿಕೊಂಡು ಮನೆಗೆ ವಾಪಸ್ಸಾದೆ. ಯಾವ ಜೀವ ವಿಜ್ಞಾನಿಗಳ ಕಣ್ಣಿಗೂ ಕಾಣಿಸಿಕೊಳ್ಳದೇ ನಿಗೂಢವಾಗಿದ್ದ ಈ ಪ್ರಾಣಿ, ಕಾಡು ಬಿಟ್ಟು ನನ್ನ ತೋಟಕ್ಕೆ ಬರಲು ಕಾರಣವೇನಿರಬಹುದೆಂದು ಚಿಂತಿಸುತ್ತಾ ಹಾಸಿಗೆಯ ಮೇಲೆ ಮಲಗಿದೆ. ಹಾಗೆಯೇ ಅದರ ಆಹಾರ ಪದ್ಧತಿಗಳನ್ನು ಜ್ಞಾಪಿಸಿಕೊಳ್ಳತೊಡಗಿದೆ. ಮಲಬಾರ್ ಸೀವೆಟ್ ಕೆಲ ಚಿಕ್ಕ ಪ್ರಾಣಿಗಳನ್ನೂ, ಮೊಟ್ಟೆಗಳನ್ನೂ ಇಷ್ಟಪಟ್ಟು ತಿನ್ನುತ್ತದೆಂದು ಎಲ್ಲೋ ಓದಿದ್ದು ನೆನಪಾಯಿತು. ಸಂಜೆ ಹೆಗ್ಗಾಲುವೆಯ ಬಳಿ ಕಟ್ಟ ಹಾಕಲು ಹೋಗಿದ್ದಾಗ ಒಂದೆರಡು ಹುಂಡುಕೋಳಿಗಳು ಸರ‍್ರೆಂದು ಸದ್ದು ಮಾಡುತ್ತಾ, ನನ್ನನ್ನೇ ಗಾಬರಿಗೊಳಿಸಿ ಓಡಿಹೋಗಿದ್ದವು.
ನಾನು ಮೆಚ್ಚಿದ ನನ್ನ ಕಥಾಸರಣಿಯಲ್ಲಿ ವೇಣುಗೋಪಾಲ್ ಗಾಂವ್ಕರ್ ಕತೆ ‘ಅಡಿಯಪ್ಪ ಮತ್ತು ಸಿವೆಟ್’
Posted by ಕೆಂಡಸಂಪಿಗೆ | Sep 7, 2025 | ವಾರದ ಕಥೆ, ಸಾಹಿತ್ಯ |
ವಾಪಸ್ಸು ಬರುವಾಗ ಎದುರು ಸಿಕ್ಕವರ ಮುಖ ನೋಡಿದ್ದಕ್ಕಿಂತ ಅವರ ಕಾಲುಗಳನ್ನು ನೋಡಿದ್ದೇ ಹೆಚ್ಚು. ನೂರಾರು ರಕ್ತದ ಜಾಡು ಬಿಟ್ಟರೆ ಕಪ್ಪು ಬಣ್ಣದ ಬಾಟಾ ಚಪ್ಪಲಿಯ ಸುಳಿವೇ ಸಿಗಲಿಲ್ಲ. ಮನೆಗೆ ಬಂದಾಗ ಅಪ್ಪ ಅದೇ ಜಾಗದಲ್ಲಿ ಕೂತು ಬೀಡಿ ಹಚ್ಚಿದ್ದನು. ‘ಹೋಗಿತ್ ಹೋಯ್ತು ಬಿಡಪ್ಪೋ, ಇನ್ನೊಂದ್ ಜೊತೆ ಹೊಸಾದ್ ತಂದ್ರೆ ಆಯ್ತು. ಅದ್ಕೆ ಹಿಂಗ್ ಕಟ್ಗಟ್ಲೆ ಬೀಡಿ ಸೇದ್ಕೊಂಡಿದ್ರೆ ಆ ಚಪ್ಲಿ ಬತ್ತದಾ ನಿನ್ನುಡ್ಕಂಡು’ ಎಂದೆ. ಉತ್ತರವೇನೂ ಬರಲಿಲ್ಲ.
ವಿನಯ ಗುಂಟೆ ಕಥಾ ಸಂಕಲನ “ಬನದ ಕರಡಿ” ಕೃತಿಯ ಒಂದು ಕತೆ “ಅಪ್ಪನ ಚಪ್ಪಲಿ” ನಿಮ್ಮ ಈ ಭಾನುವಾರದ ಓದಿಗೆ
ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!
ಇಲ್ಲಿ ಕ್ಲಿಕ್ಕಿಸಿದರೂ ಸಾಕುಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ
ಇಲ್ಲಿ ಕ್ಲಿಕ್ ಮಾಡಿ
