Advertisement
ರವಿ ಮಡೋಡಿ

ಬೆಂಗಳೂರಿನಲ್ಲಿ ಸಾಫ್ಟ್‌ವೇರ್ ಎಂಜಿನಿಯರ್ ಆಗಿರುವ ರವಿ ಮಡೋಡಿ ಅವರು ಶಿವಮೊಗ್ಗ ಜಿಲ್ಲೆ ಹೊಸನಗರ ತಾಲ್ಲೂಕು ನಿಟ್ಟೂರು ಬಳಿಯ ಮಡೋಡಿ ಗ್ರಾಮದವರು. ಹವ್ಯಾಸಿ ಯಕ್ಷಗಾನ ಕಲಾವಿದರಾಗಿ ಕಳೆದ 15 ವರ್ಷಗಳಿಂದ ಯಕ್ಷಗಾನ ಕ್ಷೇತ್ರದಲ್ಲಿ ತೊಡಗಿಸಿಕೊಂಡಿದ್ದಾರೆ. ರಾಜ್ಯ ಮತ್ತು ಹೊರ ರಾಜ್ಯಗಳಲ್ಲಿ 500ಕ್ಕೂ ಹೆಚ್ಚು ಪ್ರದರ್ಶನಗಳನ್ನು ತಮ್ಮ ತಂಡದೊಂದಿಗೆ ನೀಡಿದ್ದಾರೆ. ‌‘ಯಕ್ಷಸಿಂಚನ’ ಎನ್ನುವ ಹವ್ಯಾಸಿ ಯಕ್ಷಗಾನ ಸಂಸ್ಥೆಯ ಸ್ಥಾಪಕರಲ್ಲಿ ಒಬ್ಬರಾದ ಅವರು ಸಂಸ್ಥೆಯ ಈಗಿನ ಅಧ್ಯಕ್ಷರೂ ಹೌದು.  ಯಕ್ಷಗಾನ ಕ್ಷೇತ್ರಕ್ಕೆ ತಂತ್ರಜ್ಞಾನದ ಲಾಭ ದೊರಕಿಸಿಕೊಡುವಲ್ಲಿ ಕಾರ್ಯಗಳನ್ನು ಮಾಡುತ್ತಿದ್ದಾರೆ. ಸಾಹಿತ್ಯ ಕ್ಷೇತ್ರದಲ್ಲಿಯೂ ಕೆಲಸ ಮಾಡುತ್ತಿರುವ ಇವರು ಮಲೆನಾಡಿನ ಒಂದು ಶತಮಾನದ ಯಕ್ಷಗಾನ ಇತಿಹಾಸವನ್ನು ತಿಳಿಸುವ  ‘ಮಲೆನಾಡಿನ ಯಕ್ಷಚೇತನಗಳು’  ಎಂಬ ಪುಸ್ತಕವನ್ನು ಹೊರತಂದಿದ್ದಾರೆ. ಇದರ ಜೊತೆಗೆ ʼನಮ್ಮಲ್ಲೇ ಮೊದಲು’, ’ಪ್ರಸಂಗಕರ್ತ ಶ್ರೀಧರ ಡಿ.ಎಸ್’ ಇವರ ಇತರ ಕೃತಿಗಳು. ಅವರ ಹಲವಾರು ಕಥೆ, ಲೇಖನ, ಲಲಿತ ಪ್ರಬಂಧಗಳು ಹಲವು ಪತ್ರಿಕೆಗಳಲ್ಲಿ ಪ್ರಕಟಗೊಂಡಿವೆ.

ಮುಂದಿನ ಬಿಡಾರಕ್ಕೆ ನಡೆಯುವ ಹಾದಿಯೇ ವಿಶ್ವವಿದ್ಯಾಲಯ

ಆಟ ಆಗುವಲ್ಲಿಗೆ ಮೇಳ ಹೋಗಿ ಆಟ ಆಡಿಸಲು ವೀಳ್ಯ ಕೊಡುವವರ ಮನೆಯಲ್ಲಿ “ತಾಳಮದ್ದಳೆ” ಹಾಕುವ ಕ್ರಮ ಹಿಂದೆ ಇತ್ತು.  ಆಟ ಆಡಿಸುವವರ ಮನೆಯಲ್ಲಿ ದೀಪ ಸ್ಥಾಪನೆ ಮಾಡಿ ಭಾಗವತರು ಮತ್ತು ಮದ್ದಳೆಗಾರರು ಕುಳಿತು ಭಾಗವತರು ಒಂದೆರಡು ದೇವರ ಸ್ತುತಿಯನ್ನು ಹಾಡುತ್ತಿದ್ದರು. ಹೀಗೆ ತಾಳಮದ್ದಳೆ ಹಾಕುವ ಮೂಲಕ, ಅಂದಿನ ಆಟ ಆಡಿಸಬೇಕೆಂದು ಸೇವಾಕರ್ತರಲ್ಲಿ  ಮನವಿ ಮಾಡುವುದು,  ಭಾಗವತರ ಸಾಮರ್ಥ್ಯ ಮತ್ತು ನೈಪುಣ್ಯ ನೋಡಿ ಆ  ಮನೆಯವರು ವೀಳ್ಯವನ್ನು ನಿರ್ಧರಿಸುವುದು ಇದೇ ಸಂದರ್ಭದಲ್ಲಿ. ಕೃಷ್ಣಪ್ರಕಾಶ್ ಉಳಿತ್ತಾಯ ಬರೆಯುವ ‘ಬಲಿಪ ಮಾರ್ಗ’ ಸರಣಿಯ ಬರಹ.

Read More

ಹಿಮ್ಮೇಳದಲ್ಲಿ ಮದ್ದಳೆ, ಖಂಜೀರ, ಪುಂಗಿ ಇತ್ಯಾದಿ

ಖಂಜೀರ ಪೂರ್ಣಪ್ರಮಾಣದಲ್ಲಿ  ಯಕ್ಷಗಾನ ಹಿಮ್ಮೇಳದ ಭಾಗವಾಗಿತ್ತು. ಭಾಗವತರ ಹಿಂದೆ ಒತ್ತು ಮದ್ದಳೆಗಾರರು ಅಥವಾ ಅಲ್ಪ ಸ್ವಲ್ಪ ತಾಳ ಜ್ಞಾನ ಇದ್ದವರು, ಖಂಜೀರವನ್ನು ನಿಂತು ನುಡಿಸುತ್ತಿದ್ದರು. ಹಿರಿಯ ಬಲಿಪ ನಾರಾಯಣ ಭಾಗವತರು ಮೇಳ ತಿರುಗಾಟದಲ್ಲಿ ಖಂಜೀರದ ನುಡಿಸುವಿಕೆಯೊಂದಿಗೆ ಭಾಗವತಿಕೆಯನ್ನು ಮಾಡಿದ್ದರು. ಖಂಜೀರದ ಬಳಕೆ ಕಾಲಕ್ರಮೇಣ ನಿಂತಿತು. ಹೊಸ ವಾದ್ಯಗಳು ಹಿಮ್ಮೇಳವನ್ನು ಸೇರಿಕೊಂಡ ಬಗ್ಗೆ ‘ಬಲಿಪ ಮಾರ್ಗ’ ಸರಣಿಯಲ್ಲಿ ಕೃಷ್ಣ ಪ್ರಕಾಶ್ ಉಳಿತ್ತಾಯ ಬರೆದಿದ್ದಾರೆ.

Read More

ಬಲಿಪಮಾರ್ಗದಲ್ಲೊಂದು ‘ಬಿಡ್ತಿಗೆ’ ವೃತ್ತಾಂತ

ಅಜ್ಜ ಬಲಿಪ ನಾರಾಯಣ ಭಾಗವತರು ಯಕ್ಷಗಾನದ ಹಾಡುಗಳಿಗೆ ಬಿಡ್ತಿಗೆ ಅತ್ಯಂತ ಅಗತ್ಯವೆಂದು ಹೇಳುತ್ತಿದ್ದರು. ಈ ಕುರಿತಾಗಿ ಕುರಿಯ ವಿಠಲ ಶಾಸ್ತ್ರಿಗಳಿಗೂ ಮತ್ತು ಭಾಗವತರಿಗೂ ವಾದಗಳು ನಡೆದವುಂಟು. ಅಜ್ಜನಿಗೂ ಹಿಂದಿನ ಕಾಲದ ಭಾಗವತರುಗಳ ಕ್ರಮದಲ್ಲಿ  ಕರುಣರಸದ ಪದ್ಯಗಳಿಗೂ ಬಿಡಿತವನ್ನು ನಾವು ಕಾಣಬಹುದಿತ್ತು. ಅಜ್ಜ ಬಲಿಪರ ಹಾಡುಗಾರಿಕೆಯ ಶೈಲಿಯಲ್ಲಿ ಅನೇಕ ಪದ್ಯಗಳು ಇಂದು ಇಲ್ಲವಾಗಿದೆ. ವಿಶೇಷವಾದ ಮಟ್ಟುಗಳನ್ನು ಹೊಸತಲೆಮಾರು…

Read More

ವಿಪರೀತ ನಡೆಯ ಅಜ್ಜ ಬಲಿಪರೂ, ಅವರ ವಿಪರೀತ ಪ್ರೀತಿಯೂ

ಅಜ್ಜ ಬಲಿಪರು ಸ್ವಲ್ಪ ವಿಕ್ಷಿಪ್ತ ಸ್ವಭಾವದವರೂ ಹೌದು. ನಾಲ್ಕಾರು ದಿನಗಳ ಕಾಲು ಉಪವಾಸ ಇರಬಲ್ಲರು, ನಾಲ್ಕಾರು ದಿನದ ಭೋಜನವನ್ನು ಒಮ್ಮೆಗೇ ಮಾಡಬಲ್ಲರು. ಬಡತನ, ತಿರುಗಾಟದ ಬದುಕು ಅವರದ್ದಾಗಿತ್ತು. ಹಾಗಾಗಿ ಜೀವನ ಕ್ರಮದಲ್ಲಿಯೂ ಈ ರೀತಿಯ ವ್ಯತ್ಯಾಸಗಳಿದ್ದವು. ಅದರಿಂದ ಅವರ ಆರೋಗ್ಯವೂ ಏರುಪೇರಾದುದುಂಟು. ಆದರೆ ಅವರಿಗೆ ಮೊಮ್ಮಗನ ಕಂಠ ಶಕ್ತಿಯ ಮೇಲೆ…

Read More

ಪ್ರಸಂಗ ರಚನೆಯ ಕೌಶಲಕ್ಕೆ ಸಿಕ್ಕಿದ ವೇದಿಕೆ ‘ಪೊಳಲಿ’

ಕಿರಿಯ ಬಲಿಪರು ಪೂರ್ಣ ಪ್ರದರ್ಶನವೊಂದರಲ್ಲಿ ಮೊದಲು ಭಾಗವತಿಕೆ ಮಾಡಿದ್ದು ಪೊಳಲಿ ಎಂಬಲ್ಲಿ.  ಪ್ರಸಂಗ ಹೊಸದಾಗಿದ್ದರೆ ಆಟಕ್ಕೆ ಅವಕಾಶ ನೀಡಬಹುದು ಎಂದು ಆಡಿಸುವವರ ಷರತ್ತು.  ಪ್ರದರ್ಶನದ ದಿನದಂದೇ, ಹೊಸ  ಕಥೆಯನ್ನು ಪೊಳಲಿಯ ಶೀನಪ್ಪ ಹೆಗಡೆಯವರು ಹೇಳುವುದು ಎಂದು ನಿರ್ಧಾರವಾಯಿತು.  ಬಲಿಪರು ನಿರ್ಧಾರವಾದ ಆಟವನ್ನು ಯಾವುದೇ ಕಾರಣಕ್ಕೂ ಬಿಡುವಂತಿಲ್ಲ ಎಂದು ತೀರ್ಮಾನಿಸಿ ಬಳಿಯ ಅಂಗಡಿಯಲ್ಲಿ…

Read More

ಜನಮತ

ಈ ಯುಗಾದಿ ಹಬ್ಬಕ್ಕೆ...

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಪುನರಪಿ-ಇಹ ಸಂಸಾರೆ ಬಹು ದುಸ್ತಾರೆ: ಬಿ. ವಿ. ರಾಮಪ್ರಸಾದ್ ಬರಹ

ಕಾದಂಬರಿ ಮನುಷ್ಯರ ಆಂತರಿಕ ಬೇಗೆಗಳನ್ನು ಹೇಳುವಾಗ “ನೆತ್ತಿ ಸುಡುವ . . . ಬಿರುಬೇಸಿಗೆಯ” ಬೇಗೆಯನ್ನು ನಮ್ಮ ಅನುಭವಕ್ಕೆ ತಾರದೇ ಬಿಡುವುದಿಲ್ಲ; ಆಸ್ಮಾ ದುಃಖದಲ್ಲಿ ಮುಳುಗಿ ಮನೆಯಲ್ಲಿ…

Read More

ಬರಹ ಭಂಡಾರ