ಗರತಿಯ ಹಾಡು ಮತ್ತು ಸ್ತ್ರೀ ದೃಷ್ಟಿಕೋನ: ಲಿಂಗರಾಜ ಸೊಟ್ಟಪ್ಪನವರ್ ಅಂಕಣ
ಜನಪದ ಎನ್ನುವದು ಸ್ತ್ರೀ ಕೇಂದ್ರಿತವಾದ ಭಾವುಕ ನೆಲೆ. ಅವಳ ಹಂಬಲ, ಹತಾಶೆ, ಸಡಗರ ಸಂಕಟಗಳು, ಹಾತೊರಿಕೆ, ಕನವರಿಕೆ ಹಾಗೂ ಪ್ರತಿರೋಧಗಳಿಗೆ ಒಂದು ಅಭಿವ್ಯಕ್ತಿ ಮಾಧ್ಯಮವಾಗಿ ಅದು ರೂಪಗೊಂಡಿರುವಂತದ್ದಾಗಿದೆ. ಜನಪದ ಧಾರೆಯುದ್ದಕ್ಕೂ ಹೆಣ್ಣನ್ನು ಉತ್ತಮರ ಮಗಳು ಆಗಿಸುವ ಅಭೀಪ್ಸೆ ಒಂದು ಪುರುಷ ಪ್ರಣೀತವಾದ ಅನುಕೂಲಸಿಂಧು ಗರತಿ ಧರ್ಮವನ್ನು ರೂಪಿಸಿದೆ ಮತ್ತೆ ಅದು ಒಂದು ಹೆಣ್ಣಿನ ಮೂಲಕವೆ ಇನ್ನೊಂದು ಹೆಣ್ಣಿಗೆ ಧಾರೆಯೆರೆಯುವಂತೆ ಸಂಯೋಜಿಸಲಾಗಿದೆ.
ಲಿಂಗರಾಜ ಸೊಟ್ಟಪ್ಪನವರ್ ಬರೆಯುವ “ಉತ್ತರದ ಕತೆಗಳು” ಅಂಕಣ