ಶ್ರಾವಣ ಬಂತೂ ನಾಡಿಗೆ….: ಮಹಾಲಕ್ಷ್ಮೀ ಕೆ. ಎನ್. ಬರಹ
ಈ ಹಸಿರ ಬಸಿರ ತಿಳಿಗಾಳಿಯನ್ನು ಉಸಿರಾಡುವವರು ನಾವುಗಳು. ಜೀವರಾಶಿಗಳ ಚಟುವಟಿಕೆಗಳು ಕೂಡ ಹೆಚ್ಚಾಗುತ್ತವೆ. ಪ್ರಕೃತಿ ಮತ್ತು ಜೀವಿಗಳ ನಡುವಿನಲ್ಲಿ ನಡೆಯುವ ಭಾವನಾತ್ಮಕ ಸಂವಾದ ಹೆಚ್ಚಾಗುತ್ತದೆ. ಭೂಮಿಯನ್ನು ಚುಂಬಿಸುವ ಮಳೆರಾಯ, ಅವಕಾಶ ಸಿಕ್ಕಾಗ ಮಳೆಯಲ್ಲೇ ಚೂರು ಬಂದು ಹೋಗುವ ಸೂರ್ಯ. ಅದ್ಭುತ ಋತುಚಕ್ರ. ನಿಸರ್ಗದ ಕಲಾತ್ಮಕತೆಗೆ ಜೀವವೈವಿಧ್ಯದ ಸಂಗಮಕ್ಕೆ ಕಾರಣವಾಗಿದೆ ಈ ಶ್ರಾವಣ ಮಾಸ. ಪ್ರಕೃತಿಯ ಹೃದಯಧ್ವನಿಯ ಹಬ್ಬ. ಮರದ ರೆಂಬೆ ಕೊಂಬೆಗಳಲ್ಲಿ ಅಳಿಲುಗಳು ಮಾತಿಗಿಳಿಯುತ್ತವೆ, ಕೆಲವೊಮ್ಮೆ ಕೀಟಗಳು ಬಂದು ಇಣುಕಿ ಹೋಗುತ್ತವೆ.
ಶ್ರಾವಣ ಸಂದರ್ಭದಲ್ಲಿ ಪ್ರಕೃತಿಯಲ್ಲಾಗುವ ಬದಲಾವಣೆಗಳ ಕುರಿತು ಮಹಾಲಕ್ಷ್ಮೀ ಕೆ. ಎನ್. ಬರಹ ನಿಮ್ಮ ಓದಿಗೆ