ಕಿರಾಣಿ ಅಂಗಡಿ ಮತ್ತು ಅಮ್ಮ ಎಂಬ ಬೆರಗು: ಮಾರುತಿ ಗೋಪಿಕುಂಟೆ ಸರಣಿ
ಬಂದಿದ್ದವರು ಅನುಕೂಲದ ಕುಟುಂಬದವರು. ಮನೆಯ ಗೌರವ ಉಳಿಸುವ ಸಂಕಷ್ಟ ಅಮ್ಮನಿಗೆ. ಇಂತಹ ಸಂದರ್ಭದಲ್ಲಿ ಅಮ್ಮ ಅದ್ಹೇಗೆ ನಿಭಾಯಿಸುತ್ತಿದ್ದಳು ಎಂಬುದು ನನಗೆ ಯಾವಾಗಲೂ ಬೆರಗು. ಇಂದಿಗೂ ಅಮ್ಮ ಅಂದ್ರ ಅದೊಂದು ತಣಿಯಲಾರದ ಆಶ್ಚರ್ಯ. ಅವರು ಆ ದಿನ ಮನೆಯಲ್ಲಿಯೆ ಉಳಿದರು. ಬೆಳಗ್ಗೆ ಅವರಿಗೆ ಅಮ್ಮ ಒಗ್ಗರಣೆಯ ಅನ್ನವನ್ನು ಮಾಡಿದ್ದಳು. ಅವರು ತುಂಬಾ ಚೆನ್ನಾಗಿದೆ ಎಂದು ಉಪಾಹಾರ ಸೇವಿಸಿ ಊರಿಗೆ ಹೊರಟುಹೋದರು.
ಮಾರುತಿ ಗೋಪಿಕುಂಟೆ ಬರೆಯುವ “ಬಾಲ್ಯದೊಂದಿಗೆ ಪಿಸುಮಾತು” ಸರಣಿಯ ಇಪ್ಪತೈದನೆಯ ಕಂತು
