ಎಂ.ವಿ. ಶಶಿಭೂಷಣ ರಾಜು ಬರೆದ ಈ ಭಾನುವಾರದ ಕತೆ
ಬತ್ತಿ ಹೋಗಿರುವ ನದಿಯ ದಡದಲ್ಲಿ ಕುಳಿತು ಹರಿಯುವ ನದಿಯನ್ನು ಕಲ್ಪಿಸಿಕೊಂಡು ಸುಖಪಡುತ್ತಿದ್ದ ಕುಮದ್ವತಿಗೆ, ಎಲ್ಲವೂ ವೇಗವಾಗಿ ಮನಸಿನಲಿ ಸುಳಿದುಹೋದವು. ಕೆಲವು ಸಲ ಊರಿನವರ ಮಾತುಗಳಿಗೆ ಬೇಸರವಾದರೂ, ಪ್ರೀತಿಸುವ ಗಂಡನಿಂದ ಎಲ್ಲವೂ ಮರೆಯುತ್ತಿದ್ದಳು. ಸೊಸೆಯ ಒಳ್ಳೆಯತನ ಕಂಡಮೇಲೆ ಅತ್ತೆ ಇನ್ನೂ ಹತ್ತಿರವಾಗಿದ್ದರು. ಸೊಸೆಗೆ ಯಾವುದೇ ತೊಂದರೆ ಆಗದಂತೆ, ತನ್ನ ಮಗನಿಂದ ಅವಳಿಗೆ ಅನ್ಯಾಯ ಆಯಿತಲ್ಲ ಎನ್ನುವ ಪಾಪ ಪ್ರಜ್ಞೆಯಿಂದ ಸೊಸೆಯನ್ನು ಇನ್ನೂ ಪ್ರೀತಿಯಿಂದ ನೋಡಿಕೊಳ್ಳುತ್ತಿದ್ದಳು.
ಎಂ.ವಿ. ಶಶಿಭೂಷಣ ರಾಜು ಬರೆದ ಈ ಭಾನುವಾರದ ಕತೆ “ಕುಮದ್ವತಿ”
