ಹೋರಾಟದ ಬದುಕಿನ ಹೆಜ್ಜೆ ಗುರುತುಗಳು…
ಗೌಡನ ಮಗ ಮನೆಗೆ ಬಂದು ‘ಬೆಲ್ಲ ಮಾಡಿದ್ದ ದುಡ್ಡು ಕೊಡ್ರಿ, ಇಲ್ಲಂದ್ರ ಅದರ ಬದಲಿಗಿ ಈ ಆಕಳ ಮತ್ತು ಕರಾ ಎಳಕೊಂಡು ಹೋಗ್ತಿನಿ’. ಎಂದೇಳುವ ಮಾತುಗಳಲ್ಲಿ ಜಮೀನ್ದಾರಿಕೆಯ ದರ್ಪದದೊಟ್ಟಿಗೆ ಜಾತಿ ಪ್ರತಿಷ್ಠೆ ಅಹಂಕಾರ ವ್ಯಕ್ತಗೊಂಡಿರುವುದನ್ನು ನೋಡಬಹುದು. ಬಲಿಷ್ಟರಲ್ಲದ ದಲಿತರು ಅನಿವಾರ್ಯವಾಗಿ ಶೋಷಣೆಗೆ ಒಳಗಾಗುತ್ತಾರೆ. ತಮ್ಮ ದುಡಿಮೆಯ ಫಲವನ್ನು ಕೂಡ ದಕ್ಕಿಸಿಕೊಳ್ಳದ ಸ್ಥಿತಿಯಲ್ಲಿ ಅಸ್ಪೃಶ್ಯ ಸಮುದಾಯ ಇದೆ. ಭಾರತೀಯ ಸಾಮಾಜಿಕ ವ್ಯವಸ್ಥೆಯಲ್ಲಿ ಅಮಾನವೀಯ ಸಂಗತಿಗಳನ್ನು ಕಾಲಾನುಕಾಲಕ್ಕೆ ಪೋಷಿಸುವ ಸಾಂಪ್ರದಾಯಿಕ ಮನಸ್ಥಿತಿಯ ಬಗೆಗೆ ಈ ಕೃತಿಯಲ್ಲಿ ಅನೇಕ ನಿದರ್ಶನಗಳಿವೆ.
ಎಚ್.ಟಿ. ಪೋತೆ ಬರೆದ “ಬಯಲೆಂಬೊ ಬಯಲು” ಬಯೋಪಿಕ್ ಕಾದಂಬರಿಯ ಕುರಿತು ಪಿ. ನಂದಕುಮಾರ್ ಬರಹ