Advertisement
ಕೆಂಡಸಂಪಿಗೆ

ಕೆಂಡಸಂಪಿಗೆ ಸಂಪಾದಕೀಯ ತಂಡದ ಆಶಯ ಬರಹಗಳು ಇಲ್ಲಿರುತ್ತವೆ

ಮಾಳದ ಎರಡು ಕನಸುಗಳು,ಮಾಳದ ಎರಡು ಸಂಜೆಗಳು:ಪ್ರಸಾದ್ ಶೆಣೈ ಕಥಾನಕ

“ಮನೆಗೊಂದು ಹೆಣ್ಣಿದ್ದರೆ ಮನೆಗೆ ಮನೆಯೇ ಆ ಹೆಣ್ತನದ ವಿಶೇಷ ಮುಗ್ದತೆ ಆವರಿಸಿಕೊಳ್ಳುತ್ತದೆ. ಬೇಕಿದ್ದರೆ ನೋಡಿ ಒಂದೆರಡು ದಿನ ಮನೆಯಲ್ಲಿ ಅಮ್ಮನಿಲ್ಲದಿದ್ದರೆ ಮುಗೀತು. ಆ ಮನೆಯಲ್ಲಿ ಆವರಿಸಿಕೊಳ್ಳುವ ಮೌನ, ಸಪ್ಪೆ ಸಪ್ಪೆ ಎನ್ನಿಸುವಂತಹ ನೋಟ, ಅಂತದ್ದೇನೂ ಅಂದವಿಲ್ಲದೇ ಒಟ್ಟಾರೆ ಸಾಗುವ ದಿನಚರಿ, ಪ್ರೀತಿಯ ರುಚಿ ಇರದೇ ಹೊಟ್ಟೆಗೆ ಸುಮ್ಮನೇ ಹೋಗಿ ಕೂರುವ ನಾವೇ ಮಾಡಿದ ಅಡುಗೆ, ಇವೆಲ್ಲ ಅರ್ಥವಿಲ್ಲದ ಹಾಡಿನಂತೆ ತನ್ನ ಪಾಡಿಗೆ ಸಾಗುತ್ತದೆ.ಅದೇ ಅಮ್ಮನಿದ್ದರೆ ಅಲ್ಲಿ ಮೌನವಿರುವುದಿಲ್ಲ”

Read More

ಬಾಡುವಿನ ಹಿಂದೆ ಕಾಡು ಹಾದಿಯಲ್ಲಿ: ಪ್ರಸಾದ್ ಶೆಣೈ ಕಥಾನಕ

“ಮಳೆ ಬೀಳುತ್ತಿರುವಾಗ ಮಳೆಗೆ ನೆನೆದು ಕಾಡು ಸುತ್ತೋದು ಎಷ್ಟು ಚೆಂದವೋ, ಮಳೆ ನಿಂತ ಮೇಲೆ ಅಳು ನಿಲ್ಲಿಸಿದ ಮಗುವಿನ ಹಾಗಿರುವ ಮುಗ್ದ ಕಾಡನ್ನು ನೋಡುವ, ಅನುಭವಿಸುವ, ಮೈಯೆಲ್ಲಾ ವಿಚಿತ್ರ ಥಂಡಿಯಲ್ಲಿ ಕಳೆದುಹೋಗುವ ಕ್ಷಣವಿದೆಯೆಲ್ಲಾ ಅದರಷ್ಟು ಸುಖ ಜೋರಾಗಿ ಮಳೆ ಬಂದರೂ ಆಗಲಿಕ್ಕಿಲ್ಲ ಅನ್ನಿಸುತ್ತದೆ ಕೆಲವೊಮ್ಮೆ. ಹಾವಿನಷ್ಟೇ ಸಪೂರಾದ ದಾರಿ, ಸುತ್ತಲೂ ದಟ್ಟ ಮರಗಳ ಹಸುರು ಜೋರಾದ ಗಾಳಿಗೆ ಉದುರಿ ಬಿದ್ದ ಹೂವ ರಾಶಿ..”

Read More

ವಾಲಿಕುಂಜದ ಕಾಡಲ್ಲಿ ಮಳೆ ಮಾತಾಡಿತು: ಪ್ರಸಾದ್ ಶೆಣೈ ಮಾಳ ಕಥಾನಕ

“ಮಧ್ಯಾಹ್ನದ ಉರಿಬಿಸಿಲ ನಡುವೆ ತೂರಿಬರುತ್ತಿದ್ದ ಕಪ್ಪುಮೋಡಗಳ ಮಬ್ಬು ಬೆಳಕಿನಲ್ಲಿ ಬೆಟ್ಟ ಏರಿದೆವು. ಹತ್ತುತ್ತಾ, ಹತ್ತುತ್ತಾ ಕೆಳಗೆ ಆಳವಾದ ದಾರಿ, ಮೇಲೆ ಹತ್ತಿರಾದ ಬೆಟ್ಟದ ಸಾಲುಗಳು, ಅಲ್ಲೇ ಮೇಲೆ ಹತ್ತಿದಾಗ “ನನ್ನಷ್ಟು ಎತ್ತರ ನೀವಲ್ಲ, ನಾನೇರಿದೆತ್ತರಕೆ ನೀನೇರಬಲ್ಲೆಯಾ?”

Read More

ದೇವರ ಗುಂಡಿಯಲ್ಲಿ ಬಿಸಿಲಿಗೂ ಮಳೆಯ ನೆನಪಿತ್ತು: ಪ್ರಸಾದ್ ಶೆಣೈ ಮಾಳ ಕಥಾನಕ

ನಮ್ಮ ಪಕ್ಕದಲ್ಲೇ ಬೀಸುಗಾಳಿಗೆ ಬಾಗಿ ಬಾಗಿ ಮಾವಿನ ಮರದ ಗೆಲ್ಲೊಂದು ಢಮಾರ್ ಎಂದು ಮುರಿದು ಬಿದ್ದಂತೆ, ಸುರಿದು, ಸುರಿದು, ಕೊನೆಗೊಮ್ಮೆ ಮಳೆ ನಿಂತು ಇಡೀ ಕಾಡಿಗೇ ಕಾಡೇ ಮಹಾಮೌನಕ್ಕೆ ಶರಣಾದಂತೆ, ನಾವೀಗ ಬಿಸಿಲನ್ನೇ ತಿಂದುಕೊಂಡು ಕೂತಿದ್ದರೂ, ಈ ಕಾಡು ನೋಡುತ್ತ ಮಳೆಗಾಲವೇ ಕಣ್ಣ ಬೊಗಸೆಗೆ ಬಂದಂತಾಯಿತು.

Read More

ಹಬ್ಬಿದಾ ಬಂಜಾರುಮಲೆಯ ಮಧ್ಯದೊಳಗೆ: ಪ್ರಸಾದ್ ಶೆಣೈ ಕಥಾನಕ

“ಕಾಡಿನ ಇಂತಹ ಯಾವುದೋ ಒಂದು ಜಲಪಾತ, ಒಂದೇ ಒಂದು ನೋಟ, ಒಂದೇ ಒಂದು ಹೂವು, ನಮ್ಮನ್ನು ಅಮೂರ್ತವಾಗಿಸಿ ಅಲ್ಲೇ ನಿಲ್ಲಿಸಿಬಿಡುತ್ತದೆ. ಈ ಕಾಡಿನ ಜಲಪಾತವೂ ಹಾಗೇ ನಿಲ್ಲಿಸಿಬಿಟ್ಟಿತು. ಒಮ್ಮೆ ಆಕಾಶದ ನೀಲಿಯನ್ನು ಸ್ವಲ್ಪ ಬಾಡಿಗೆಗೆ ತಗೊಂಡು ಪೂರ್ತಿ ನೀಲಿಯಾಗಿ ಹರಿಯುತ್ತಿದ್ದಂತೆ ಕಂಡಿತು.”

Read More

ಜನಮತ

ಬದುಕು...

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ