ಎಸ್. ರಾಮಮೂರ್ತಿ ಬರೆದ ಈ ಭಾನುವಾರದ ಕಥೆ “ಜಾದೂ”
‘ಈಗ ನೋಡಿ ಅಸಲೀ ಝಗಡ ಷುರೂ. ಹಾವು ಮುಂಗೂಸ್ ಝಗಡʼ ಅಂದ. ಬುಟ್ಟಿ ಮುಚ್ಚಳ ತೆಗೆದ. ಹಾವು ಹೆಡೆ ಎತ್ತಿತು. ಪುಂಗಿ ಊದುತ್ತಾ ಮುಷ್ಠೀನ ಹಿಡಿದು, ಕಚ್ಚಲಿ ಅನ್ನೋ ಥರ ಆಡಿಸಿದ. ಅದು ಕಚ್ಚೋಕೆ ಬಂದರೆ ಮುಷ್ಠೀನ್ನ ಹಿಂದಕ್ಕೆಳೆದುಕೋತಾ ಇದ್ದ. ಇವನು ಹಾವು ಮುಂಗುಸಿ ಜಗಳ ತೋರಿಸ್ತಾ ಇಲ್ಲವಲ್ಲ. ಜಗಳ ತೋರಿಸ್ರೀ ಅಂತ ಕೇಳ್ಳಾ? ಬೇಡಪ್ಪಾ. ಆಮೇಲೆ ನನಗಿನ್ನೇನಾದರೂ ಮಾಡಿಬಿಟ್ಟರೆ ಕಷ್ಟ. ಅವನ ಸಹವಾಸಾನೇ ಬೇಡ. ಕಾಯ್ತಾ ನಿಂತೆ. ‘ಜೋರ್ ಸೇ ತಾಲಿ ಬಜಾವೋʼ ಅಂದ.
ಎಸ್. ರಾಮಮೂರ್ತಿ ಬರೆದ ಈ ಭಾನುವಾರದ ಕತೆ “ಜಾದೂ” ನಿಮ್ಮ ಓದಿಗೆ