ಸರ್ಕೀಟ್: ದಿಕ್ಕು ತೋಚದ ಬದುಕಿನ ಸಿಕ್ಕುಗಳು: ಶರೀಫ್ ಕಾಡುಮಠ ಬರಹ
ಒಂದು ಮಗುವಿನ ವರ್ತನೆ ಅಸಹಜವಾಗಿ ಕಾಣಿಸುವಂತೆ, ಪುಟ್ಟ ಹುಡುಗನೊಬ್ಬ ಈ ಪರಿ ನಟಿಸುವುದು ಖಂಡಿತ ಸಾಮಾನ್ಯ ಸಂಗತಿಯಲ್ಲ. ಚಿತ್ರದುದ್ದಕ್ಕೂ ಜೆಫ್ರನ್ ಎಷ್ಟು ತೀವ್ರವಾಗಿ ಕಾಡುತ್ತಾನೆ ಎಂದರೆ, ಆತನ ಚೇಷ್ಟೆ, ಅಕ್ವೇರಿಯಂ ಒಡೆದು ಹಾಕುವ ದೃಶ್ಯ, ಟ್ರೇ ಪೂರ್ತಿ ಮೊಟ್ಟೆ ಎತ್ತಿಕೊಂಡು ಹೋಗಿ ಟೆರೇಸ್ ಮೇಲೆ ಕೂತು ಹಾಯಾಗಿ ಕೆಳಗೆ ಎಸೆಯುವ ದೃಶ್ಯ, ತಾನಿಚ್ಛಿಸಿದ್ದು ಈ ಕ್ಷಣವೇ ಬೇಕು ಎಂದು ಬಿಡದೇ ಹಠ ಮಾಡಿ ಕೂಗಾಡುವ ದೃಶ್ಯ, ಅವನ ಮಿತಿಯಿಲ್ಲದ ತರಲೆಗಳೆಲ್ಲವೂ ನಮ್ಮ ಸಹನೆಯನ್ನೂ ಮೀರಿಸುವಷ್ಟು.
ಮಲಯಾಳಂನ “ಸರ್ಕೀಟ್” ಚಿತ್ರದ ಕುರಿತು ಶರೀಫ್ ಕಾಡುಮಠ ಬರಹ
