ತಾರಿದಂಡೆ – ಕಳೆದು ಹೋದ ಬದುಕಿನ ಸುಂದರ ಯಾನ: ಶ್ವೇತಾ ಹೊಸಬಾಳೆ ಬರಹ
ಈ ಮುತ್ತಿನಂಥಾ ಮಾತುಗಳ ಸರಣಿ ಮುಂದಿನ ಬರಹದಲ್ಲೂ ಮಾಲೆಯಾಗಿ ನಾಲ್ಕು ಸಾಲು ಗೀಚಿಯೋ, ಫೇಸ್ಬುಕ್, ವಾಟ್ಸ್ ಅಪ್‌ಗಳ ಸ್ಟೇಟಸ್‌ಗಳಲ್ಲಿ ಬರುವ ಕವನಗಳನ್ನೋದಿಕೊಂಡು ಬೀಗುವವರ ಕಿವಿಹಿಂಡಿದೆ. “ಕವಿತೆ ಒಂದು ಜೀವನ ದೃಷ್ಟಿ, ಎಷ್ಟೆಲ್ಲಾ ಸಂವೇದನಾಶೀಲರ ಪ್ರಜ್ಞಾ ಪ್ರವಾಹದ ಮನೋಸಂಗಮದಿಂದ ಅರಳುವ ಜೀವನ ಕಲೆ” ಎನ್ನುತ್ತಾ ಪರಂಪರೆಯನ್ನು ಅರಿತಿರುವುದರ ಜೊತೆಗೆ ಕವಿತಾರಚನೆಗೆ ಆಳವಾದ ಧ್ಯಾನ ಅಧ್ಯಯನದ ಅಗತ್ಯವಿದೆ ಎನ್ನುವದನ್ನು ಹೇಳುತ್ತದೆ. ಅವರ ಪುಟ್ಟ ಪುಟ್ಟ ವಾಕ್ಯಗಳನ್ನು ಓದುವುದೇ ಖುಷಿ.
ಜಯಂತ ಕಾಯ್ಕಿಣಿಯವರ “ತಾರಿದಂಡೆ” ಕೃತಿಯ ಕುರಿತು ಶ್ವೇತಾ ಹೊಸಬಾಳೆ ಬರಹ