ಗೋಕುಲವ ತೊರೆದ ಗೋಪಾಲಕರು: ಸುಧಾ ಆಡುಕಳ ಅಂಕಣ
ಸಂಸಾರ ತಾಪತ್ರಯದಲ್ಲಿ ಸಿಲುಕಿದವರಿಗೆ ಮುಂಚಿತವಾಗಿ ಸಾವಿರದ ಲೆಕ್ಕದಲ್ಲಿ ಹಣವನ್ನು ನೀಡುವ ಅವನು ಸಮಯ ನೋಡಿ ಮನೆಯಲ್ಲಿರುವ ಹುಡುಗರನ್ನು ಕೆಲಸಕ್ಕೆಂದು ಪೇಟೆಗೆ ಕರೆದುಕೊಂಡು ಹೋಗತೊಡಗಿದ. ಭಾಷೆ, ಬಸ್ಸು ಏನೊಂದೂ ತಿಳಿಯದ ಪುಟ್ಟ ಮಕ್ಕಳು ನಗರದ ಮೂಲೆಯಲ್ಲಿರುವ ಯಾವುದೋ ಹೋಟೆಲಿನಲ್ಲಿ ತಟ್ಟೆ, ಲೋಟ ತೊಳೆಯುತ್ತ, ಪೆಟ್ಟು ಕೊಟ್ಟರೆ ತಿನ್ನುತ್ತ, ಕಾರಿಡಾರಿನ ಮೂಲೆಯಲ್ಲಿಯೇ ಮಲಗುತ್ತ ದಿನಕಳೆಯತೊಡಗಿದರು.
ಸುಧಾ ಆಡುಕಳ ಬರೆಯುವ “ಹೊಳೆಸಾಲು” ಅಂಕಣದ ಇಪ್ಪತ್ತೊಂದನೆಯ ಕಂತು ನಿಮ್ಮ ಓದಿಗೆ