ಹಾಳು ಮೂಳು ಮತ್ತು ನಾವುಗಳು…: ಸುಮಾ ಸತೀಶ್ ಸರಣಿ
ಕಾರೆಕಾಯಿ ಬೆಂಕಿ ಪೆಟ್ಯಾಗಿಕ್ಕಿ ಸಣ್ಣ ಸಣ್ಣ ಕಲ್ಲು ಹಾಕಿ ಮುಚ್ಚಿಕ್ಕಿದ್ರೆ ಬಂಗಾರ್ದ ಬಣ್ಣ ಬತ್ತಿತ್ತು. ಬುಡುಮೆ ಕಾಯಿ ನೋಡಾಕೆ ತೊಂಡೆ ಹಣ್ಣಿನ್ ತರುಕ್ಕೇ ಇದ್ರೂ ವಸಿ ಬುಡ್ಡಕ್ಕೆ, ಹಸೂರ್ಗೆ ಇರ್ತಿತ್ತು. ತೊಂಡೆಹಣ್ಣು ಕಾಯಿ ಹಸೂರ್ಗೆ ಇದ್ರೂವೆ ಹಣ್ಣಾದ್ ಮ್ಯಾಕೆ ಕೆಂಪುಕ್ಕೆ ಹೊಳೀತಿತ್ತು. ಇಸ್ಕೂಲ್ ಮಗ್ಗುಲಾಗೆ ಒಂದು ಶರಬತ್ ಹಣ್ಣಿನ ಗಿಡ ಇತ್ತು. ಅದ್ರಾಗೆ ಹಣ್ಣು ಬಿಟ್ಟರೆ ಸಾಕೂಂತ ನೂರಾರು ಕಣ್ಣು ಕಾಯ್ತಿದ್ವು. ಸಿಕ್ಕಿದೋರ್ಗೆ ಸೀರುಂಡೆ.
ಸುಮಾ ಸತೀಶ್ “ರಂಗಿನ ರಾಟೆ” ಸರಣಿಯಲ್ಲಿ ಬಾಲ್ಯಕಾಲದ “ಹಾಳೂ ಮೂಳು” ತಿನಿಸುಗಳ ಕುರಿತ ಬರಹ ನಿಮ್ಮ ಓದಿಗೆ