ಕಂಕುಳಲ್ಲಿ ಕತೆ ಪುಸ್ತಕ, ಎದೆಯಲ್ಲಿ ಕಥಾಸಾಗರ: ಸುಮಾ ಸತೀಶ್ ಸರಣಿ
ಅಂಗೆ ನೋಡಿದ್ರೆ ನಮ್ಮ ನಾಗೂ ಅತ್ತೆಗೆ ಅಕ್ಷರಾನೇ ತಲೆಗೆ ಹತ್ತಲಿಲ್ಲ. ಕೊನೆಗೆ ಅವರಿಗೆ ಸಂಗೀತ ಕಲಿಸಲು ಹಾರ್ಮೋನಿಯಂ ಮೇಷ್ಟ್ರನ್ನ ಕರೆಸಿದ್ರು. ಆ ಮೇಷ್ಟ್ರು ಮೊದಲು ಕಾಗುಣಿತ ತಿದ್ದಿಸಿ ಆಮೇಲೆ ಸಂಗೀತ ಹೇಳಿಕೊಟ್ಟಿದ್ದರು. ನಮ್ಮತ್ತೆಯ ಅಲ್ಪಪ್ರಾಣ ಮಹಾಪ್ರಾಣಗಳಿಗೆ ಜೀವ ತುಂಬಿದರು ಮೇಷ್ಟ್ರು. ಮೊದಲೇ ಕಲ್ಪನಾ ಚತುರೆ ಅತ್ತೆ. ಅಕ್ಷರಾನೂ ಬಂದ ಮೇಲೆ ಕತೆ ಬರೇಯೋಕೆ ಶುರು ಮಾಡಿದ್ರು. ಇಷ್ಟೇ ಅಲ್ಲ, ಅಕ್ಕಂದಿರ ಮಕ್ಕಳನ್ನು ಬಳಿ ಕೂರಿಸಿಕೊಂಡು ಸ್ವಾರಸ್ಯಕರವಾಗಿ ಕತೆ ಕಟ್ಟಿ ಹೇಳುವ ಕಲೆ ಇವರಲ್ಲಿ ಸೊಗಸಾಗಿತ್ತು.
ಸುಮಾ ಸತೀಶ್ “ರಂಗಿನ ರಾಟೆ” ಸರಣಿ
