ನಡು ಮಧ್ಯಾಹ್ನದ ಕಣ್ಣಿನ ಕಾವ್ಯ…: ವಿ.ಚಂದ್ರಶೇಖರ ನಂಗಲಿ ಬರಹ
‘ಅಡುಗೆಯಾಟದ ಹುಡುಗಿ’ ಬಾಲ್ಯದ ಅಡುಗೆಯಾಟವೇ ಕ್ರಮೇಣ ಆ ಹುಡುಗಿಯ ಜೀವನಶೈಲಿಯಾಗಿ ಬದಲಾಗುವ ಮತ್ತು ವ್ಯಕ್ತಿತ್ವ ವಿಕಸನದ ಅವಕಾಶಗಳು ಮುಚ್ಚಿಹೋಗುವ ಬಗೆಯೊಂದು ಅನಾವರಣಗೊಳ್ಳುತ್ತಾ , ಕಡೆಗೆ ಅಮ್ಮನಿಂದ ಮಗಳಿಗೆ ಹಸ್ತಾಂತರವಾಗುವ “ಚುಚ್ಚುಗ”ವು ಬರಿಯ ಅಡುಗೆಯ ಆಯುಧವಾಗಿ ಉಳಿಯದೆ, ಹೆಣ್ಣಿನ ಪಾಲಿಗೆ ಪುರುಷ ಪ್ರಧಾನ ಸಮಾಜದ “ಚುಚ್ಚುಗ”ವಾಗುವ ರೂಪಕ ಆಗಿಬಿಡುತ್ತದೆ.
ಆಶಾ ಜಗದೀಶ್ ಕವನ ಸಂಕಲನ “ನಡು ಮಧ್ಯಾಹ್ನದ ಕಣ್ಣು” ಕುರಿತು ಡಾ. ವಿ.ಚಂದ್ರಶೇಖರ ನಂಗಲಿ ಬರಹ