ಕಥೆಯಾದಳು ಸೀತಕ್ಕ… : ವಿನಾಯಕ ಅರಳಸುರಳಿ ಅಂಕಣ
ಸೀತಕ್ಕನ ಗಂಡನಿಗೆ ಕೊನೆಗೊಂದು ದಿನ ಡಿಸ್ಚಾರ್ಜಾಯಿತು. ಮನೆಗೆ ಹೋದ ಮೇಲೂ ಸೀತಕ್ಕ ಆಗಾಗ ಕರೆ ಮಾಡುತ್ತಿದ್ದರು. ಆಕೆಯ...
Read MorePosted by ವಿನಾಯಕ ಅರಳಸುರಳಿ | Sep 30, 2025 | ಸಂಪಿಗೆ ಸ್ಪೆಷಲ್ |
ಸೀತಕ್ಕನ ಗಂಡನಿಗೆ ಕೊನೆಗೊಂದು ದಿನ ಡಿಸ್ಚಾರ್ಜಾಯಿತು. ಮನೆಗೆ ಹೋದ ಮೇಲೂ ಸೀತಕ್ಕ ಆಗಾಗ ಕರೆ ಮಾಡುತ್ತಿದ್ದರು. ಆಕೆಯ...
Read MorePosted by ವಿನಾಯಕ ಅರಳಸುರಳಿ | Sep 16, 2025 | ಅಂಕಣ |
ಮೊದಲಿನಿಂದ ಖಾಲಿಯೇ ಇರುವ ಕುರ್ಚಿಗಿಂತ ನಡುವೆ ಒಂದಷ್ಟು ಹೊತ್ತು ಯಾರೋ ಕುಳಿತಿದ್ದು ಎದ್ದು ಹೋದ ಆಸನ ಹೆಚ್ಚು ಖಾಲಿಯಾಗಿ ಕಾಣುತ್ತದೆ. ನವ ಮಾಸ ತುಂಬಿದ ಬಳಿಕ ಜೀವದ ಬದಲಿಗೆ ಶೂನ್ಯವನ್ನು ಹಡೆದ ಒಡಲು ಹೊಸದಾದ ಖಾಲಿತನಕ್ಕೀಡಾಗುತ್ತದೆ. ಬಂದೇ ಬರುವನೆಂದು ನಂಬಿದ್ದ ಅತಿಥಿ.. ಬರಲೇ ಬೇಕಿದ್ದ ಅತಿಥಿ.. ಅವನ ಸ್ವಾಗತಕ್ಕೆ ಏನೆಲ್ಲ ತಯಾರಾಗಿತ್ತು! ತಂದಿಟ್ಟುಕೊಂಡ ಮಲ್ಲಿಗೆ ಮೆದುವಿನ ಟೊಪ್ಪಿಯಿತ್ತು. ಮೊಲದ ತುಪ್ಪಳದಂಥಾ ಅಂಗಿಯಿತ್ತು. ಅದರ ಅಂಚಲ್ಲಿ ಕೈಯಲ್ಲೇ ಹೊಲಿದ ಕಸೂತಿಯಿತ್ತು.
ವಿನಾಯಕ ಅರಳಸುರಳಿ ಹೊಸ ಅಂಕಣ “ಆಕಾಶ ಕಿಟಕಿ” ಇಂದಿನಿಂದ, ಮಂಗಳವಾರಗಳಂದು, ಹದಿನೈದು ದಿಗಳಿಗೊಮ್ಮೆ ನಿಮ್ಮ ಕೆಂಡಸಂಪಿಗೆಯಲ್ಲಿ ಪ್ರಕಟವಾಗಲಿದೆ
Posted by ವಿನಾಯಕ ಅರಳಸುರಳಿ | Aug 5, 2025 | ಸಂಪಿಗೆ ಸ್ಪೆಷಲ್ |
ಕೊಂಚ ಸ್ಥಿತಿವಂತರಾಗಿದ್ದ ಪಕ್ಕದ ಮನೆಯ ಅಣ್ಣನ ಮಗನ ಬರ್ತಡೇ ಪಾರ್ಟಿಯಲ್ಲಿ ತಿನ್ನಲು ಸಿಕ್ಕ ಚಿಕ್ಕ ಕೇಕ್‌ನ ತುಣುಕನ್ನೇ ಸ್ವರ್ಗ ಲೋಕದ ತಿನಿಸೆಂಬಂತೆ ಅದೊಂದು ದಿನ ತಿಂದಿದ್ದೆವು. ಇನ್ನೊಂದು ಪೀಸ್ ಬೇಕು ಎಂಬ ಆಸೆಯನ್ನು ಬಾಯಲ್ಲೇ ಇಟ್ಟುಕೊಂಡು ಕೈ ತೊಳೆದಿದ್ದೆವು. ಯಾರೋ ತುಂಡೊಂದನ್ನು ಬೇಡವೆಂದು ತಟ್ಟೆಯಲ್ಲೇ ಬಿಟ್ಟಾಗ ಅದು ನಮಗೆ ಸಿಗುವುದೇನೋ ಎಂದು ಆಸೆಯಿಂದ ಕಾದಿದ್ದೆವು. ಇಂತಿಪ್ಪ ಅಪೂರ್ಣ ಬಯಕೆಗಳ ಬಾಲ್ಯವನ್ನೇ ಕಳೆದ ತಮ್ಮನಿಗೆ ಈಗಲೂ ಈ ಪಟ್ಟಣದ ವಿಶೇಷ ತಿಂಡಿಗಳ ಬಗ್ಗೆ ಆಸೆಯಿದ್ದರೆ ಅದರಲ್ಲಿ ಯಾವ ತಪ್ಪಾಗಲೀ, ಅತಿಯಾಸೆಯಾಗಲೀ ನನಗೆ ಕಾಣಲಿಲ್ಲ.
ವಿನಾಯಕ ಅರಳಸುರಳಿ ಬರೆದ ಲಲಿತ ಪ್ರಬಂಧ ನಿಮ್ಮ ಓದಿಗೆ
Posted by ವಿನಾಯಕ ಅರಳಸುರಳಿ | Feb 14, 2022 | ಸಂಪಿಗೆ ಸ್ಪೆಷಲ್ |
ನಾನೆಷ್ಟೇ ಬೇಡವೆಂದುಕೊಂಡರೂ ನಮ್ಮ ಶಾಲೆಯ ಕಡೆಯಿಂದ ಕನಿಷ್ಠ ವರ್ಷಕ್ಕೊಮ್ಮೆಯಾದರೂ ಆಸ್ಪತ್ರೆಗೆ ತಪಾಸಣೆಗೆ ಕರೆದೊಯ್ಯುತ್ತಿದ್ದರು. ಸಾಲದ್ದಕ್ಕೆ ಅದು ಬೇರೆ ಚುಚ್ಚುಮದ್ದುಗಳ ಕಾಲ! ಸರ್ಕಾರೀ ಶಾಲೆಯಾದ್ದರಿಂದ, ಸರ್ಕಾರದ್ದೇ ನಿರ್ದೇಶನದ ಮೇರೆಗೆ ಹೇಳದೇ ಕೇಳದೇ ನಮ್ಮನ್ನು ಇದ್ದಕ್ಕಿದ್ದಂತೆ ಆಸ್ಪತ್ರೆಗೆ ನಡೆಸಿಕೊಂಡುಹೋಗಿ ವೈದ್ಯರ ಕೋಣೆಯ ಹೊರಗೆ ಸಾಲಾಗಿ ನಿಲ್ಲಿಸಿಬಿಡುತ್ತಿದ್ದರು. ನನಗಂತೂ ಈ ಇಂಜಕ್ಷನ್ ಎಂದರೆ ಇನ್ನಿಲ್ಲದ ಭಯ. ಎಂದಿನಂತೆ ನಡೆಯುತ್ತಿದ್ದ ತರಗತಿಯ ಮಧ್ಯೆ ಇದ್ದಕ್ಕಿದ್ದಂತೆ ಒಳಪ್ರವೇಶಿಸಿದ ಮುಖ್ಯಶಿಕ್ಷಕರು ‘ಎಲ್ಲರೂ ಸಾಲಾಗಿ ಆಸ್ಪತ್ರೆಯ ಕಡೆ ನಡೆಯಿರಿ. ಯಾರೂ ಗಲಾಟೆ ಮಾಡಬಾರದು’ ಎಂದು ಉಗ್ರ ದನಿಯಲ್ಲಿ ಘೋಷಿಸಿಬಿಟ್ಟರು.
Read Moreನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ
editor@kendasampige.comಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ
ಇಲ್ಲಿ ಕ್ಲಿಕ್ ಮಾಡಿ
