Advertisement

Category: ಅಂಕಣ

ಕವಿತೆಯೊಂದರ ಸಾಲಿನಿಂದ ಕಳಚಿಕೊಂಡ ಅಕ್ಷರ: ಡಾ. ಲಕ್ಷ್ಮಣ ವಿ.ಎ ಅಂಕಣ

“ಇವರ ವೈಯಕ್ತಿಕ ಪರಿಚಯ ಈಗಷ್ಟೇ, ಇತ್ತೀಚೆಗೆ ಆದದ್ದು. ನೀನಾಸಮ್ ನ ಶಿಬಿರವೊಂದರಲ್ಲಿ ಮೊಟ್ಟ ಮೊದಲಬಾರಿಗೆ ಮುಖತಃ ಭೇಟಿಯಾಗಿದ್ದು. ಅಲ್ಲಿ ಅವರು ಬಂದಿದ್ದು ಒಬ್ಬ ಕಿರಿಯ ಲೇಖಕರನ್ನು ಮಾತನಾಡಿಸಿಕೊಂಡು ಹೋಗಲು. ಅಷ್ಟೊಂದು ಸಾಹಿತ್ಯ ಕಲೆ ಕವಿತೆಯ ಮೇಲೆ ಪ್ರೀತಿಯಿರುವ ಮನುಷ್ಯನೊಬ್ಬ ಮಾತ್ರ ತನಗಿಂತ ಕಿರಿಯರನ್ನು ಹೀಗೆ ಹುಡುಕಿಕೊಂಡು ಬರಲು ಸಾಧ್ಯ.”

Read More

ಏನೊಂದೂ ಅರಿವಾಗದ ಅಯೋಮಯತೆಯಲ್ಲಿ: ಆಶಾ ಜಗದೀಶ್ ಅಂಕಣ

“ಹೆಣ್ಣು ತನ್ನ ಮನೆಯ, ಇರುವ ಪರಿಸರದ ಸೌಂದರ್ಯವನ್ನು ಹೆಚ್ಚಿಸುವ ರೀತಿಯಲ್ಲೇ ತನ್ನಿರುವಿಕೆಯಿಂದಲೇ ಆ ಪರಿಸರಕ್ಕೊಂದು ಸೌಂದರ್ಯ ದಕ್ಕುವಂತೆ ಮಾಡಬಲ್ಲವಳು. ಅದೇ ವೇಳೆ ತನ್ನ ಒಳಗಿನಲ್ಲೂ ಸೌಂದರ್ಯದ ಚಿಲುಮೆ ಬತ್ತದಿರುವಂತೆ ಕಾಪಿಟ್ಟುಕೊಳ್ಳಬಲ್ಲವಳು. ಇದೊಂದು ಮಾತು, ಯಾರಿಗಾದರೂ ಗೊತ್ತಿರಬಹುದು… ಗಂಡು ಕಟ್ಟಡವನ್ನು ಕಟ್ಟುತ್ತಾನೆ, ಹೆಣ್ಣು ಅದನ್ನು ಮನೆಯನ್ನಾಗಿ ಮಾಡುತ್ತಾಳೆ ಎಂದು.”

Read More

ಹಲ್ಲಿ, ಹಾವು, ಚೇಳುಗಳ ಸ್ವರ್ಗ!: ಡಾ.ವಿನತೆ ಶರ್ಮಾ ಅಂಕಣ

“ಹೇಳಿಕೇಳಿ, ಆಸ್ಟ್ರೇಲಿಯಾದ ಪರಿಸರ ಬಹು ಸೂಕ್ಷ್ಮವಾದದ್ದು, ಬೇರೆ ಖಂಡಗಳಿಗಿಂತ ಭಿನ್ನವಾದದ್ದು. ಪರದೇಶದಿಂದ ಆಮದಾಗಿ ಬಂದ ಕಪ್ಪೆ ಈ ದೇಶದ ಸ್ವಾಭಾವಿಕ ಪರಿಸರಕ್ಕೆ ಮತ್ತು ಜೀವಚರಗಳಿಗೆ ದುಃಸ್ವಪ್ನವಾಗಿಬಿಟ್ಟಿತು. ಈ ಕಪ್ಪೆಯ ವಂಶಾಭಿವೃದ್ದಿಯನ್ನ ತಡೆಗಟ್ಟಲು, ಅದನ್ನು ಧೈರ್ಯದಿಂದ ಎದುರಿಸಿ ನುಂಗಿ ನೀರುಕುಡಿಯಲು ಇಲ್ಲಿ ಯಾವುದೇ ಪರಭಕ್ಷಕ ಪ್ರಾಣಿ ಇರಲಿಲ್ಲ. ಕಪ್ಪೆಗೆ ಆಸ್ಟ್ರೇಲಿಯಾದಲ್ಲಿ ಯಾವ ಎದುರಾಳಿಯೂ ಇಲ್ಲವಾಗಿ, ಇಲ್ಲಿನ ಸ್ವಾತಂತ್ರ್ಯ ಅದಕ್ಕೆ ತುಂಬಾ ಇಷ್ಟವಾಗಿಹೋಯ್ತು.”

Read More

ಶಾಂತಿ ಮರದ ಬಳಿ ಜಂಗಮ ಮುಳ್ಳು ಪೊದೆ: ಮುನವ್ವರ್ ಜೋಗಿಬೆಟ್ಟು ಅಂಕಣ

“ನಾನು ಅಗರಿನ ಕಡೆಗೆ ತಿರುಗಿದ್ದೆ. ಇನ್ನೇನು ಹೆಜ್ಜೆ ಇಡಬೇಕೆನ್ನುವಷ್ಟರಲ್ಲಿ ಎದುರಿಗೆ ಚಲಿಸುವ ಮುಳ್ಳು ಪೊದೆ. ಹೆದರಿ ನಾನು ಹಿಂದೆ ಹೆಜ್ಜೆ ಇಡುವ ತುರಾತುರಿಯಲ್ಲಿ ಒಣ ಕಟ್ಟಿಗೆ ತುಂಡೊಂದು ಕಾಲಿಗೆ ಸಿಕ್ಕಿ ಲಟ್ಟೆಂದು ಮುರಿಯಿತು. ಸದ್ದು ಕೇಳಿದೊಡನೆ ಆ ಮುಳ್ಳು ಪೊದೆಯತ್ತ ಓಡುತ್ತಾ ಕಾಡಿನೊಳಗೆ ಅಂತರ್ಧಾನವಾಯಿತು. ಸುಮಾರು ಹೊತ್ತು ಹಾಗೆಯೇ ಕಲ್ಲಾಗಿ ನಿಂತೆ. ಮುಂದೆ ಹೋಗಲೂ ಹೆದರಿಕೆ…”

Read More

ಶರತ್ಕಾಲದ ಇಂಗ್ಲಿಷ್ ದಸರಾ: ಯೋಗೀಂದ್ರ ಮರವಂತೆ ಅಂಕಣ

“ನವರಾತ್ರಿ ಆರಂಭ ಆದಾಗಿನಿಂದಲೂ ಭಾರತೀಯ ಜನರ ಅಸ್ತಿತ್ವ ಇರುವ ಇಲ್ಲಿನ ಊರುಗಳೆಲ್ಲೆಲ್ಲ ದೇವಿಯರಿಗೆ ಹೂವು ಹಾರ ಅಲಂಕಾರ ಆರತಿಯ ಅರ್ಚನೆ ಆಗುತ್ತಿದೆ. ಬಣ್ಣ ಬಣ್ಣದ ಉಡುಗೆ ಉಟ್ಟ, ಆಕರ್ಷಕ ಸಿಂಗಾರ ಮಾಡಿಸಿಕೊಂಡ ದುರ್ಗೆ, ಶಾರದೆ, ಲಕ್ಷ್ಮಿ, ಸರಸ್ವತಿಯರು ಬ್ರಿಟನ್ನಿನ ಊರೂರುಗಳಲ್ಲಿ ಪೂಜೆ ಸ್ವೀಕರಿಸುತ್ತಿದ್ದಾರೆ. ಬ್ರಿಟನ್ನಿನ ಪ್ರತಿ ಪಟ್ಟಣದಲ್ಲೂ ಭಾರತೀಯರಿದ್ದಾರೆ ಮತ್ತು ಅಲ್ಲೆಲ್ಲ ದಸರಾದ ಸಂಭ್ರಮ ಕಂಡಿದೆ.”

Read More

ಜನಮತ

ಈ ಯುಗಾದಿ ಹಬ್ಬಕ್ಕೆ...

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಹಳ್ಳಿ ಹಾದಿಯ ಹೂವಿನ ಘಮದಲ್ಲಿ ಬಾಲ್ಯದ ಪರಿಮಳ: ಡಾ. ತಿಮ್ಮಯ್ಯ ಶೆಟ್ಟಿ ಬರಹ

ಹಳ್ಳಿ ಹಾದಿಯ ಹೂವು ಕಾದಂಬರಿಯಲ್ಲಿ ಲೇಖಕರು ಒಂಬತ್ತೋ, ಹತ್ತೋ ವರ್ಷದ ಬಾಲಕ ಶಾಮನಾಗಿ ತಮ್ಮ ಅನುಭವದ ಹೂಗಳನ್ನು ತೋರಣವಾಗಿ ಕಟ್ಟಿದ್ದಾರೆ. ಹಳ್ಳಿ ಹಾದಿಯ ಹೂವಿನ ಪರಿಮಳ ಘಮಘಮಿಸಿ…

Read More

ಬರಹ ಭಂಡಾರ