ಭದ್ರಾವತಿ ರಸ್ತೆಗಂಟಿದ ಕೆಮ್ಮಣ್ಣುಗುಂಡಿ ಕತೆಗಳು
ಒಂದೇ ಒಂದು ನಿಮಿಷದ ಹಿಂದಷ್ಟೇ, ಯಾವುದೋ ಆಶ್ರಮವೊಂದರ ಆರಾಮ ವಾತಾವರಣದಂತಿದ್ದ ತರೀಕೆರೆ ಆಸ್ಪತ್ರೆ, ಇದ್ದಕ್ಕಿದ್ದಂತೆ ಬದಲಾಗಿತ್ತು. ಎಮರ್ಜೆನ್ಸಿ ವಾರ್ಡಿನ ಉದ್ದಗಲಕ್ಕೂ ರಕ್ತ ಚೆಲ್ಲಿತ್ತು. ಎತ್ತ ತಿರುಗಿದರೂ ಡಾಕ್ಟರ್, ನರ್ಸ್ಗಳು. ಯಾರು ಏನು ಹೇಳುತ್ತಿದ್ದಾರೆ, ಯಾರಿಗೆ ಹೇಳುತ್ತಿದ್ದಾರೆ, ಯಾರು ಏನು ಮಾಡುತ್ತಿದ್ದಾರೆ ಎಂಬುದೊಂದೂ ಕಣ್ಣಿಗೆ ಅರಿವಾಗದ ಅಯೋಮಯ ಸನ್ನಿವೇಶ.
ಸಹ್ಯಾದ್ರಿ ನಾಗರಾಜ್ ಬರೆಯುವ ಅಂಕಣ ‘ಸೊಗದೆ’

