Advertisement

Category: ಅಂಕಣ

ಐರಿಷ್ ಅಜ್ಜನ ಧರ್ಮಪಾಠಗಳು:ಯೋಗೀಂದ್ರ ಬರೆವ ಇಂಗ್ಲೆಂಡ್ ಲೆಟರ್

“ಐರಿಷರಿಗೂ ಆಂಗ್ಲರಿಗೂ ಇರುವ ಚಾರಿತ್ರಿಕ ವೈಷಮ್ಯಕ್ಕೋ ಅಥವಾ ಅವನ್ನು ಮೀರಿ ವಿಮರ್ಶಿಸುವ ಸಾಮರ್ಥ್ಯ ಈತನಿಗಿರಬಹುದಾದದ್ದಕ್ಕೋ ಗೊತ್ತಿಲ್ಲ, ಈತನಿಂದ ಹೆಚ್ಚು ಟೀಕೆಗೊಳಗಾಗುವವರು ಆಂಗ್ಲರು ಮತ್ತೆ ಲಂಡನ್ ಸಂಸತ್ತಿನಲ್ಲಿ ಕುಳಿತು ಆಡಳಿತ ನಡೆಸುವವರು. ಇವನಿಂದ ಪಾಠ ಹೇಳಿಸಿಕೊಳ್ಳಬೇಕಾದ ಆಂಗ್ಲರು ಯಾರೂ ಇವನ ಸುತ್ತಮುತ್ತ ಇಲ್ಲದ ಕಾರಣ ಇವನ ನೀತಿ ಧರ್ಮ ಭೋದೆ ಎಲ್ಲವೂ ಪರದೇಸಿ, ವಲಸಿಗ ನನ್ನ ಮೇಲೆಯೇ ಕರುಣಿಸಲ್ಪಡುತ್ತದೆ.”

Read More

ಸಿಡ್ನಿ ಮಾರ್ಡಿ ಗ್ರಾ- “ಒಂದು ಭಿನ್ನ ಹಾದಿ”: ಡಾ. ವಿನತೆ ಶರ್ಮಾ ಅಂಕಣ

“ಎಲ್ಲರಿಂದಲೂ ಬೇರ್ಪಟ್ಟು ಒಬ್ಬಂಟಿಯಾಗಿ ನಿಂತದ್ದು ಆ ವ್ಯಕ್ತಿ. ಏಕೆಂದರೆ ಅದು ಆ ವ್ಯಕ್ತಿ ಅವನು ಎಂಬ ವ್ಯಕ್ತಿತ್ವನ್ನು, ಅಸ್ಮಿತೆಯನ್ನು ಬಿಟ್ಟು ಅವಳು ಎಂದು ಆಗಲು ಮಾರ್ಪಾಡಾಗುತ್ತಿದ್ದ ಹಂತದ ಕಥೆ. ಆ ಒಂದು ವಿಶಿಷ್ಟ ಹಂತದಲ್ಲಿ ಅವಳು ಸಹಾಯ ಬಯಸಿ ಪ್ರಾಜೆಕ್ಟ್ ಸೇರಿದ್ದಳು. ಇನ್ನೂ ಹರೆಯದ ವಯಸ್ಸು. ಕಾನೂನು ಪ್ರಕಾರ ಇನ್ನೂ ಅವನು ಎಂಬ ಲಿಂಗವೇ ಚಾಲ್ತಿಯಲ್ಲಿತ್ತು.”

Read More

ಕಾಯುತ್ತಲೇ ಇರುವ ಸ್ವರ್ಗದ ಬಾಗಿಲು: ಇ ಆರ್ ರಾಮಚಂದ್ರನ್ ಕಥಾನಕ

“ರಾತ್ರಿ 1 ಗಂಟೆಯ ಸಮಯಕ್ಕೆ ನಮ್ಮ ಟೆಲಿಫೋನ್ ಕೂಗಿತು. ಅಷ್ಟು ಹೊತ್ತಿಗೆ ಬಂದ ಕಾಲ್ ಗೆ ಹೆದರಿ ಹಲೋ ಅಂದೆ. ಸಿನ್ಹಾ ಲೈನಿನಲ್ಲಿ. ಆತ ಗಾಭರಿಯಿಂದ , ‘ಸರ್ಕಾರ್ ಗೆ ಹಾರ್ಟ ಅಟ್ಯಾಕ್ ಆಗಿದೆ. ಬೇಗ ಬನ್ನಿ’ ಎಂದ. ಎಂತಹ ಪರಿಸ್ಥಿತಿಗೆ ತಯಾರಾಗಿದ್ದರೂ ಜೀವನದಲ್ಲಿ ಎಷ್ಟೋ ಸಲ ಅನೀರೀಕ್ಷಿತವಾಗಿ, ತಿರುವು ಬರುತ್ತೆ; ಜೊತೆಗೆ ಜಂಘಾಬಲ ಉಡುಗಿಹೋಗುತ್ತೆ.”

Read More

ನಡೆದಷ್ಟೂ ಮುಗಿಯದ ದಾರಿಯ ಬೆನ್ನೇರಿ…: ರೂಪಶ್ರೀ ಕಲ್ಲಿಗನೂರ್ ಅಂಕಣ

“ಬಿಸಿಲಿನ ದಂಡನೆಯನ್ನು ಲೆಕ್ಕಿಸದೇ ಹಾಗೆ ನಿಂತಿದ್ದ ನನಗೆ ನನ್ನ ಇರವಿನ ಇರವಿರ ಅರಿವು ಬಂದದ್ದು ಪಾದಗಳು ಉರಿಯತೊಡಗಿದಾಗಲೇ. ಆ ಸಮುದ್ರಕ್ಕೆ ನನ್ನ ಮೇಲೆ ಅದೆಷ್ಟು ಒಲವೋ. ಕೆಂಡದಂತಾಗಿದ್ದ ಪಾದಗಳನ್ನು ಕಡಲೇ ಬಂದು ಆಗಾಗ ಮುಟ್ಟಿ, ತಣ್ಣನೆಯ ಮುತ್ತಿಟ್ಟು ಹೋಗುತ್ತಿತ್ತು. “ಅಬ್ಬಾ ಇಂಥದ್ದೊಂದು ಸಮುದ್ರಾನ ನೋಡದೇ ಸತ್ತವನೇ ಪಾಪಿ ಇರಬಹುದೇನೋ” ಅಂದುಕೊಂಡೆವು ನಾವಿಬ್ಬರೂ.”

Read More

ಜಾತಿ ಕೆಟ್ಟ ಅಳಿಲಿನ ಅಂತ್ಯ:ಮುನವ್ವರ್ ಪರಿಸರ ಕಥನ

“ಒಮ್ಮೆ ಮನೆಯಲ್ಲಿ ಕಿಟಕಿಯ ಹೊರಗೆ ನೋಡುತ್ತ ಕುಳಿತಿದ್ದ ನನಗೆ ಆ ದೃಶ್ಯ ಕಂಡಿತ್ತು. ಮನೆಯ ಬೇಲಿಗೆ ಬಾಗಿ ನಿಂತ ಹಲಸಿನ ಮರದಲ್ಲಿ ಒಂದು ಹಣ್ಣಿನೆಡೆಯಿಂದ ಸಣ್ಣಗಿನ ತಲೆ ಆಗಾಗ ಇಣುಕಿದಂತೆ ಕಾಣುತ್ತಿತ್ತು. ಯಾವುದೋ ಹಾವು ಇರಬೇಕೇನೋ ಅಂದು ಕೊಂಡು ಸಾಕಷ್ಟು ಹತ್ತಿರ ಹೋದೆ. ನೋಡಿದರೆ ಹಣ್ಣಾಗಿದ್ದ ಹಲಸನ್ನು ಒಂದು ತೂತು ಮಾಡಿ, ಎರಡು ಅಳಿಲುಗಳು ತಿಂದು ಹಾಕಿ ಎರಡು ರಂಧ್ರಕೊರೆದು ಇಣುಕುತ್ತಿದ್ದವು.”

Read More

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ