ಮೂಳೆ ಮಾಂಸದ ತಡಿಕೆ: ಸುಧಾ ಆಡುಕಳ ಅಂಕಣ
ಇವಳ ಜತೆಯಲ್ಲಿ ನಡೆಯುವ ಗೆಳತಿಯರು ಮೈ ಕೈ ತಾಗಿಸಿಕೊಳ್ಳದೇ ದೂರದೂರವೇ ನಡೆಯುವಾಗ ನೀಲಿಗೆ ಅಳುವೇ ಬಂದಂತಾಗಿತ್ತು. “ನಾ ಹೇಳದಿದ್ರೆ ನಿಮಗೆಲ್ಲ ನಾ ಮುಟ್ಟು ಅಂತ ಗೊತ್ತಾಗ್ತಾನೇ ಇರಲಿಲ್ಲ. ದಿನಾ ಶಾಲೇಲಿ ಅದೆಷ್ಟು ಹುಡುಗಿರು ಮುಟ್ಟಾಗಿ ಬರ್ತಾರೋ ಗೊತ್ತಿದ್ಯಾ?” ಎಂದು ಅವರನ್ನು ತಿದ್ದಲು ನೋಡಿದಳು. ಅದಕ್ಕವರು ಜಗ್ಗದೇ, “ಗೊತ್ತಾಗದಿದ್ರೆ ದೋಷ ಇಲ್ಲಾಂತ ನಮ್ಮಜ್ಜಿ ಹೇಳಿದಾರೆ. ಗೊತ್ತಾಗಿಯೂ ಮೈಲಿಗೆಯಾದ್ರೆ ಅದು ನಮ್ಮ ತಪ್ಪು.” ಎಂದು ಬೇರೆಯದೇ ವಾದ ಹೂಡಿದರು. ಬಸ್ ಹತ್ತಿದಾಗಲೂ ತನ್ನ ಸೀಟಿನಲ್ಲಿ ಪರಚಯದವರ‍್ಯಾರೂ ಕುಳಿತುಕೊಳ್ಳದಿದ್ದಾಗ ನೀಲಿ ಈ ಹುಡುಗಿಯರೆಲ್ಲ ಇಡಿಯ ಶಾಲೆಗೆ ಈ ವಿಷಯವನ್ನು ಡಂಗೂರ ಸಾರದಿದ್ದರೆ ಸಾಕೆಂದುಕೊಂಡಳು.
ಸುಧಾ ಆಡುಕಳ ಬರೆಯುವ “ಹೊಳೆಸಾಲು” ಅಂಕಣ