Advertisement

Category: ಅಂಕಣ

ಕಷ್ಟವನ್ನೇ ಬದುಕಿನ ಗುರುವೆನ್ನಬಹುದೇ?

ಕಷ್ಟ ಸುಖ ಮನಸ್ಸಿನ ಸ್ಥಿತಿ ಅಷ್ಟೇ. ಈಗಲೂ ಮುಪ್ಪು ಕಷ್ಟ ಅಂದ್ಕೊಂಡ್ರೆ ಕಷ್ಟ. ಸುಖ ಅಂದ್ಕೊಂಡ್ರೆ ನಿರಾಳ. ಅವತ್ತು ಜನ ಕಪ್ಪಗಿದ್ದೀನಿ, ವಿಧವೆ, ನಯ-ನಾಜೂಕಿಲ್ಲ, ನಾಲ್ಕು ಮಕ್ಕಳ ಜವಾಬ್ದಾರಿ ಹಾಗೆ ಹೀಗೆ ಅಂತ ಸಾವಿರ ಮಾತಾಡಿದ್ದರು. ನಾನು ಮಾತಾಡಲಿಲ್ಲ. ಇವತ್ತು ಯಾರಿಗೂ ಉತ್ತರ ಕೊಡುವ ಗಜರಿಲ್ಲ. ನನಗೆ ನನ್ನ ಬದುಕಿನ ಬಗ್ಗೆ, ಬದುಕಿದ ರೀತಿಯ ಬಗ್ಗೆ ಹೆಮ್ಮೆಯಿದೆ. ನಿಶ್ಚಿಂತೆಯಿಂದ ಕಣ್ಮುಚ್ಚುತ್ತೀನಿ. ಇನ್ನೇನು ಬೇಕು?” ಎಂಭತ್ತೇಳು ವರ್ಷದ ಸುಕ್ಕುಗಟ್ಟಿದ ಮೈ, ಗಟ್ಟಿಮೂಳೆಯೊಂದೇ ಕಾಣುವ ಪುಟ್ಟ ದೇಹವನ್ನು ನೇರವಾಗಿಟ್ಟುಕೊಂಡು ಗಟ್ಟಿದನಿಯಲ್ಲಿ ಹೀಗೆ ಗುಡುಗುವಾಗ ಹೃದಯತುಂಬಿ ಬರುತ್ತದೆ.
ಎಸ್‌. ನಾಗಶ್ರೀ ಅಜಯ್‌ ಅಂಕಣ “ಲೋಕ ಏಕಾಂತ”

Read More

ಬ್ಯಾಗಡಿ ಕವರಲ್ಲಿ ಮಡಸಿಟ್ಟಿದ್ದ ಸೀರೆಗಳಂತ ಕನಸು

ಕಟ್ರಗುಳ್ಳಿ ಕಲ್ಲು ಎಂದು ಯಮುನಿಯ ಬಾಯಲ್ಲಿ ನಾಮಕರಣ ಮಾಡಿಸಿಕೊಂಡಿದ್ದ ಟಾರು ರೋಡಿನ ಒತ್ತುವ ಹರಳುಗಳನ್ನು ಬರಿಗಾಲಲ್ಲಿ ತುಳಿಯುತ್ತ ಅಜ್ಜಿ ಮೊಮ್ಮಗಳಿಬ್ಬರು ಬಟ್ಟೆಯಂಗಡಿಗೆ ಕಾಲಿಟ್ಟರು. ಕಸಬರಿಗೆಯಲ್ಲಿ ಕಸವಡೆದು ಬಯಲುಸೀಮೆಯ ಮಳೆಯ ಕಂತ್ರಾಟ ಗೊತ್ತಿದ್ದ ಅಂಗಡಿಯ ಹುಡುಗ ಯಾವುದಕ್ಕೂ ಇರಲಿ ಎಂದು ಅಂಗಡಿ ಮುಂದಿನ ಬಯಲಿಗೆ ನಾಲ್ಕು ಚೊಂಬು ನೀರುಗ್ಗುವ ಶಾಸ್ತ್ರ ಮಾಡುತ್ತಿದ್ದ. ಶೇಟಿ ಲಕ್ಷ್ಮಿ ಫೋಟೋಗೆ ಊದಿನಕಡ್ಡಿ ಬೆಳಗಿ ಕೈಮುಗಿಯುವ ತರಾತುರಿಯಲ್ಲಿದ್ದವನು ಇವರನ್ನು ನೋಡಿ ಐದು ಮಿನಟ್ ಕೂತ್ಗಳ್ರಿ ಎಂದು ತನ್ನ ಪೂಜಾ ಸಿದ್ಧತೆಯನ್ನು ಮುಂದುವರೆಸಿದ. ಇವರು ಬೇರೆ ಆಯ್ಕೆಯೇ ಇಲ್ಲದಂತೆ ಕಾಯುತ್ತ ನಿಂತರು.
ದಾದಾಪೀರ್‌ ಜೈಮನ್‌ ಬರೆಯುವ “ಜಂಕ್ಷನ್‌ ಪಾಯಿಂಟ್” ಅಂಕಣ

Read More

ಬೆಳಕು ಬಣ್ಣದ ಭ್ರಮಾಲೋಕ ​ರಿವರ್ ಫೈರ್

ಬ್ರಿಸ್ಬೇನ್ ಫೆಸ್ಟಿವಲ್ ಎನ್ನುವ ಆನಂದದ ಲೋಕದಲ್ಲಿ ಈ ಬಾರಿ ಉತ್ಸಾಹ ಒಂದು ತೂಕ ಹೆಚ್ಚೇ. ಕಳೆದೆರಡು ವರ್ಷಗಳಲ್ಲಿ ನಡೆಯದ ಉತ್ಸವ ಈ ಬಾರಿ ಹೆಚ್ಚು ರಂಗಿನಿಂದ ನಡೆಯುತ್ತಿದೆ. ಕಳೆದದ್ದನ್ನ ಗಿಟ್ಟಿಸಿಕೊಳ್ಳಲು ಹಬ್ಬದ ತಯಾರಿ ಜೋರಾಗೆ ನಡೆದಿದೆಯೆಂದು ಟಿವಿ ವಾಹಿನಿಗಳು ಬಿತ್ತರಿಸುತ್ತಿವೆ. ಈ ಫೆಸ್ಟಿವಲ್‌ ನಡೆಯುವ  ಮೂರು ವಾರಗಳ ಕಾಲದಲ್ಲಿ ಬರಹಗಾರರ ಶಿಬಿರ, ಅಂತಾರಾಷ್ಟ್ರೀಯ ಚಲನಚಿತ್ರ ಪ್ರದರ್ಶನ, ಕಲೆಗಳ ಪ್ರದರ್ಶನ, ಸೌತ್ ಬ್ಯಾಂಕಿನಲ್ಲಿ ಆಹಾರ ಮೇಳ ಇನ್ನೂ ಹಲವಾರು ವೈವಿಧ್ಯತೆಗಳುಳ್ಳ ಕಾರ್ಯಕ್ರಮಗಳಿರುತ್ತವೆ.ಇವೆಲ್ಲಕ್ಕೂ ಕಳಶವಿಡುವಂತೆ ಇಂದು ಉದ್ಘಾಟನೆಯ ಶನಿವಾರದಂದು ರಾತ್ರಿ River Fire ನಡೆಯುತ್ತದೆ.  ಬ್ರಿಸ್ಬೇನ್‌ ನದಿಯು ಪಟಾಕಿಗಳ ಬಣ್ಣಗಳನ್ನು ಪ್ರತಿಫಲಿಸುವ ಖುಷಿಯಲ್ಲಿ ಹರಿಯುತ್ತಿದೆ. ಈ ಬಾರಿಯ ಆಸ್ಟ್ರೇಲಿಯಾ ಪತ್ರದಲ್ಲಿ ಡಾ. ವಿನತೆ ಶರ್ಮ  ಸಡಗರದ ಸುದ್ದಿಯನ್ನು ಬರೆದಿದ್ದಾರೆ. 

Read More

ನಿಂತಲ್ಲಿ ಕುಂತಲ್ಲಿ ಕಾಡುವ ಕಥೆ ಬರೆದ ದಾದಾ

ಇಲ್ಲಿರುವ ಎಲ್ಲಾ ಕತೆಗಳಿಗಿಂತ ಕೊನೆಯ ಕತೆ ‘ಎಲ್ಲೋ ಯಲ್ಲೋ’
ಕಥೆಯೇ ಯಾಕೆ ಜಾಸ್ತಿ ಇಷ್ಟವಾಯಿತು ಅಂದುಕೊಂಡರೂ ಯಾವುದ್ಯಾವುದೋ ಕಾರಣಗಳು ತೋಚುತ್ತವೆ. ಆದರೆ ಮುಖ್ಯವಾಗಿ ಇಷ್ಟವಾಗಿದ್ದು ಒಂದು ಗಂಡು ಮತ್ತು ಹೆಣ್ಣಿನ ನಡುವೆ ಇರಬಹುದಾದ ಸಹಜವಾದ ಗೆಳೆತನದ ರೀತಿ ಮತ್ತು ಒಬ್ಬಳು ಶಿಕ್ಷಕಿಯ ಗಂಡನಾಗಿ ಅವರ ಕಷ್ಟ‌ನಷ್ಟಗಳ ಬಗ್ಗೆ ಅರಿವಿರುವುದು. ಹೇಗೆ ಹುಡುಗ ಹುಡುಗ ಆತ್ಮೀಯ ಗೆಳೆಯರಾಗಿರಲು ಸಾಧ್ಯವೋ ಅದೇ ರೀತಿ ಹುಡುಗ ಹುಡುಗಿ ಕೂಡಾ ಅದೇ ಆತ್ಮೀಯತೆಯಲ್ಲಿರಲು ಸಾಧ್ಯ. ಸಮಾಜ ಈ ವಿಷಯದಲ್ಲಿ ಮುಂಚಿನಷ್ಟು ಮಡಿವಂತಿಕೆ ಇಟ್ಟುಕೊಂಡಿಲ್ಲವಾದರೂ ಪೂರ್ತಿ ಬದಲಾಗಿಯೂ ಇಲ್ಲ.
ಗಿರಿಧರ್‌ ಗುಂಜಗೋಡು ಬರೆಯುವ “ಓದುವ ಸುಖ” ಅಂಕಣ

Read More

ನಾಗಶ್ರೀ ಅಜಯ್‌ ಹೊಸ ಅಂಕಣ ಲೋಕ ಏಕಾಂತ ಆರಂಭ

ಮನೆ, ನೆಂಟರಿಷ್ಟರು, ಎಫ್ ಬಿ ಯಲ್ಲಿ ಸಾವಿರಾರು ಸ್ನೇಹಿತರು, ಸಹೋದ್ಯೋಗಿಗಳು ಹೀಗೆ ಪರಿಚಿತರ ಸಂಖ್ಯೆ ಹೆಚ್ಚಿರಬಹುದು. ಆದರೆ ನಮ್ಮ ಅಂತರಂಗದ ಪಿಸುಮಾತಿಗೆ ಕಿವಿಯಾಗುವವರು, ದುರ್ಬಲ ಘಳಿಗೆಯಲ್ಲಿ ಹೆಗಲಾಗುವವರು, ನೀನೇನೇ ಆಡಿದರೂ, ಮೌನವಾಗುಳಿದರೂ ಅರ್ಥಮಾಡಿಕೊಳ್ಳಬಲ್ಲೆ ಎನ್ನುವವರು ಎಷ್ಟು ಜನರಿಗಿದ್ದಾರೆ ಹೇಳಿ? ಅವರಿವರ ಮಾತು ಬಿಡಿ. ಮೊಬೈಲ್ ಬಂದ ಮೇಲಂತೂ ನಮಗೆ ನಾವು ದೊರಕುವುದೂ ಅಪರೂಪವೇ.ಯಾವುದೋ ಪುಟವೊಂದರಲ್ಲಿ ಮುಳುಗಿ ಹೋಗಿರುತ್ತೇವೆ. -ಹೀಗೆ ಬದುಕಿನ ಮಾಮೂಲಿ ಕ್ಷಣಗಳ ನಡುವೆ ನುಸುಳಿಕೊಂಡಿರುವ ಸೂಕ್ಷ್ಮಗಳನ್ನು ಗುರುತಿಸಿ ಬರೆದಿದ್ದಾರೆ ಎಸ್.‌ ನಾಗಶ್ರೀ ಅಜಯ್.‌

Read More

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ