Advertisement

Category: ಅಂಕಣ

ಇಂಗ್ಲೆಂಡಿನ ಕ್ರಿಕೆಟ್‌ ಲೋಕದ ಹುಮ್ಮಸ್ಸು

ಇಂಗ್ಲೆಂಡ್ ನಲ್ಲಿ ಪ್ರತಿ ಕ್ರಿಕೆಟ್ ಕ್ಲಬ್ಬಿಗೂ ಕ್ರಿಕೆಟ್ಟಿಗೆಂದೇ ಮೀಸಲಾದ ಮೈದಾನಗಳು ಇರುತ್ತವೆ. ಪ್ರತಿ ಕ್ಲಬ್ಬಿಗೂ ಸದಸ್ಯರಾಗಲು ವಾರ್ಷಿಕ ಚಂದಾ ಕೊಡಬೇಕು.  ಒಂದು ಆಡಳಿತದ ತಂಡ ಇರುತ್ತದೆ.  ಚಿಕ್ಕದಾದರೂ ಸರಿ, ಮೈದಾನಕ್ಕೆ ಅಂಟಿಕೊಂಡಂತೆ ಒಂದು ಕಟ್ಟಡವಿರುತ್ತದೆ, ಅದರೊಳಗೆ ಚಿಕ್ಕ ಪಬ್ಬು ಕೂಡ ಇರುತ್ತದೆ, ಮ್ಯಾಚು ನೋಡಲು ಬಂದವರು, ಮ್ಯಾಚು ಮುಗಿಸಿದ ಮೇಲೆ ತಿಂದು ಕುಡಿದು ಹೋಗಲು ಅಲ್ಲಿ ಅವಕಾಶವಿರುತ್ತದೆ. ಕ್ಲಬ್ಬಿನಲ್ಲಿ ಆಗಾಗ ಡಿನ್ನರ್ ಗಳನ್ನೂ ಬಾರ್ಬಿಕ್ಯೂಗಳನ್ನೂ ಇಟ್ಟುಕೊಂಡಿರುತ್ತಾರೆ ಮತ್ತು ಕ್ಲಬ್ಬಿಗೆ ದುಡ್ಡಿನ ಅವಶ್ಯಕತೆ ಇದ್ದಾಗ ಕೆಲವು ಕಾರ್ಯಕ್ರಮಗಳನ್ನೂ ಇಟ್ಟುಕೊಳ್ಳುತ್ತಾರೆ.
ಕೇಶವ ಕುಲಕರ್ಣಿ ಬರೆಯುವ ‘ಇಂಗ್ಲೆಂಡ್‌ ಪತ್ರ’

Read More

ಸಂಸ್ಕೃತಿಗಳ ಮರುಜೇವಣಿಯಲ್ಲಿ ತೊಡಗಿರುವ ಶಿವಪ್ರಕಾಶರ ಕಾವ್ಯ

ಈ ಬಹುಮುಖಿ ಸಂವಾದದ ಮೂಲಕ ಶಿವಪ್ರಕಾಶರ ಕಾವ್ಯ ಕನ್ನಡ ಸಂಸ್ಕೃತಿಯ ಅಷ್ಟೇ ಏಕೆ ಭಾರತೀಯ ಸಂಸ್ಕೃತಿಯ ಮುಖ್ಯಗುಣವಾದ ಬಹುರೂಪಿತನವನ್ನು ಆವಾಹಿಸಿಕೊಂಡಿದೆ. ಕನ್ನಡ ಸಂವೇದನೆಯ ಅಸಲೀ ಗುಣವೆಂದರೆ ಅದು ಆದಿಮ ಕಾಲದಿಂದಲೂ ಅಂದರೆ ಶಂಗಂ ಸಾಹಿತ್ಯ, ಕವಿರಾಜ ಮಾರ್ಗದ ಕಾಲದಿಂದಲೂ ಹಲವು ಭಾಷೆ-ಸಂಸ್ಕೃತಿ-ಮೌಲ್ಯಗಳನ್ನು ಪ್ರತಿನಿಧಿಸುವ ಮಾರ್ಗ. ದೇಸಿ ಲೌಕಿಕ ಸಾಮಾಜಿಕ ಅನುಭಾವಿಕ ಧಾರ್ಮಿಕ ತತ್ವಶಾಸ್ತ್ರೀಯ ಅನುಭವಗಳೆಲ್ಲವನ್ನೂ ಏಕೀಭವಿಸಿಕೊಳ್ಳುವ ಗುಣವನ್ನು ಹೊಂದಿದೆ.
ಎಚ್‌.ಎಸ್. ಶಿವಪ್ರಕಾಶ್‌ ಅವರ ಕಾವ್ಯದ ಕುರಿತು ಎಸ್‌. ಸಿರಾಜ್‌ ಅಹಮದ್‌ ಬರಹ

Read More

ಸಂಸರ ‘ಬಿಂಬ’ ವನ್ನು ಕಂಡುಕೊಳ್ಳಬೇಕಾದ ಬಗೆಗೆ ಚಿಂತಿಸುತ್ತ…

ರಂಗಶಾಲೆಗಳು ಮತ್ತು ರಂಗಸಂಸ್ಥೆಗಳು ಮಾತ್ರ ಕಟ್ಟಿ ನಿಲ್ಲಿಸಬಹುದಾದ ಪ್ರಯೋಗಗಳು. ಅಮೇಚೂರ್ ಗಳಿಗೆ ಸಂಸರು ನಿಲುಕುವುದು ಕಷ್ಟ. ಕೈಲಾಸಂ ಮತ್ತು ಸಂಸರು ಒಂದೇ ಕಾಲಮಾನದವರಾದರೂ ಇವರ ಭಾಷಾ ಪ್ರಯೋಗದ ಅನನ್ಯತೆ ದೊಡ್ಡದು. ಕೈಲಾಸಂ ಕಟ್ಟಿರುವ ಭಾಷೆ- ಅದನ್ನು ಒಡೆದು ಓದುವ ಕ್ರಮ ತಿಳಿಯದಿದ್ದರೆ ಅವರ ನಾಟಕಗಳು ದಕ್ಕುವುದಿಲ್ಲ. ಸಂಸರನ್ನು ಓದಬೇಕಾದರೆ ಹಳಗನ್ನಡದ ಅಥವಾ ನಡುಗನ್ನಡದ ಟಚ್ ಇರಿಸಿಕೊಂಡಿರಬೇಕು. ಶಾಸ್ತ್ರೀಯವಾಗಿ ಅಭ್ಯಸಿಸಬೇಕು.
ಎನ್.ಸಿ. ಮಹೇಶ್‌ ಬರೆಯುವ ‘ರಂಗ ವಠಾರ’ ಅಂಕಣ

Read More

ಕಳ್ಳರ ಸಹವಾಸದಲ್ಲಿ ಕಳೆದ ಎರಡು ಸಾಹಸಿ ದಿನಗಳು

ಮೊಬೈಲ್ ಕಳ್ಳನನ್ನು ಬೆನ್ನತ್ತಿದ ತಕ್ಷಣ ಅದೆಲ್ಲ ನೆನಪಾಗಿ, ನಾನೊಬ್ಬ ಖೋ ಖೋ ಆಟದ ರೈಡರ್ ಆಗಿ ಬದಲಾಗಿಬಿಟ್ಟಿದ್ದೆ. ಆತ, ಎಡ-ಬಲ ತಡಕುತ್ತ, ಹೊಯ್ದಾಡುತ್ತ ಒಂದೇ ಸಮ ಓಡುತ್ತಿದ್ದ; ನಾನು ಅವನನ್ನಷ್ಟೇ ದಿಟ್ಟಿಸುತ್ತ ನೇರದಿಕ್ಕಿನಲ್ಲಿ ಓಡುತ್ತಿದ್ದೆ. ಇಬ್ಬರ ವೇಗವೂ ನೂರು ಮೀಟರ್ ಓಟಗಾರರ ವೇಗದಷ್ಟೇ ಇತ್ತು. ಇನ್ನೂರೈವತ್ತು ಮೀಟರ್ ಓಡಿರಬಹುದು. ಕಳ್ಳ ಓಡುತ್ತಲೇ ಹಿಂದಕ್ಕೊಮ್ಮೆ ತಿರುಗಿನೋಡಿದ. ಆತನ ಮೊಗದಲ್ಲಿ ಭಯ ಕಡಿಮೆ ಆದಂತಿತ್ತು.
-‘ಸೊಗದೆ’ ಅಂಕಣದಲ್ಲಿ ಕಳ್ಳರ ಚಮತ್ಕಾರಗಳನ್ನು ಬರೆದಿದ್ದಾರೆ ಸಹ್ಯಾದ್ರಿ ನಾಗರಾಜ್

Read More

ಇದು ಆಸ್ಟ್ರೇಲಿಯನ್ ಮಹಿಳಾ ಕ್ರೀಡಾಪಟುಗಳಿಗೆ ಸೇರಿದ ವರ್ಷ!

ಇಪ್ಪತ್ತೊಂದನೇ ಶತಮಾನದಲ್ಲಿ ಕೂಡ ಹೊರದೇಶದವರಿಗೆ ಆಸ್ಟ್ರೇಲಿಯ ಅಂದರೆ ಆಂಗ್ಲೋ-ಆಸ್ಟ್ರೇಲಿಯಾ ಎಂಬ ಏಕತ್ವ ಮಾತ್ರ ಕಾಣುವುದು. ಎಲ್ಲವೂ ಆಂಗ್ಲೋ-ಯೂರೋಪಿಯನ್-ಅಮೇರಿಕನ್ ಆಗಿರುವ ಈ ದೇಶದಲ್ಲಿ ಈ ಮಣ್ಣಿನ ಮಕ್ಕಳಾದ ಅಬೊರಿಜಿನಲ್ ಜನರ ಸಂಸ್ಕೃತಿ ಮತ್ತು ತಿಳಿವಳಿಕೆಯ ಮಹತ್ವ ಬೆಳಕಿಗೆ ಬರಲು ಸಾಕಷ್ಟು ಅವಕಾಶವಾಗಿಲ್ಲ. ಇಂಥಾ ಸನ್ನಿವೇಶದಲ್ಲಿ ಮಹಿಳಾ ಕ್ರೀಡಾಪಟುವೊಬ್ಬರು ರೂಪುಗೊಳ್ಳುವುದು ಸರಳ ಮಾತಲ್ಲ.
ವಿನತೆ ಶರ್ಮಾ ಬರೆದ ‘ಆಸ್ಟ್ರೇಲಿಯ ಪತ್ರ’ ಇಲ್ಲಿದೆ.

Read More

ಜನಮತ

ಈ ಯುಗಾದಿ ಹಬ್ಬಕ್ಕೆ...

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಪುನರಪಿ-ಇಹ ಸಂಸಾರೆ ಬಹು ದುಸ್ತಾರೆ: ಬಿ. ವಿ. ರಾಮಪ್ರಸಾದ್ ಬರಹ

ಕಾದಂಬರಿ ಮನುಷ್ಯರ ಆಂತರಿಕ ಬೇಗೆಗಳನ್ನು ಹೇಳುವಾಗ “ನೆತ್ತಿ ಸುಡುವ . . . ಬಿರುಬೇಸಿಗೆಯ” ಬೇಗೆಯನ್ನು ನಮ್ಮ ಅನುಭವಕ್ಕೆ ತಾರದೇ ಬಿಡುವುದಿಲ್ಲ; ಆಸ್ಮಾ ದುಃಖದಲ್ಲಿ ಮುಳುಗಿ ಮನೆಯಲ್ಲಿ…

Read More

ಬರಹ ಭಂಡಾರ