Advertisement

Category: ದಿನದ ಅಗ್ರ ಬರಹ

ಕನಕಗಿರಿಯ ಲಕ್ಷ್ಮೀನರಸಿಂಹ ದೇವಾಲಯ: ಟಿ.ಎಸ್. ಗೋಪಾಲ್ ಬರೆಯುವ ದೇಗುಲಗಳ ಸರಣಿ

“ಹಂಪೆಯಲ್ಲಿ ಸುತ್ತಾಡಿ ಬಳಲಿದವನಿಗೆ ಕಾಲಿನ ಬೆಲೆ ಸಂಜೆಯ ಹೊತ್ತಿಗಾದರೂ ತಿಳಿದೇ ತಿಳಿಯುತ್ತದೆ. ಇನ್ನು ಕಣ್ಣಿದ್ದು ಕನಕಗಿರಿ ನೋಡಬೇಕಲ್ಲ! ಆ ಸ್ಥಳ ಎಲ್ಲಿದೆ ಎಂದು ವಿಚಾರಿಸುವಾಗ ಕೊಪ್ಪಳ ಜಿಲ್ಲೆಯ ಗಂಗಾವತಿಯಿಂದ ಮೂವತ್ತು ಕಿಲೋಮೀಟರ್ ದೂರದಲ್ಲಿ ಎಂಬ ಉತ್ತರ ದೊರಕಿತು. ಕನಕನೆಂಬ ಮುನಿ ದೀರ್ಘತಪಸ್ಸು ಮಾಡಿದ ಸ್ಥಳವಾದುದರಿಂದ ಕನಕಗಿರಿ ಎಂಬ ಹೆಸರು ಬಂದಿತಂತೆ. ಕ್ರಿ.ಶ. ಹತ್ತನೆಯ ಶತಮಾನದ ವೇಳೆಗೇ ಪುಣ್ಯಕ್ಷೇತ್ರವೆಂಬ ಕೀರ್ತಿಗೆ ಪಾತ್ರವಾಗಿದ್ದ ಈ ಪ್ರಾಂತ್ಯದಲ್ಲಿ ಈಗಲೂ ಅನೇಕ ಗುಡಿಗಳೂ ಕೊಳಗಳೂ ಇದ್ದು ಪುರಾತನ ವೈಭವವನ್ನು ನೆನಪಿಸುವಂತಿವೆ. ಇವೆಲ್ಲ ಗುಡಿಗಳಲ್ಲಿ ಲಕ್ಷ್ಮೀನರಸಿಂಹ ದೇವಾಲಯ ಪ್ರಮುಖ ಸ್ಥಾನ ಪಡೆಯುತ್ತದೆ.”
ಟಿ.ಎಸ್.ಗೋಪಾಲ್ ಬರೆಯುವ ದೇಗುಲಗಳ ಸರಣಿಯ ಹತ್ತೊಂಭತ್ತನೆಯ ಕಂತು

Read More

ಭಾಷಾಂತರ ಪ್ರಕ್ರಿಯೆ ಮತ್ತು ವಿಜಯರಾಘವನ್ ಅನುವಾದ ಕಾವ್ಯ

“ಕಾಶ್ಮೀರಿ ಶೈವಪಂಥದ ಮೊದಲ ಕವಯಿತ್ರಿ ಲಲ್ಲಾದೇವಿಯ ವಾಕ್ ಗಳು ಕೂಡ ಕನ್ನಡದಲ್ಲಿ ಒಂದು ವಿಶಿಷ್ಟ ಬಗೆಯ ಭಾಷಾಂತರ ಪ್ರಯೋಗ. ಲಲ್ಲಾದೇವಿ ಕನ್ನಡಕ್ಕೆ ತುಂಬಾ ತಡವಾಗಿ ಪರಿಚಯವಾಗುತ್ತಿದ್ದಾಳೆ. ಲಲ್ಲಾದೇವಿಯ ವಾಕ್ ಗಳಿಗೂ ಕನ್ನಡದಲ್ಲಿ ರಚನೆಯಾಗಿರುವ ಶರಣರ ವಚನಗಳಿಗೂ ಅನೇಕ ವಿಧದಲ್ಲಿ ಸಾಮ್ಯತೆಗಳಿವೆ.”
ನರಸಿಂಹಮೂರ್ತಿ ಹಳೇಹಟ್ಟಿ ಲೇಖನ

Read More

ಶಿಖರದ ತುದಿಯಲ್ಲಿ ಕಿವಿಯಲ್ಲುಸುರುವ ತಂಗಾಳಿ

“ಚಿತ್ರಕಲೆ, ಸಾಹಿತ್ಯ, ರಂಗಭೂಮಿ, ಸಂಗೀತ ಮತ್ತಿತರ ಕಲೆಗಳಲ್ಲಿ ಉತ್ಸಾಹದಿಂದ ಮುಳುಗಿ ಎದ್ದಿದ್ದೆ. ನನ್ನೊಳಗೆ ತುಂಬಿಕೊಂಡ ಈ ಎಲ್ಲ ಕಲೆಗಳ ತಿಳಿವಳಿಕೆ ಒಟ್ಟಾಗಿ ಸಿನಿಮಾ ರೂಪದಲ್ಲಿ ಬಂದಿತ್ತು. ನಾನು ಕಲಿತೆಲ್ಲ ಕಲೆಗಳನ್ನು ಸಿನಿಮಾದಲ್ಲಿ ಬಳಸಬಹುದೆಂದು ಎಂದೂ ಯೋಚಿಸಿರಲಿಲ್ಲ. ನಾನು ಬದುಕಿನಲ್ಲಿ ತುಳಿಯಲಿರುವ ಹಾದಿಗೆ ವಿಧಿ ನನಗೆ ಇಷ್ಟು ಚೆನ್ನಾಗಿ ತರಬೇತಿ ನೀಡಿ….”

Read More

ತಾಳಮದ್ದಲೆಯ ಚಕ್ರವ್ಯೂಹ ಬೇಧಿಸಿದ ಸಂಪಾಜೆಯ ಜಬ್ಬಾರ್

ಸಂಪಾಜೆಯ ಮೊಯಿದ್ದಿನ್ ಮತ್ತು ಬೀಪಾತಿಮಾ ಇವರ ಐದನೇ ಮಗ ಜಬ್ಬಾರ ಹುಟ್ಟಿದ್ದು ಬೆಳೆದದ್ದು ಓದಿದ್ದು ಇಲ್ಲಿಯೇ. ಆಗ ಈಗಿನಂತೆ ಉಸಿರುಕಟ್ಟುವ ವಾತಾವರಣ ಇಲ್ಲದ ಕಾರಣ ಆಟ ಎಲ್ಲರನ್ನೂ ಸೆಳೆಯುತ್ತಿತ್ತು. ನೆರೆ ಕೆರೆಯರೊಟ್ಟಿಗೆ ಆರನೆಯ ವಯಸ್ಸಿಗೇ ಆಟನೋಡಲು ಓಡುತ್ತಿದ್ದರು. ಆಗ ಅದೇನು ತಕರಾರು ಮಾಡುವಂತಹ ವಿಷಯ ಯಾವ ಜಾತಿಯವರಲ್ಲೂ ಇರಲಿಲ್ಲ.

Read More

ಆವನಾವನು ಕಾಯ್ವ : ಸರಿತಾ ನವಲಿ ಬರೆದ ಕತೆ

ಪರದೇಶದ ಪ್ರಜೆ ಅಂತಾದ ಮಾತ್ರಕ್ಕ ಹುಟ್ಟಿನ ಮೂಲ ಬದಲಾಯಿಸಿಕ್ಕೆ ಆಗ್ತದೇನು? ಇಲ್ಲ ಮೈ ಬಣ್ಣ ಬದಲು ಆಗ್ತದೇನು?” ಪವಮಾನನಿಗೆ ತನ್ನ ಬದುಕಿನ ಅಸ್ತಿತ್ತ್ವಕ್ಕ ಕಾರಣರಾದವರನ್ನು ಬಿಟ್ಟು ಅಮೆರಿಕಾದ ಪ್ರಜೆ ಅನ್ನೋ ಅಸ್ತಿತ್ವವನ್ನು ಪಡೆಯೋದೇ ಮುಖ್ಯ ಆದಂಗಿತ್ತು. ರಾಮಾಚಾರರ ಆರೋಗ್ಯ ಸುಧಾರಿಸೊ ಹಂಗ ಕಾಣಲಿಲ್ಲ. ಮುಂದೇನು? ಅನ್ನೋ ಸೀತಾಬಾಯಿಯ ಯೋಚನಿಕಿಂತ, ಊರಿನ ಮಂದಿ ಮಾತೇ ಜಾಸ್ತಿಯಾಯಿತು.

Read More

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಫೇಸ್ ಬುಕ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ