Advertisement

Category: ದಿನದ ಪುಸ್ತಕ

ಮನುಷ್ಯನ ಆದ್ಯತೆಗಳ ಶೋಧಿಸುವ ‘ಕಾಂಚನಸೀತ’

‘ಕಾಂಚನಸೀತೆ’ ಎನ್ನುವ ಹೆಸರೇ ನಿಗೂಢವಾಗಿದೆ. ರಾಮಾಯಣವನ್ನು ನಿಕಟವಾಗಿ ಬಲ್ಲವರಿಗೂ ಇದರ ಪರಿಚಯ ಇರುವುದಿಲ್ಲ. ಸೀತಾಪರಿತ್ಯಾಗದ, ನಂತರ ರಾಮನು ಅಶ್ವಮೇಧ ಮತ್ತು ಇತರ ಯಾಗಗಳನ್ನು ಮಾಡಬೇಕಾಗಿ ಬಂದಾಗ, ಪತ್ನಿಯಾದ ಸೀತೆಯ ಜಾಗದಲ್ಲಿ ಅವಳ ಚಿನ್ನದ ವಿಗ್ರಹವನ್ನು ಮಾಡಿಸಿ, ಅದನ್ನು ಪಕ್ಕದಲ್ಲಿ ಇಟ್ಟುಕೊಂಡು ಅಂಥ ಕಾರ್ಯಕ್ರಮಗಳನ್ನು ನೆರವೇರಿಸಿಕೊಂಡನೆಂದು ವಾಲ್ಮೀಕಿ ರಾಮಾಯಣದ ‘ಉತ್ತರಕಾಂಡ’ವೂ ಹೇಳುತ್ತದೆ. ಭವಭೂತಿಯ ‘ಉತ್ತರರಾಮಚರಿತೆ’ ನಾಟಕವು ಈ ಕಥೆಯನ್ನು ಇನ್ನಷ್ಟು ವಿಸ್ತರಿಸುತ್ತದೆ.

Read More

‘ದೇವ್ರು’ ಪದ್ಮನಾಭ ಭಟ್‌ ಹೊಸ ಕಾದಂಬರಿಯ ಕೆಲವು ಪುಟಗಳು

ಸುಬ್ಬಿ ಈಗ ಇದ್ದಿದ್ದರೆ ಏನು ಹೇಳುತ್ತಿದ್ದಳು? ಈ ಪುಟ್ಟ ಲಲಿತೆಯನ್ನು ಆ ದೇವ್ರುವಿನ ಎದುರಿಗೆ ತೆಗೆದುಕೊಂಡು ಹೋಗಿ ನಿಲ್ಲಿಸಿದರೆ ಏನನ್ನಬಹುದು? ಹುಟ್ಟಾ ನೋಡೇ ಇರದ ಮನುಷ್ಯನನ್ನು ಅಣ್ಣ ಎಂದು ಹೇಳಿದರೆ ಒಪ್ಪಿಕೊಳ್ಳಬಹುದೇ? ದೇವ್ರು ಇವಳನ್ನು ನೋಡಿ ಹೇಗೆ ಪ್ರತಿಕ್ರಿಯಿಸಬಹುದು? ಹೀಗೆ ಹತ್ತು ಹಲವು ಆಲೋಚನೆಗಳು ಮನಸಲ್ಲಿ ಸುಳಿಯುತ್ತಲೇ ಇದ್ದವು. “ಅವ್ನ ಮತ್ತೆ ನನ್ನ ಋಣ ತೀರಿದೆ. ಇನ್ಮೇಲೆ ಅವ್ನಾಗೇ ಎದ್ರಿಗೆ ಬಂದ್ರೂ ನಾನು ಮಾತಾಡಿಸ್ಬಾರ್ದು’ ಎಂದುಕೊಂಡಳು. ಪದ್ಮನಾಭ ಭಟ್‌ ಶೇವ್ಕಾರ ಹೊಸ ಕಾದಂಬರಿ ‘ದೇವ್ರು’ ಅ.24ರಂದು ಬಿಡುಗಡೆ ಆಗಲಿದೆ. ಕಾದಂಬರಿಯ ಕೆಲವು ಪುಟಗಳು ನಿಮ್ಮ ಓದಿಗೆ

Read More

‘ಹುಲಿಕಡ್ಜಿಳʼ ಕಥಾ ಸಂಕಲನದ ಕುರಿತು ಸ್ಮಿತಾ ರಾಘವೇಂದ್ರ ಬರಹ

ಇಲ್ಲಿನ ಹೆಚ್ಚಿನ ಕಥೆಗಳು ಮಲೆನಾಡು, ಆಗುಂಬೆ,ತೀರ್ಥಹಳ್ಳಿಯಂತಹ ಗ್ರಾಮಾಂತರ ಪ್ರದೇಶದ ಪರಿಸರದ ಸಂಪೂರ್ಣ ಚಿತ್ರಣವನ್ನು ಓದುಗನಿಗೆ ನೀಡುತ್ತದೆ. ಹೆಣ್ಣು ಹೇಳಿಕೊಳ್ಳದ ಕೆಲವು ಸೂಕ್ಷ್ಮಗಳನ್ನು ಅತಿ ಸೂಕ್ಷ್ಮವಾಗಿ ಕಥೆಯಲ್ಲಿ ಲೇಖಕ ಹರೀಶ್ ದಾಖಲಿಸಿದ್ದಾರೆ. ತಾನು ಹುಟ್ಟಿ ಬೆಳೆದ ಊರು ಮನೆಗಳನ್ನು ಬಿಟ್ಟು, ಇಷ್ಟಕ್ಕೋ, ಅನಿವಾರ್ಯಕ್ಕೋ, ಪಟ್ಟಣ ಸೇರಿಕೊಂಡ ನೂರಾರು ಮನಸ್ಸುಗಳು. ದಾರಿ ಕಾಯುತ್ತ ಹಳ್ಳಿಯಲ್ಲೇ ಉಳಿದ ಹಿರಿ ಜೀವಗಳು. ಇಂತಹ ನಯನಾಜೂಕಿನ ಭಾವಗಳ ಚಿತ್ರಣ ಸೆರೆಹಿಡಿದಿದ್ದಾರೆ.
ಹರೀಶ್‌ ಟಿ.ಜಿ ಬರೆದ ‘ಹುಲಿಕಡ್ಜಿಳ’ ಕಥಾಸಂಕಲನದ ಕುರಿತು ಸ್ಮಿತಾ ರಾಘವೇಂದ್ರ ಬರಹ

Read More

ಸುಧಾ ಆಡುಕಳ ಅನುವಾದಿಸಿದ ಟ್ಯಾಗೋರರ ಭಾಷಣ

ನೊಬೆಲ್ ಪ್ರಶಸ್ತಿ ಪುರಸ್ಕೃತ ಕವಿ, ಬರಹಗಾರ ರವೀಂದ್ರನಾಥ ಟ್ಯಾಗೋರ್ ಅವರ ಗೀತಾಂಜಲಿ ಕೃತಿಯನ್ನು ಕನ್ನಡದ ಲೇಖಕಿ ಸುಧಾ ಆಡುಕಳ ಅವರು ಕನ್ನಡಕ್ಕೆ ಅನುವಾದಿಸಿದ್ದಾರೆ. ನೊಬೆಲ್ ಪ್ರಶಸ್ತಿ ಸ್ವೀಕರಿಸಿದ ಸಂದರ್ಭದಲ್ಲಿ ಟ್ಯಾಗೋರರು ಮಾಡಿದ ಭಾಷಣವನ್ನು ಈ ಕೃತಿಯಲ್ಲಿ ಸೇರಿಸಲಾಗಿದೆ. ವಿದ್ವಾಂಸ, ತತ್ವಜ್ಞಾನಿ ಆಗಿದ್ದ ಟ್ಯಾಗೋರರು ಈ ಭಾಷಣದಲ್ಲಿ ತಮ್ಮ ಬಗ್ಗೆ ಹಾಗೂ ಜಗತ್ತನ್ನು ತಾವು ಅರ್ಥೈಸಿಕೊಂಡ ಬಗ್ಗೆ ವಿವರಿಸಿದ್ದಾರೆ. ಗಂಗೆಯ ತಟದಲ್ಲಿ ಕಳೆದ ದಿವ್ಯ ಏಕಾಂತದ ಕ್ಷಣಗಳು ನೀಡಿದ ಪ್ರತಿಫಲನವಾಗಿ ಕವನಗಳು ಹೇಗೆ ಒಲಿದು ಬಂದವು ಎಂಬುದನ್ನು ಹೇಳಿದ್ದಾರೆ.

Read More

ಆರ್.ದಿಲೀಪ್ ಕುಮಾರ್ ಹೊಸ ಪುಸ್ತಕದ ಕುರಿತು ರವೀಂದ್ರನಾಯಕ್‌ ಬರಹ

ಹಳೆಗನ್ನಡದ ಪಠ್ಯಗಳನ್ನು ಓದಬೇಕು ಎಂಬ ಆಸೆಗೆ ಪೂರಕವಾಗಿ ದೊರೆತುದು ಎಚ್.ಎಸ್. ವೆಂಕಟೇಶ ಮೂರ್ತಿಯವರ ‘ಕುಮಾರವ್ಯಾಸ ಕಥಾಂತರ’. ಇದು ಕುಮಾರವ್ಯಾಸನ ಕಾವ್ಯಕ್ಕೆ ಹೊಸಬರಿಗೆ ಪ್ರವೇಶ ಮಾಡಲಿಕ್ಕೊಂದು ಸುಲಭದ ದಾರಿ ಅಂತ ಅನ್ನಿಸಿ ಆ ಕೃತಿಯನ್ನು ಓದಿದೆ.  ಓದಿನ ನಂತರ ನಿಜಕ್ಕೂ ನನಗೆ  ಕುಮಾರವ್ಯಾಸ ಹತ್ತಿರನಾದ. ತನ್ನ ಕಾವ್ಯದ ಗುಟ್ಟುಗಳನ್ನು ಅರ್ಥಗಳನ್ನು ನನಗೆ ಈಗ ಬಿಟ್ಟುಕೊಟ್ಟು ನನ್ನ ದಿನನಿತ್ಯದ ಗೆಳೆಯನೇ ಆಗಿದ್ದಾನೆ.
ಆರ್.ದಿಲೀಪ್ ಕುಮಾರ್ ಹೊಸ ಪುಸ್ತಕ ಪಚ್ಚೆಯ ಜಗುಲಿ ಕುರಿತು  ಬರೆದಿದ್ದಾರೆ ರವೀಂದ್ರನಾಯಕ್‌ ಸಣ್ಣಕ್ಕಿಬೆಟ್ಟು 

Read More

ಜನಮತ

ಈ ಯುಗಾದಿ ಹಬ್ಬಕ್ಕೆ...

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ನಮ್ಮನ್ನೂ ಮನುಷ್ಯರಂತೆ ಕಾಣಿ: ಈರಣ್ಣ ಬೆಂಗಾಲಿ ಕಾದಂಬರಿಯ ಪುಟಗಳು

“ನಾವೂ ಮನುಷ್ಯರೇ, ದಯಮಾಡಿ ನೀವು ನಮ್ಮನ್ನು ಮನುಷ್ಯರಂತೆ ಕಾಣಿ” ಎಂದು ಕೇಳಿಕೊಳ್ಳುತ್ತಾನೆ. ಇದನ್ನು ಕೇಳಿದ ಯಜಮಾನನಿಗೆ ತೀವ್ರ ಮುಜುಗರವಾಗುತ್ತದೆ. ಒಳ್ಳೆಯವರು, ಕೆಟ್ಟವರು ಎಂಬುದು ಅವರ ಜಾತಿಯಿಂದಲ್ಲ, ಬದಲಾಗಿ…

Read More

ಬರಹ ಭಂಡಾರ