Advertisement

Category: ದಿನದ ಪುಸ್ತಕ

ಓ.ಎಲ್. ನಾಗಭೂಷಣಸ್ವಾಮಿ ಅನುವಾದಿಸಿದ ಒರ್ಹಾನ್ ಪಮುಕ್ ಕಾದಂಬರಿಯ ಆಯ್ದ ಭಾಗ

“ಜೂನ್ ತಿಂಗಳ ಮಧ್ಯಭಾಗದಲ್ಲಿ ಒಂದು ದಿನ ಪಕ್ಕದ ಜಮೀನಿಂದ ಜನ ಖುಷಿಯಾಗಿ ಕೂಗಾಡುವುದು, ಗುಂಡು ಹಾರಿಸುವುದು ಕೇಳಿಸಿತು. ಏನೆಂದು ನೋಡುವುದಕ್ಕೆ ಹೋದೆ. ಬಾವಿಯಲ್ಲಿ ನೀರು ಚಿಮ್ಮಿತ್ತು. ಆ ಒಳ್ಳೆಯ ಸುದ್ದಿ ಕೇಳಿದ ತಕ್ಷಣ ಜಮೀನಿನ ಯಜಮಾನ ಸಂಭ್ರಮಪಡುವುದಕ್ಕೆಂದು ರಯೀಸ್ ನಿಂದ ಬಂದಿದ್ದ. ಖುಷಿಯಲ್ಲಿ ಆಕಾಶಕ್ಕೆ ಗುಂಡು ಹಾರಿಸುತಿದ್ದ. ಗಾಳಿಯಲ್ಲಿ ಮದ್ದಿನ ಪುಡಿಯ ಘಾಟಿತ್ತು.”

Read More

ಭಾರತಿ ಹೆಗಡೆ ಬರೆದ ‘ಮಣ್ಣಿನ ಗೆಳತಿ’ ಪುಸ್ತಕದಿಂದ ಒಂದು ಲೇಖನ

“ಹಾಗೆ ನೋಡಿದ್ರೆ ಅಜ್ಜಿಯ ದೃಷ್ಟಿಯಲ್ಲಿ ಕೃಷಿ ಕೆಲಸ ಈಗ ತುಂಬ ಸುಲಭ. `ಈಗೇನ್ ಕಣವ್ವಾ… ಬೇಕಾದಸ್ಟು ಯಂತ್ರಗಳು ಬಂದಿವೆ, ಸರ್ಕಾರದೋರು ಎಂತೆಂತದೋ ಕೊಡ್ತವ್ರೆ, ಆಗೆಲ್ಲ ಈಂಗೆಲ್ಲ ಇರ್ನಿಲ್ಲ. ಯಾತದಲ್ಲಿ ನೀರೆತ್ತಬೇಕಾಗಿತ್ತು. ಗುದ್ದಲಿಯಿಂದ ಅಗೀಬೇಕಾಗಿತ್ತು. ಎಲ್ಲ ನಾವೇ ಬೆಳೀತಾ ಇದ್ವು. ಆವಾಗ ಭಾಳಾ ತೊಂದರೆ. ಒಂದ್ ಕಿತಾ ಏಕಾಏಕಿ ಬರ ಬಂದು ಬಿಡ್ತು. ನೀರು ಸಮಸ್ಯೆ, ಎಷ್ಟೊಂದು ಜನ ಎಲ್ಲ ಸತ್ತೋದ್ರು.”

Read More

ಮಂಜುನಾಥ್ ಚಾಂದ್ ಬರೆದ ಹೊಸ ಕಾದಂಬರಿಯ ಕೆಲವು ಪುಟಗಳು

“ಸಿರಿಮನೆಯ ಎದುರಿನ ಸಣ್ಣ ಸಣ್ಣ ಕುರುಚಲು ಮರಗಳ ಹಾಡಿಯಂತಹ ಇಳಿಜಾರಿನ ಜಾಗದಲ್ಲಿ ಮಳೆ ನೀರು ಹರಿದು ಅತ್ಯಂತ ಕಿರಿದಾದ ಓಣಿ ಸೃಷ್ಟಿಯಾಗಿದೆ. ಆ ಓಣಿಯಲ್ಲಿ ಓಲಾಡುತ್ತ ತೇಲಾಡುತ್ತ, ಇನ್ನಿಲ್ಲದ ರೀತಿಯಲ್ಲಿ ಕಷ್ಟಪಟ್ಟು ಹೋಗಿ ನಿಂತರೆ ಇನ್ನೊಂದು ಸ್ವರ್ಗ ಕಣ್ಣ ಮುಂದೆ ಅನಾವರಣಗೊಳ್ಳುತ್ತದೆ.”

Read More

ಕರಣಂ ಪವನ್ ಪ್ರಸಾದ್ ಬರೆದ ‘ರಾಯಕೊಂಡ’ ಕಾದಂಬರಿಯ ಆಯ್ದ ಭಾಗ

“ಈ ಕಡೆ ನೀರು ಕುಡಿಯೋಣ ಎಂದರೆ ಒಂದು ಹನಿ ನೀರೂ ಗುಡಿಯಲ್ಲಿ ಇರಲಿಲ್ಲ. ಬಿಟ್ಟರೆ ಕಲ್ಯಾಣಿ ನೀರು, ಅದರಲ್ಲಿ ನಾಯಿ ಸತ್ತ ವಾಸನೆ. ನೆನ್ನೆ ಅದರಲ್ಲೇ ಸ್ನಾನ ಮಾಡಿದೆ ಅಲ್ಲವೇ? ಅದನ್ನೇ ಕುಡಿದೇ ಅಲ್ಲವೇ? ಆಗಲೇ ಇದು ಬಿದ್ದಿತ್ತೋ, ರಾತ್ರಿ ಬಿದ್ದಿತ್ತೋ? ಎಂದು ಪದ್ದಣ್ಣ ಅಂದಾಜಿಸುವಾಗ ವಾಕರಿಕೆ ಒತ್ತರಿಸಿಕೊಂಡುಬಂತು.”

Read More

ಶ್ರೀದೇವಿ ಕೆರೆಮನೆ ಪುಸ್ತಕದ ಕುರಿತು ಸುಜಾತ ಲಕ್ಷ್ಮೀಪುರ ಬರೆದ ಲೇಖನ

“ಅವರವರ ಭಾವಕ್ಕೆ ಎನ್ನುತ್ತಲೇ ನಮ್ಮ ಮೂಗಿನ ನೇರಕ್ಕೆ ಅನ್ಯರನ್ನು ಕಂಡಿರಿಸುವ ಮನೋಭಾವ ಪರಿಚಯದ ಆರಂಭದ ಪುಟ್ಟ ಲೇಖನವೇ ಸಂಜೆ, ಆಪ್ತರೊಡನೆ ಮಾತುಕತೆಯಾಡುತ್ತಾ ಪರಸ್ಪರ ತಿಳಿವಳಿಕೆ ಹಂಚಿಕೊಳ್ಳುತ್ತಾ ವನದಲ್ಲಿ ಸುತ್ತಾಡಿದ ಭಾವ ಮೂಡಿಸುತ್ತದೆ…”

Read More

ಜನಮತ

ಈ ಯುಗಾದಿ ಹಬ್ಬಕ್ಕೆ...

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಹಳ್ಳಿ ಹಾದಿಯ ಹೂವಿನ ಘಮದಲ್ಲಿ ಬಾಲ್ಯದ ಪರಿಮಳ: ಡಾ. ತಿಮ್ಮಯ್ಯ ಶೆಟ್ಟಿ ಬರಹ

ಹಳ್ಳಿ ಹಾದಿಯ ಹೂವು ಕಾದಂಬರಿಯಲ್ಲಿ ಲೇಖಕರು ಒಂಬತ್ತೋ, ಹತ್ತೋ ವರ್ಷದ ಬಾಲಕ ಶಾಮನಾಗಿ ತಮ್ಮ ಅನುಭವದ ಹೂಗಳನ್ನು ತೋರಣವಾಗಿ ಕಟ್ಟಿದ್ದಾರೆ. ಹಳ್ಳಿ ಹಾದಿಯ ಹೂವಿನ ಪರಿಮಳ ಘಮಘಮಿಸಿ…

Read More

ಬರಹ ಭಂಡಾರ