ಇಂಗ್ಲಿಷ್ ಮತ್ತು ನೆದರ್ಲ್ಯಾಂಡ್ಸ್: ಕೆ. ಸತ್ಯನಾರಾಯಣ ಪ್ರವಾಸ ಸರಣಿ
ನೆದರ್ಲ್ಯಾಂಡ್ಸ್ ಯುರೋಪಿನ ಭಾಗ. ಇಂಗ್ಲೆಂಡಿಗೆ ಹತ್ತಿರ. ರೈಲಿನಲ್ಲಿ ಕೂಡ ಕೇವಲ ನಾಲ್ಕು ಘಂಟೆಗಳ ಪ್ರಯಾಣ. ಯುರೋಪಿನಲ್ಲಿ ಬಹು ಭಾಷಾ ಸಂಸ್ಕೃತಿ ಇದೆ. ಬಹುಪಾಲು ಯುರೋಪಿಯನ್ನರು ಒಂದು ಭಾಷೆಗಿಂತ ಹೆಚ್ಚು ಭಾಷೆಗಳನ್ನು ತಮ್ಮ ನಿತ್ಯ ಜೀವನದಲ್ಲಿ ಬಳಸುತ್ತಾರೆ, ಅಥವಾ ಬಳಸಲು ಬಲ್ಲರು. ಆದರೂ ಕೆಲ ದೇಶಗಳಲ್ಲಿ ಪ್ರವಾಸಿಗಳ ಜೊತೆ, ಅದರಲ್ಲೂ ಶ್ವೇತವರ್ಣೀಯರಲ್ಲದವರ ಜೊತೆ ತಮ್ಮ ಮಾತೃ ಭಾಷೆಯಲ್ಲೇ ಮಾತನಾಡುವ ಹಠ ಹಿಡಿಯುತ್ತಾರೆ.
ಕೆ. ಸತ್ಯನಾರಾಯಣ ಬರೆಯುವ ಪ್ರವಾಸ ಪ್ರಬಂಧಗಳ “ನೆದರ್ಲ್ಯಾಂಡ್ಸ್ ಬಾಣಂತನ” ಸರಣಿಯ ನಾಲ್ಕನೆಯ ಬರಹ
