Advertisement

Category: ಸಂಪಿಗೆ ಸ್ಪೆಷಲ್

ಕನ್ನಡದ ಹೆಣ್ಮನಗಳ ಕನ್ನಡಾಭಿಮಾನ: ರೂಪಶ್ರೀ ಕಲ್ಲಿಗನೂರ್ ಬರಹ

ಕನ್ನಡ ನಾಡಿನ ಮಕ್ಕಳು ಇಡೀ ಜಗತ್ತಿನ ತುಂಬಾ ಓಡಾಡಿದರೂ, ಮನೆಗೆ ಬಂದು ಅಮ್ಮನೊಟ್ಟಿಗೆ ಕನ್ನಡ ಮಾತನಾಡಿದಾಗಲೇ ಅವರಿಗೂ ಸಮಾಧಾನ. ಯಾಕೆಂದರೆ ಅವರೆಲ್ಲ ಮೊದಲು ಕಲಿತ ಪದವೇ “ಅಮ್ಮ” ಅಲ್ಲವೇ! ಜಗತ್ತಿನ, ಬೆಳವಣಿಗೆಯೆಂಬ ಸಂಕೀರ್ಣತೆಯ ಸಂದಿಗ್ಧತೆಯಲ್ಲಿ ಕನ್ನಡ ಭಾಷೆ ಚೂರು ನಲುಗುತ್ತಿದೆ ಎನ್ನಿಸುತ್ತಿದೆಯಾದರೂ ದೊಡ್ಡಮಟ್ಟದಲ್ಲಿಯಲ್ಲವಾದರೂ, ತಮಗೆ ಸಿಕ್ಕ ಅವಕಾಶಗಳಲ್ಲಿ ಕನ್ನಡದ ಬೆಳವಣಿಗೆಗೆ, ಉಳಿವಿಗೆ ಶ್ರಮಿಸುವ ಹಲವು ಶ್ರೀಸಾಮಾನ್ಯರಿದ್ದಾರೆ. ಕರ್ನಾಟಕದಲ್ಲಿ ಅಲ್ಲದೇ ಬೇರೆಡೆಗಳಲ್ಲಿ ನೆಲೆಸಿರುವ, ಕನ್ನಡದ ಅಸ್ಮಿತೆಯನ್ನು ಉಳಿಸಿಕೊಳ್ಳಲು ಪ್ರಯತ್ನಿಸುತ್ತಿರುವ ಹಲವು ಕನ್ನಡದ ಹೆಣ್ಮಗಳ ಮಾತುಗಳು, ರೂಪಶ್ರೀ ಕಲ್ಲಿಗನೂರ್‌ ನಿರೂಪಣೆಯಲ್ಲಿ….

Read More

ಭರವಸೆಯ ಬುತ್ತಿ, ಶಾಂತಿದೂತೆ – ಜೇನ್ ಗುಡಾಲ್: ಕ್ಷಮಾ ವಿ.ಭಾನುಪ್ರಕಾಶ್ ಬರಹ

ಸಂಶೋಧನೆಗಳಿಗಾಗಿ ಸೆರೆಯಲ್ಲಿರುವ ಪ್ರಾಣಿಗಳ ಆರೈಕೆಯ ಬಗ್ಗೆ, ವನ್ಯಜೀವಿಗಳ ಅಕ್ರಮ ಸಾಗಾಣಿಕೆ ಹಾಗೂ ಮಾರಾಟದ ವಿರುದ್ಧ ತಮ್ಮ ಸಂಸ್ಥೆಯ ಮೂಲಕ ಜೇನ್ ವಿಶ್ವಮಟ್ಟದಲ್ಲಿ ಪ್ರಭಾವಿ ಹೆಸರಾಗಿದ್ದು, ಪರಿಣಾಮಕಾರಿ ಕೆಲಸಗಳನ್ನು ಮಾಡಿದ್ದಾರೆ. ಜೇನ್ ಗುಡಾಲ್ ಇನ್ಸ್ಟಿಟ್ಯೂಟ್ ನ ‘ರೂಟ್ಸ್ ಆಂಡ್ ಶೂಟ್ಸ್’ ಎಂಬ ಶಾಖೆಯು ಯುವಪೀಳಿಗೆಯನ್ನು ಪರಿಸರ ರಕ್ಷಣೆಯ ನಿಜವಾದ ಸವಾಲುಗಳಿಗೆ ಸಿದ್ಧ ಪಡಿಸುವೆಡೆಗೆ, ಪರಿಸರದ ಬಗ್ಗೆ ಜವಾಬ್ದಾರಿಯಿಂದ ನಡೆದುಕೊಳ್ಳುವ ಕಡೆಗೆ ಅನೇಕ ಯೋಜನೆಗಳ ಮುಖಾಂತರ ಮಾರ್ಗದರ್ಶನ ನೀಡುತ್ತಿದೆ.
ಇತ್ತೀಚ್ಚೆಗೆ ತೀರಿಕೊಂಡ ವಿಜ್ಞಾನಿ ಜೇನ್‌ ಗುಡಾಲ್‌ ಕುರಿತು ಕ್ಷಮಾ ವಿ. ಭಾನುಪ್ರಕಾಶ್‌ ಬರಹ ನಿಮ್ಮ ಓದಿಗೆ

Read More

ನಮ್ಮನೆಯ ದೀಪಾವಳಿ…: ರೂಪಶ್ರೀ ಕಲ್ಲಿಗನೂರ್‌ ಬರಹ

ಕನಿಷ್ಟ ಎರಡು ವಾರಗಳ ಹಿಂದಿನಿಂದ ಕೆಲಸ ಆರಂಭಿಸಿರುತ್ತಿದ್ದ ಅಮ್ಮ, ದೀಪಾವಳಿ ಬಟ್ಟೆ ಶಾಪಿಂಗಿಗೆ ಬಂದಿದ್ದು ಕಡಿಮೆಯೇ. ಅಕ್ಕ-ನಾನು ಆಯ್ದ ಬಟ್ಟೆಗಳು ಅವರಿಗೆ ಯಾವಾಗಲೂ ಖುಷಿಯೇ. ಹಾಗಾಗಿ ನೀವೇ ಆರಿಸಿತಂದುಬಿಡಿ ಅಂತ ನಮ್ಮೆಲ್ಲರನ್ನೂ ಕಳಿಸಿಬಿಡುತ್ತಿದ್ದರು. ಹಾಗಾಗಿ ನಮ್ಮದೆಲ್ಲ ಬಟ್ಟೆ ಕೊಂಡಾದ ಮೇಲೆ, ಅಮ್ಮನಿಗೆಂದು ಚಂದದ ಸೀರೆ ಆರಿಸುವ ಜವಾಬ್ದಾರಿ ನಮ್ಮಗಳ ಮೇಲಿರುತ್ತಿತ್ತು. ಅಪ್ಪನೂ, ನಾವೂ ಎಲ್ಲರೂ ಸೇರಿ ಅಮ್ಮನಿಗೆ ಒಪ್ಪಬಹುದಾದ ಸೀರೆಯನ್ನು ಬಹಳ ಕುತೂಹಲದಿಂದ ಆರಿಸುತ್ತಿದ್ದೆವು. ದೀಪಾವಳಿಯ ಆಚರಣೆಯ ಕುರಿತು ರೂಪಶ್ರೀ ಕಲ್ಲಿಗನೂರ್‌ ಬರಹ

Read More

ದೀಪಾವಳಿ ಹಬ್ಬದ ಆ ದಿನದ ನೆನಪು: ಮಾರುತಿ ಗೋಪಿಕುಂಟೆ ಬರಹ

ಅಂತೂ ಈಡಿಗೆ ಬೆಂಕಿ ತಾಕಿಸಿ ಅದು ಉರಿಯುವುದರೊಳಗೆ ನನ್ನನ್ನು ಅಲ್ಲಿಂದ ಮನೆಗೆ ಕಳಿಸಿದ್ದರು. ಅದಾದ ಮೇಲೆ ಎಂದೂ ನಾನು ಬಾನ ಹೊತ್ತಿದ್ದು ನೆನಪಿಲ್ಲ. ನನಗೆ ದೇವರನ್ನು ಹೊತ್ಕೋಬೇಕು ಅಂತ ಆಸೆ ಇತ್ತು. ಆದರೆ ನಾವು ದೇವರನ್ನು ತಲೆಮೇಲೆ ಹೊರಬಾರ್ದು ಅನ್ನುತ್ತಿದ್ದರು. ಅದಕ್ಕೆ ಅನೇಕ ನಿಯಮಗಳಿರುತ್ತವೆ ಅನ್ನುತ್ತಿದ್ದರು. ನಾವ್ಯಾಕೆ ಹೊತ್ಕೋಬಾರ್ದು ಎಂಬ ಪ್ರಶ್ನೆ ನನ್ನನ್ನು ಕಾಡುತ್ತಲೆ ಇತ್ತು. ಅಂತೂ ಆ ವರ್ಷದ ದೀವಣ್ಗೆ ಹಬ್ಬ ಮುಗಿದುಹೋಗಿತ್ತು. ಪ್ರತಿ ದೀಪಾವಳಿ ಹಬ್ಬದಲ್ಲೂ ಅಂತಹ ನೆನಪುಗಳು ಮತ್ತೆ ಮತ್ತೆ ಮರುಕಳಿಸುತ್ತಲೆ ಇರುತ್ತವೆ.
ಮಾರುತಿ ಗೋಪಿಕುಂಟೆ ನೆನಪುಗಳು

Read More

ತುಳುನಾಡಿನ ದೀಪಾವಳಿ: ಫಕೀರ್ ಮುಹಮ್ಮದ್ ಕಟ್ಪಾಡಿ ನೆನಪುಗಳು

ಪಟಾಕಿ ಸುಡುವುದರ ಬಗ್ಗೆ ಕ್ಲಾಸಿನಲ್ಲಿ ಪಾಠದ ಮಧ್ಯೆ ಸುಮ್ಮನೆ ದಂಡಕ್ಕೆ ಎಂದು ಬೋಧಿಸಿದ್ದ ನಮ್ಮ ನೆರೆಮನೆಯ ದೇಜು ಮಾಸ್ಟ್ರು ತಮ್ಮ ಮಕ್ಕಳು ಕೃಷ್ಣ, ಲಕ್ಷ್ಮಣ, ಪುಟ್ಟ ಮಗು ಮಾರುತಿಯರನ್ನು ಕರೆದುಕೊಂಡು ಬಂದು ನಮ್ಮ ತಂದೆಯವರ ಜೊತೆಗೆ ನಿಂತು ಉತ್ಸವವನ್ನು ನೋಡಿದಂತಾಯಿತೆಂದು ಹೇಳಿಕೊಂಡು, ಖುಷಿ ಪಟ್ಟುಕೊಂಡು, ನಮ್ಮ ಸಂತೋಷದಲ್ಲಿ ಭಾಗಿಯಾಗಿದ್ದರು. ಸುಮಾರು ಅರ್ಧ ಗಂಟೆಗಳ ಕಾಲ ನಮ್ಮ ಸುಡು ಮದ್ದು ಬಿರುಸು ಬಾಣಗಳ ವೈಭವವನ್ನು ಸವಿದ ಊರವರು ಮುಂದೆ ವರ್ಷಗಟ್ಟಲೆ ಈ ದೀಪಾವಳಿಯನ್ನು `ಗುರುಕುಲೆ ಇಲ್ಲದ ದೀಪೋಲಿ’ ಎಂತಲೇ ನೆನಸಿ ಕೊಳ್ಳುತ್ತಿದ್ದರು.
ತುಳುನಾಡಿನ ದೀಪಾವಳಿಯ ಆಚರಣೆಗಳ ಕುರಿತು ಫಕೀರ್ ಮುಹಮ್ಮದ್ ಕಟ್ಪಾಡಿ ನೆನಪುಗಳು ನಿಮ್ಮ ಓದಿಗೆ

Read More

ಜನಮತ

ಬದುಕು...

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ