ವರ್ತಮಾನದ ಬೆಂಕಿಯಲ್ಲಿ ಅರಳಿದ ಹೂವು ಮೈ ಫ್ಯಾಮಿಲಿ: ಎಚ್. ಆರ್. ರಮೇಶ ಬರಹ
ಈ ನಾಟಕದ ಮತ್ತೊಂದು ವೈಶಿಷ್ಟ್ಯತೆಯೆಂದರೆ, ಇಂದಿನ ತಂತ್ರಜ್ಞಾನ ಮತ್ತು ಅದರ ಪರಿಣಾಮದ ಸೋ ಕಾಲ್ಡ್ ಆನ್ ಲೈನ್ ಸಾಮಾಜಿಕ ಜಾಲ ತಾಣಗಳು ಮನುಷ್ಯ ಸಂಬಂಧಗಳನ್ನು ಸಡಿಲಗೊಳಿಸುತ್ತ, ಒಂಟಿತನಗಳನ್ನು ಹುಟ್ಟುಹಾಕುತ್ತ ಮನುಷ್ಯರನ್ನು ಭಾವನಾರಹಿತರನ್ನಾಗಿಸುತ್ತಿರುವುದನ್ನು, ಇಡೀ ಮನುಕುಲವೇ ಅನುಭವಿಸುತ್ತಿರುವುದನ್ನು, ಭಾರತೀಯ ಸಂದರ್ಭದಲ್ಲಿ ಇಟ್ಟು ನೋಡಿರುವುದು. ಇದಕ್ಕೆ ಪುರಾಣ, ಇತಿಹಾಸ, ಮತ್ತು ಜ್ವಲಂತ ಸಂಗತಿಗಳು ರೂಪಕವಾಗಿ ಮೈದಾಳಿ ಬಂದಿವೆ.
ಕುಮಾರಿ ಗೌತಮಿ ಕತೆಯಾಧಾರಿತ ಮೈಸೂರಿನ ರಂಗಾಯಣದ ರೆಪರ್ಟರಿ ಕಲಾವಿದರು ಅಭಿನಯಿಸಿದ “ಮೈ ಫ್ಯಾಮಿಲಿ” ನಾಟಕದ ಕುರಿತು ಎಚ್.ಆರ್. ರಮೇಶ್ ಬರಹ