Advertisement

Category: ಸಂಪಿಗೆ ಸ್ಪೆಷಲ್

ಕಪ್ಪುಹಲಗೆಯ ಮೇಲಿನ ಬಣ್ಣದ ಅಕ್ಷರಗಳು…: ಆಶಾ ಜಗದೀಶ್‌ ಪ್ರಬಂಧ

ಒಮ್ಮೆ ಸೀರಿಯಸ್ಸಾಗಿ ನೋಟ್ಸ್ ಕರೆಕ್ಷನ್ ಮಾಡುತ್ತಾ ಕುಳಿತಿದ್ದೆ. ಆಗ ಇದ್ದಕ್ಕಿದ್ದಂತೆ ಜಗದೀಶ, ಜೋರು ಧ್ವನಿಯಲ್ಲಿ ಟೇಬಲ್ ಬಡಿಯುತ್ತಾ “ಚೆಲ್ಲಿದರೂ ಮಲ್ಲಿಗೆಯಾ… ಬಾಣಾಸೂರೇರೀ ಮ್ಯಾಲೆ…” ಅಂತ ಹಾಡತೊಡಗಿದ. ತಲೆ ಎತ್ತಿ ನೋಡಿದರೆ, ಅವ ಈ ಲೋಕದಲ್ಲಂತು ಇರಲಿಲ್ಲ. ಇದ್ದಕ್ಕಿದ್ದಂತೆ ಅವ ಪೆಚ್ಚಾದ. ಮಕ್ಕಳೆಲ್ಲ ಗೊಳ್ ಎಂದು ನಗತೊಡಗಿದರು. ಬಹುಶಃ ಬೇರೆಯ ಹೊತ್ತಾಗಿದ್ದರೆ ನಾನೂ ಅವನೊಂದಿಗೆ ಸೇರಿ ಯುಗಳ ಗೀತೆ ಹಾಡುತ್ತಿದ್ದೆನೇನೋ.
ಶಾಲಾ ಮಕ್ಕಳ ಜೊತೆಗಿನ ಅನುಭವದ ಕುರಿತು ಆಶಾ ಜಗದೀಶ್‌ ಪ್ರಬಂಧ ನಿಮ್ಮ ಓದಿಗೆ

Read More

ಜೀವಕ್ಕೊಂದು ಜೀವ…. : ರೂಪಶ್ರೀ ಕಲ್ಲಿಗನೂರ್‌ ಬರಹ

ಈಗ ಆಂಟಿ ಮಿಕ್ಕಿಯನ್ನು ವಾಕಿಂಗಿಗೆ ಕರೆದುಕೊಂಡು ಹೋಗುವುದಿಲ್ಲ. ಅಂಕಲ್‌ ಸಮಯ ಮಾಡಿಕೊಂಡು ಬೇಗ ಬಂದು ಆ ಕೆಲಸವನ್ನು ತಾವೇ ಮಾಡುತ್ತಾರೆ. ಆದರೆ ಚಂದೂ ಆಂಟಿಯ ಪ್ರೀತಿಯಿಂದ ಮಾತ್ರ ಮಿಕ್ಕಿಗೆ ರಿಯಾಯಿತಿ ದೊರೆತಿಲ್ಲ… ಯಾಕೆಂದರೆ ನಾಯಿಗಾಗಲೀ, ಮನುಷ್ಯನಿಗಾಗಲಿ ಯಾವತ್ತೂ ಯಾರದ್ದಾದರೂ ಸಾಂಗತ್ಯ ಬೇಕೆಬೇಕು. ಈಗ ವಯಸ್ಸಾದ ಕಾಲಕ್ಕೆ ಆಂಟಿಯೊಟ್ಟಿಗೆ ಬಹುತೇಕ ಇರುವುದು ಆ ನಾಯಿಯೆ. ಆದರೆ ಈಗ ಆ ನಾಯಿಗೂ ವಯಸ್ಸಾಗುತ್ತಿದೆ ಎನ್ನುವಾಗ, ಅವರ ಕಣ್ಣಲ್ಲಿ ತೆಳುವಾಗಿ ನೀರ ಪರದೆ ಕಾಣುತ್ತದೆ.
ರೂಪಶ್ರೀ ಕಲ್ಲಿಗನೂರ್‌ ಬರಹ ನಿಮ್ಮ ಓದಿಗೆ

Read More

ಗುಣ ಕೆಡಿಸಿದ ಹಣ!: ಶರಣಗೌಡ ಪಾಟೀಲ ಬರೆದ ಪ್ರಬಂಧ

ನಿವೃತ್ತಿ ನಂತರವೂ ಇವನು ಸುಮ್ಮನೆ ಕೂಡದೆ ನಿರಂತರ ಕೆಲಸ ಕಾರ್ಯದಲ್ಲಿ ಮಗ್ನನಾಗಿರುತಿದ್ದ. ಮುಂಜಾನೆ ಊಟ ಮುಗಿಸಿಕೊಂಡು ನಡು ಊರ ಕಟ್ಟೆ ಕಡೆ ಬಂದು ಸಮವಯಸ್ಕರ ಜೊತೆ ಮಳೆ ಬೆಳೆ ಊರು ಕೇರಿ ದೇಶಾವರಿ ಚರ್ಚೆ ಮಾಡುತಿದ್ದ. ಪಕ್ಕದ ಹೋಟಲಿನಿಂದ ಚಹಾ ತರಿಸಿ ತಾನೂ ಕುಡಿದು ಅವರಿಗು ಕುಡಿಸಿ ಖುಷಿ ಪಡುತಿದ್ದ. ಆಗಾಗ ಹೊಲ ಗದ್ದೆಗೂ ಹೋಗಿ ಆಳುಗಳಿಗೆ ಸಲಹೆ ಸೂಚನೆ ಕೊಡುತ್ತಿದ್ದ. ಇವನ ಕ್ರಿಯಾಶೀಲತೆ ನೋಡಿ ಅನೇಕರು ಆಶ್ಚರ್ಯ ಹೊರಹಾಕಿ “ಕುಬೇರಪ್ಪ ನಿವೃತ್ತನಾದರು ಸುಮ್ಮನೆ ಕೂಡೋದಿಲ್ಲ ಏನಾದರು ಮಾಡ್ತಿರ್ತಾನೆ ಶ್ರಮಜೀವಿ” ಅಂತ ವರ್ಣನೆ ಮಾಡುತ್ತಿದ್ದರು.
ಶರಣಗೌಡ ಬಿ. ಪಾಟೀಲ, ತಿಳಗೂಳ ಬರೆದ ಪ್ರಬಂಧ

Read More

“ನನ್ನ ಚಲಿಸದ ಕಾಲುಗಳನ್ನು ಹೊತ್ತ ಈ ಭೂಮಿಗೆ..”: ವಿಕ್ರಂ ಹತ್ವಾರ್‌ ಬರಹ

ಹೀಗೆ ಎಲ್ಲದಕ್ಕು ಕವಿಯ ಎಲ್ಲ ನಿವೇದನೆಯೂ ಕೊನೆಗೆ ‘ಕೇಳು ಓ ನನ್ನ ಹುಂಬ ಪ್ರಾಣವೇ ನಾನಿನ್ನೂ ನಿನ್ನನ್ನು ಚಕಿತಗೊಳಿಸುವುದಿದೆ’ ಎಂದು ಸವಾಲು ಎಸೆಯುತ್ತದೆ. ಅದು ಸ್ಪರ್ಧೆಯಲ್ಲ. ಅಲ್ಲಿ ಗೆಲ್ಲಬೇಕೆಂಬ ಅಥವ ಗೆದ್ದೇ ಗೆಲ್ಲುವೆ ಎನ್ನುವ ಠೇಂಕಾರವಿಲ್ಲ. ಪ್ರಾಣದ ಕೆನ್ನೆ ಚಿವುಟಿ ಕಣ್ಣು ಹೊಡೆದು ಅಣಕಿಸಿದಂತಿದೆ. ಇಂಥ ವಿರಳಾತಿ ವಿರಳ ಕವಿತೆಗಳ ಗುಚ್ಛವೇ ಅವಳ ಬಳಿ ಇತ್ತು…. ಪ್ರಕಟಿಸೋಣ ಅಂದೆ..
ನಾಗಶ್ರೀ ಶ್ರೀರಕ್ಷ ಕವಿತೆಗಳ ಕುರಿತು ವಿಕ್ರಂ ಹತ್ವಾರ್‌ ಬರಹ

Read More

ಯಾರು ಕುರುಡರು?: ಮಹಮ್ಮದ್‌ ರಫೀಕ್‌ ಕೊಟ್ಟೂರು ಬರಹ

ಅಂಧರಾಗಿದ್ದರಿಂದ ಬಹುಶಃ ಅವರಿಗೆ ಕನ್ ಫ್ಯೂಸ್ ಆಗಿರಬಹುದು ಎಂದು ‘ಅಲ್ಲ ಸರ್ ಗೇಟ್ ಈ ಕಡೆ ಇದೆ ನೀವು ವಿರುದ್ಧ ದಿಕ್ಕಿನಲ್ಲಿ ಕೈ ತೋರುತ್ತಿದ್ದೀರಲ್ಲʼ ಎಂದೆ. ಆಗ ಅವರು ನಕ್ಕು ತಮ್ಮ ಕೈಯಲ್ಲಿನ ವಾಕಿಂಗ್ ಸ್ಟಿಕ್ ಓಪನ್ ಮಾಡಿ ಬನ್ನಿ ನನ್ನ ಹಿಂದೆ ಎಂದು ಮುಂದೆ ನಡೆದರು. ನಾನು ಆ ಅಂಧ ವ್ಯಕ್ತಿಯನ್ನು ಅನಿವಾರ್ಯವಾಗಿ ಅಪನಂಬಿಕೆಯಿಂದ ಹಿಂಬಾಲಿಸತೊಡಗಿದೆ. ಎದುರಿನ ರೂಮುಗಳ ಎಡಕ್ಕೆ ನಮ್ಮ ಕಣ್ಣಿಗೆ‌ ಮರೆಯಲ್ಲಿದ್ದ ದಿಕ್ಕಿನಲ್ಲಿ ತಿರುಗಿದಾಗ ಅವರು ಮಾತನಾಡುತ್ತಿದ್ದ ಗೇಟ್ ಕಂಡಿತು.
ಮಹಮ್ಮದ್‌ ರಫೀಕ್‌ ಕೊಟ್ಟೂರು ಬರಹ ನಿಮ್ಮ ಓದಿಗೆ

Read More

ಜನಮತ

ಬದುಕು...

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ