Advertisement

Category: ಸಂಪಿಗೆ ಸ್ಪೆಷಲ್

ಕೆ. ಎಸ್.ನ ಅವರ ಕವಿತೆಗಳಲ್ಲಿ ಮಣ್ಣಿನ ಹಾಡು

‘ನಿನ್ನ ಕಾಣದೆಯೆ ಬೆಳೆದೆ, ನಾ ಕಂಡಿಹೆ ತಾಯ ಸಂಪ್ರೀತಿಯನು ಚೆಲುವನು’ ಎನ್ನುವ ನಿರೂಪಕನಿಗೆ ತಂದೆ ಇಲ್ಲಿ ಅದೃಶ್ಯ ವ್ಯಕ್ತಿ ಅಥವಾ ಯಾವಾಗಲಾದರೊಮ್ಮೆ ಕಂಡರೂ, ಮಗ ‘ಕೈಬೀಸಿ ಕರೆದರೂ ರಾಜಾಧಿರಾಜನೆನ್ನುವ ಸೊಕ್ಕಿನಿಂದ’ ಮಗನ ಮೈಮುಟ್ಟದೆಯೇ ನಡೆವನು. ಆದರೆ ತಾಯಿಯಾದರೋ ‘ಮರುಭೂಮಿಯಲಿ ಮುಗಿಲ ತೊಟ್ಟಿಲ ಕಟ್ಟಿ, ಹಿಮ ಬೆಂಕಿ ಬಿರುಗಾಳಿ’ ಯ ವಿಕೋಪದ ನಡುವೆಯೂ ಹರುಷದಿಂದ ಅಮೃತವನ್ನೇ ಸೋಸಿ ಪೊರೆದವಳು.
ಇಂದು ಕವಿ ಕೆ.ಎಸ್. ನರಸಿಂಹಸ್ವಾಮಿಯವರ ಕವಿತೆಗಳ ಕುರಿತು ಗಿರಿಜಾ ಶಾಸ್ತ್ರಿ ಬರಹ

Read More

ಟೆಂಟ್ ಸಿನಿಮಾನೂ ಮತ್ತು ಪೊರಕೆ ನ್ಯೂಸೂ

ಮಲ್ಲೇಶ್ವರದ ಹದಿನೆಂಟನೇ ಕ್ರಾಸಿನಲ್ಲಿ ಅವರ ಮನೆಗೆ ಯಾವುದೋ ಸಮಾರಂಭಕ್ಕೆ ಹೋದ ನೆನಪಿದೆ. ಅಲ್ಲಿ ಅಪ್ಪ ಮಡಿಯಲ್ಲಿ ಪುಟ್ಟ ಪಂಚೆ ಕಚ್ಚೆ ಹಾಕಿಕೊಂಡು ಊಟ ಬಡಿಸಿದ ನೆನಪು; ಅಲ್ಲಿ ಮೊಟ್ಟ ಮೊದಲಬಾರಿಗೆ ಊಟದ ಎಲೆಗೆ ಹಳದಿ ಕೆಂಪು ಮಿಶ್ರಣದ ದೊಡ್ಡದಾಗಿ ಹೆಚ್ಚಿದ ಮಾವಿನ ಹಣ್ಣಿನ ಸಿಪ್ಪೆ ಇಲ್ಲದ ಹೋಳು ಬಡಿಸಿದ್ದು, ಅದನ್ನು ನಾನು ಗಬಗಬಾ ತಿಂದಿದ್ದು, ಎದುರು ಕೂತ ರೇಷ್ಮೆ ಸೀರೆ ಉಟ್ಟಿದ್ದ ಚಿಕ್ಕಮ್ಮನ ಹಾಗೆ ಕಾಣಿಸುತ್ತಿದ್ದ ದಪ್ಪನೆ ಹೆಂಗಸರೊಬ್ಬರು ಬಡಿಸುವವರನ್ನು ಕರೆದು ಮಗೂಗೆ ಇನ್ನೊಂದು ಸ್ವಲ್ಪ ಹಣ್ಣು ಬಡಿಸಿ ಅಂತ ಹೇಳಿದ್ದು…. ಎಚ್. ಗೋಪಾಲಕೃಷ್ಣ ಬರಹ

Read More

ಅಜ್ಜಿ ಮತ್ತು ಹರಿದ ಹೋಳಿಗೆಯ ತುಂಡುಗಳು…

ಅಜ್ಜಿ ಹೋಳಿಗೆಯ ಮೇಲಿನ ಆಸೆ ಎಂದೂ ಬಿಟ್ಟಿರಲೆ ಇಲ್ಲ. ಯುಗಾದಿ ಹಬ್ಬದ ದಿನಗಳಲ್ಲಿ ಹೋಳಿಗೆ ಸಿಹಿ ಮಾಡುವುದು ವಾಡಿಕೆ. ಬಹುಃಶ ನಾವೆಲ್ಲಾ ಬಾಲ್ಯದ ದಿನಗಳಲ್ಲಿ ಸಿಹಿಯೂಟ ಸವಿಯುತ್ತಿದ್ದುದೆ ವರ್ಷಕ್ಕೊಮ್ಮೆ. ಮನೆಯಲ್ಲಿ ಸಿಹಿ ಮಾಡುವಷ್ಟು ಆರ್ಥಿಕ ಅನುಕೂಲತೆಯ ಕೊರತೆಯಿಂದಾಗಿ ಪಾಯಸವನ್ನಷ್ಟೇ ಮಾಡುತ್ತಿದ್ದರು. ಅಜ್ಜಿ ಎಂಬತ್ತರ ಆಸು ಪಾಸಿನಲ್ಲಿದ್ದರೂ ಇನ್ನೂ ಗಟ್ಟಿಯಾಗಿದ್ದರು ನಡಿಗೆಯಲ್ಲಿ ಸ್ವಲ್ಪ ನಿಧಾನವಿತ್ತು ಅಷ್ಟೇ.
ಮಾರುತಿ ಗೋಪಿಕುಂಟೆ ಬರೆದ ಪ್ರಬಂಧ ನಿಮ್ಮ ಓದಿಗೆ

Read More

ಚೊಕ್ಕಾಡಿಯ ಹಕ್ಕಿ

ಅವರ ಓರಗೆಯ ಹಿರಿಯ ಲೇಖಕರಿರಲಿ, ಇತ್ತೀಚಿನ ಹೊಸ ಕವಿ ಲೇಖಕರಿರಲಿ ಚೊಕ್ಕಾಡಿಯವರು ಕಾಮನ್ ಫ್ಯಾಕ್ಟರ್ ಹಾಗೆ. ಅವರಿಗೆ ಹಳತು ಹೊನ್ನಿನ ಸಮುದ್ರವೂ ಗೊತ್ತು. ಹೊಸ ಹರಿವಿನ ಹಳ್ಳದೊರತೆಗಳೂ ಗೊತ್ತು. ವಿಮರ್ಶಿಸುವಾಗ ಸ್ಪಷ್ಟ ಮಾತುಗಳನ್ನು ಹೇಳುವ ನೇರವಂತಿಕೆ, ಹಾಗೆಂದು ಬರೆದವರ ಮನಸ್ಸು ಕುಗ್ಗಿಸದ ಹಾಗೆ ಆ ಬರಹದಲ್ಲಿನ ಒಳಿತನ್ನು ಮತ್ತೆ ಹುಡುಕಿ ಹೇಳಿ ಮುಂದಿನ ದಾರಿಗೊಂದು ಬೆಳಕು ಚೆಲ್ಲುವ ಹೃದಯವಂತಿಕೆ ಇವೆರಡೂ ಚೊಕ್ಕಾಡಿಯವರದ್ದು.
ಸುಬ್ರಾಯ ಚೊಕ್ಕಾಡಿಯವರ ಬದುಕು-ಬರಹದ ಕುರಿತು ಸಿಂಧುರಾವ್‌ ಟಿ. ಬರಹ

Read More

ಶಾಲಾ ಕಾಲೇಜು ದಿನಗಳ ಮೆಲುಕು

ತರಗತಿಯಲ್ಲಿ ಹೆಚ್ಚು ಅಂಕ ತೆಗೆಯುವ ಹಾಗೂ ಅತಿ ಕಡಿಮೆ ಅಂಕ ತೆಗೆಯುವ ವಿದ್ಯಾರ್ಥಿ ಇವರಿಗೆ ಸಮಾನ ಪ್ರೀತಿಪಾತ್ರರು. ನಾನು ಎರಡನೇ ಗುಂಪಿನ ಖಾಯಂ ಸದಸ್ಯ. ಶಾಲೆಯಿಂದ ಹೊರಗೆ ಸಿಕ್ಕಾಗ ಬಾರೋ ಅಂತ ಕೂಗುವರು. ಎಷ್ಟು ಸೋಶಿಯಲ್ ಸ್ಟಡಿಸ್‌ನಲ್ಲಿ ಈ ಸಲ…. ಅಂತ ಕೇಳುವರು. ನೂರಕ್ಕೆ ಹನ್ನೆರೆಡು ಸಾರ್ ಅನ್ನುತ್ತಿದ್ದೆ. ಹೇಗೆ ಓದುವೆ, ಯಾವ ಹೊತ್ತಿನಲ್ಲಿ ಓದುವುದು…. ಹೀಗೆ ವಿಷಯ ತಿಳಿದು ಅದರ ಪರಿಷ್ಕರಣೆ ಮಾಡುತ್ತಿದ್ದರು.
ಶಾಲಾ ಕಾಲೇಜು ಮೇಷ್ಟರೊಟ್ಟಿಗಿನ ನೆನಪುಗಳನ್ನು ಹಂಚಿಕೊಂಡಿದ್ದಾರೆ ಎಚ್. ಗೋಪಾಲಕೃಷ್ಣ

Read More

ಜನಮತ

ಬದುಕು...

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ