Advertisement

Category: ಸರಣಿ

ಅಧಿಕಾರವೆಂಬ ಮುಳ್ಳಿನ ಹಾದಿಯಲ್ಲಿ..

ಡಾ. ವೈ.ವಿ.  ಅವರು ತೆಲುಗಿನಲ್ಲಿ ಬರೆದ  ‘ನಾ ಜ್ಞಾಪಕಾಲು’ ಅನ್ನುವ ಆತ್ಮಕಥೆಯಲ್ಲಿ ತಮ್ಮ ಜೀವನದ ಬಗ್ಗೆ ಹೆಚ್ಚಿನ ಬೆಳಕು ಚೆಲ್ಲಿದ್ದಾರೆ. ಆಂಗ್ಲ ಭಾಷೆಯಲ್ಲಿ ಬರೆದ ಪುಸ್ತಕವು, ದೇಶದ ಆರ್ಥಿಕತೆಯ ಬಗೆಗಿನ ಸಂಕೀರ್ಣ ವಿಷಯಗಳನ್ನು ಒಳಗೊಂಡಿದೆ. ಇವೆರಡನ್ನು ಒಟ್ಟುಗೂಡಿಸಿ, ಹಣಕಾಸು ವಿಷಯದಲ್ಲಿ ಜ್ಞಾನ ಇಲ್ಲದವರಿಗೂ ಅರ್ಥವಾಗುವಂತೆ ಪುಸ್ತಕವನ್ನು ಕನ್ನಡಕ್ಕೆ ಅನುವಾದಿಸುವುದು ಖಂಡಿತವಾಗಿಯೂ ಸುಲಭದ ವಿಷಯವಲ್ಲ. ಎಂ.ಎಸ್. ಶ್ರೀರಾಮ್ ಈ ಕೆಲಸವನ್ನುಯಶಸ್ವಿಯಾಗಿ ಮಾಡಿದ್ದಾರೆ.  ಓದುವ ಸುಖ ಅಂಕಣದಲ್ಲಿ ಗಿರಿಧರ್ ಗುಂಜಗೋಡು ಬರಹ

Read More

ಜಪಾನ್‌ ನ ʻಡ್ರೈವ್‌ ಮೈ ಕಾರ್ʼ: ವಿಷಾದ ಪ್ರಧಾನ ಚಿತ್ರ

ಹಿರೋಶಿಮಾಗೆ ಆ ನಾಟಕವನ್ನು ನಿರ್ದೇಶಿಸಲು ಹೊರಟವನಿಗೆ ಪ್ರಾರಂಭದಲ್ಲಿಯೇ ಅನಿರೀಕ್ಷಿತ ಪ್ರಸಂಗ ಎದುರಾಗುತ್ತದೆ. ನಾಟಕ ಸಂಸ್ಥೆಯವರು ಕಫುಕುನ ಕಾರಿಗೆ ಡ್ರೈವರೊಬ್ಬಳನ್ನು ಏರ್ಪಾಡು ಮಾಡಿರುತ್ತಾರೆ. ಆದರೆ ಕಫುಕುಗೆ ಇಷ್ಟವಾಗುವುದಿಲ್ಲ. ಏಕಾಂಗಿಯಾಗಿ ಕಾರಲ್ಲಿ ಓಡಾಡುವುದು ಇಷ್ಟವೆನಿಸಿ ಬೇಡವೆಂದರೂ ಕೇಳದೆ ಮಿಸಕಿ ವಕಾರಿ ಎಂಬ ಯುವತಿಯನ್ನು ಗೊತ್ತು ಮಾಡುತ್ತಾರೆ.
ಎ.ಎನ್. ಪ್ರಸನ್ನ ಬರೆಯುವ ‘ಲೋಕ ಸಿನಿಮಾ ಟಾಕೀಸ್‌’ನಲ್ಲಿ ಜಪಾನೀ ಚಿತ್ರದ ಕುರಿತ ಹೊಸ ಬರಹ

Read More

ಬದುಕಿಗೆ ಸಾವಿರ ತಿರುವುಗಳು

ಹೊಸದಾಗಿ ಬಂದ ಕೃಷ್ಣಾ ಜಾಣನೂ ಮೃದು ಸ್ವಭಾವದವನೂ ಆಗಿದ್ದ. ಹೆಣ್ಣು ಧ್ವನಿಯ ಆತ ‘ಬ್ಯೂಟಿಫುಲ್’ ಆಗಿದ್ದ. ಆತ ಬಂದ ಹೊಸದರಲ್ಲಿ ಜಗ್ಗು ಒಂದು ಸಲ ಕೃಷ್ಣಾಗೆ ಮತ್ತು ನನಗೆ ಐಸ್ಕ್ರೀಮ್ ತಿನ್ನಲು ಪಾರ್ಲರ್‌ಗೆ ಕರೆದುಕೊಂಡು ಹೋದ. ವಿಜಾಪುರದಲ್ಲಿ ಇದ್ದುದರಲ್ಲೇ ಅದು ಬಹಳ ಪಾಶ್ ಆಗಿತ್ತು. ಒಳಗೆ ಕ್ಯಾಬಿನ್‌ಗಳಿದ್ದವು. ಒಂದು ಕ್ಯಾಬಿನ್‌ನಲ್ಲಿ ಹೋಗಿ ಕುಳಿತೆವು. ನನಗೆ ಅಂಥ ಅನುಭವ ಮೊದಲನೆಯದಾಗಿತ್ತು. ಒಂದು ಪೆಗ್ ತುಂಬ ಐಸ್ಕ್ರೀಮ್ ಕೂಡ ಮೊದಲ ಬಾರಿಗೆ ತಿಂದದ್ದು. ಕೃಷ್ಣಾ ಬಹಳ ಮುಜುಗರದಿಂದ ತಿನ್ನುತ್ತಿದ್ದ.
ರಂಜಾನ್ ದರ್ಗಾ ಬರೆಯುವ “ನೆನಪಾದಾಗಲೆಲ್ಲ” ಸರಣಿಯ ಇಪ್ಪತ್ತೆಂಟನೆಯ ಕಂತು

Read More

ನರಕದಲ್ಲಿ ಕ್ಷಣ ಬೆರಳದ್ದಿ ಬಂದಿದ್ದೆ

ನನ್ನ ಇತಿ ಮಿತಿಯಲ್ಲಿ ಅವುಗಳಲ್ಲಿ ಬೇಕಾದವನ್ನು ಆಯ್ದುಕೊಂಡೆ. ಬರೆವ ಬಣ್ಣಗಳು ಆಗಲೇ ಹೈಸ್ಕೂಲು, ಪಿಯು ಕಾಲೇಜಿನಲ್ಲೆ ಅಂಟಿಕೊಂಡಿದ್ದವು ಎಂದು ಹೇಳಿದ್ದೆ. ಲೈಬ್ರರಿಯ ತರಾವರಿ ಗ್ರಂಥಗಳ ಬೆಟ್ಟ ಕಂಡ ಕೂಡಲೆ ಬರೆಯುವುದನ್ನೆ ಮರೆತುಬಿಟ್ಟಿದ್ದೆ. ಹಾದಿ ಬೀದಿಯಲ್ಲಿ ಅಲೆವಾಗ ಎಷ್ಟೊಂದು ಚೆಲುವೆಯರ ಕಂಡೆ; ನಗರದ ಮೂಲೆ ಮೂಲೆಯ ನರಕವ ಕಂಡೆ…
ಮೊಗಳ್ಳಿ ಗಣೇಶ್ ಬರೆಯುವ ಆತ್ಮಕತೆ ‘ನನ್ನ ಅನಂತ ಅಸ್ಪೃಶ್ಯ ಆಕಾಶ’ ಸರಣಿ

Read More

ಬೆಂಕಿಯಲ್ಲಿ ಅರಳಿದ `ಹೂ’ “ಗೋದಾವರಿ ಗಂಟಿಚೋರ”

ಗಂಟಿಚೋರ ಸಮುದಾಯವನ್ನು ಬ್ರಿಟೀಶ್ ಆಡಳಿತದಲ್ಲಿ ಕ್ರಿಮಿನಲ್ ಟ್ರೈಬ್ಸ್ ಪಟ್ಟಿಗೆ ಸೇರಿಸಿ ಇವರನ್ನು ನಿಯಂತ್ರಿಸಲು `ಸೆಟ್ಲಮೆಂಟ್’ ಎಂಬ ದೊಡ್ಡ ಜೈಲಲ್ಲಿ ಬಂಧಿಸಿದ್ದರು. ಇವರನ್ನು ಹದ್ದಿನ ಕಣ್ಣಿನಲ್ಲಿ ಕಾವಲು ಕಾಯುತ್ತಾ ಚಿತ್ರ ಹಿಂಸೆಗೆ ಒಳಗುಮಾಡಿದ್ದರು. ಪೌಜುದಾರ, ಪೋಲಿಸರಿಂದ ನಿರಂತರ ಹಿಂಸೆಗೆ ಒಳಗಾದ ಈ ಪುಟ್ಟ ಗಂಟಿಚೋರ ಸಮುದಾಯ ಕಾಲಾನಂತರದಲ್ಲಿ ಯಾರೇ ಕಳ್ಳತನ ಮಾಡಿದರೂ ಇವರನ್ನೇ ಹಿಂಸಿಸುತ್ತಿದ್ದ ಪೋಲಿಸರ ದಬ್ಬಾಳಿಕೆಗೆ ನಲುಗಿತು. ಡಾ. ಅರುಣ್ ಜೋಳದಕೂಡ್ಲಿಗಿ ಬರೆಯುವ ಸರಣಿ

Read More

ಜನಮತ

ಬದುಕು...

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ