Advertisement

Category: ಸರಣಿ

ಅಮ್ಮನ ನಂಬಿಕೆ, ಔಷಧಿಗಳ ಮಹಿಮೆಯಲ್ಲಿ ಕಳೆದ ಬಾಲ್ಯ

ಬಡ ಗಿರಾಕಿಗಳಿಂದ ಹಿಡಿದು ಶ್ರೀಮಂತ ಗಿರಾಕಿಗಳವರೆಗೆ ಅವರ ಶಕ್ತ್ಯನುಸಾರ ಹಣ್ಣುಗಳನ್ನು ಕೊಳ್ಳುತ್ತಿದ್ದರು. ಹಣ್ಣುಗಳನ್ನು ಕೊಳ್ಳುವಾಗ ರೇಟಿಗೆ ಸಂಬಂಧಿಸಿದ ಕೊಸರಾಟ ಮಜಾ ಅನಿಸುತ್ತಿತ್ತು. ಗಿರಾಕಿಗಳು ತಮ್ಮ ಎಲ್ಲ ತರ್ಕ ಉಪಯೋಗಿಸಿ ಕಡಿಮೆ ಬೆಲೆಗೆ ಕೇಳುತ್ತಿದ್ದರು. ಆ ಹಣ್ಣುಗಳನ್ನು ತರುವ ಕಷ್ಟ, ಅದಕ್ಕಾಗಿ ಮಾಡಿದ ಖರ್ಚು, ಗಿರಾಕಿಗಳು ಕೇಳುವ ಬೆಲೆಗಿಂತ ಹೆಚ್ಚಾಗಿದೆ ಎಂಬುದನ್ನು ಅಜ್ಜಿ ವಿವರಿಸುತ್ತಿದ್ದಳು. ಇಷ್ಟಕ್ಕಾದರೆ ಕೊಡು ಎಂದು ಹೇಳುತ್ತ ಗಿರಾಕಿಗಳು ಮುಂದೆ ಹೋದಂತೆ ಮಾಡುತ್ತಿದ್ದರು. ಅಜ್ಜಿ ಕರೆಯದೆ ಇದ್ದಾಗ ಮತ್ತೆ ವಾಪಸ್ ಬರುತ್ತಿದ್ದರು.

Read More

ಸಮಾಜ ವಿಮರ್ಶಕ ಕವಿ ಅ.ಗೌ.ಕಿನ್ನಿಗೋಳಿ

ಕರಾವಳಿಯಲ್ಲಿ ಖಂಡಕಾವ್ಯಗಳನ್ನು ಬರೆದ ನವೋದಯ ಕವಿಪರಂಪರೆಯ ಕೊನೆಯ ಕೊಂಡಿ ಅಂದರೆ, ಕರಾವಳಿಯ ಮೊದಲನೆಯ ಗಣ್ಯ ದಲಿತ ಕವಿ ಅಚ್ಯುತಗೌಡ ಕಿನ್ನಿಗೋಳಿ.  ಅ.ಗೌ.ಕಿನ್ನಿಗೋಳಿ ಎಂಬ ಹೃಸ್ವ ಹೆಸರೇ ಅವರ ಕಾವ್ಯನಾಮ.  ಸಮಕಾಲೀನ ಕವಿಗಳ ಕಾವ್ಯವಸ್ತುವನ್ನೇ ಮುಂದುವರೆಸಿ, ಅದಕ್ಕೆ ಬೇರೊಂದು ಮುಕ್ತಾಯ ನೀಡುವ ಅವರ ಶೈಲಿ ವಿಭಿನ್ನವಾದುದು.  ಕನ್ನಡ ಮತ್ತು ಸಂಸ್ಕೃತ ಪದವಿ ಪಡೆದಿದ್ದ ಅವರು ಯಕ್ಷಗಾನ ಅರ್ಥಧಾರಿಯಾರಿಯೂ ಆಗಿದ್ದರು.

Read More

ಅಳುಕು… ಹುಳುಕು.. ತಳುಕು…

ಸ್ವಿದ್ರಿಗೈಲೋವ್‌ನನ್ನು ಭೇಟಿ ಮಾಡಲು ಧಾವಿಸುತ್ತಿದ್ದ ಅವನಿಂದ ಹೊಸದೇನನ್ನಾದರೂ ನಿರೀಕ್ಷೆ ಮಾಡಿದ್ದನೋ? ತಪ್ಪಿಸಿಕೊಳ್ಳುವ ಹೊಸ ದಿಕ್ಕು, ದಾರಿ? ಮುಳುಗುತ್ತಿರುವಾಗ ಹುಲ್ಲುಕಡ್ಡಿಯನ್ನೂ ಗಟ್ಟಿಯಾಗಿ ಹಿಡಿಯುತ್ತಾರೆ! ವಿಧಿಯೋ ಮತ್ತೇನೋ ಅವರಿಬ್ಬರನ್ನೂ ಒಟ್ಟಿಗೆ ತರುತ್ತಿತ್ತೋ? ಬರೀ ದಣಿವು, ಹತಾಶೆ ಇರಬಹುದು; ಸ್ವಿದ್ರಿಗೈಲೋವ್‍ ಅಲ್ಲದೆ ಬೇರೆ ಇನ್ಯಾರೋ ಅವನಿಗೆ ಬೇಕಾಗಿದ್ದು, ಈ ಕ್ಷಣದಲ್ಲಿ ಸ್ವಿದ್ರಿಗೈಲೋವ್ ಅಲ್ಲಿದ್ದಿರಬಹುದು.
ಪ್ರೊ. ಓ.ಎಲ್. ನಾಗಭೂಷಣ ಸ್ವಾಮಿ ಅನುವಾದಿಸಿದ ಫ್ಯದೊರ್ ದಾಸ್ತಯೇವ್ಸ್ಕಿ ಬರೆದ ‘ಅಪರಾಧ ಮತ್ತು ಶಿಕ್ಷೆʼ ಕಾದಂಬರಿಯ ಮುಂದುವರಿದ ಪುಟಗಳು.

Read More

ಲುಪ್ತವಾಗಿ ಹೋದ ‘ಪ್ರಸಂಗ ಕಥಾಸಾರ’ ಕುರಿತ ವಿಚಾರಗಳು

ಹಿಂದಿನ ಕಾಲದಲ್ಲಿ ಭಾಗವತರು ಪ್ರಸಂಗದ ಮೊದಲಿನಿಂದ ಕೊನೆಯವರೆಗಿನ ಪದ್ಯಗಳನ್ನು ಬಾಯಿಪಾಠ ಮಾಡಿಕೊಂಡೇ ತಯಾರಾಗಿರಬೇಕಾಗಿತ್ತು. ಇಂತಹಾ ಆದಿಯ ಪದ್ಯಗಳಿಗೆ ಕಥಾಸಾರ ಎಂಬ ಹೆಸರು. ಇದನ್ನು ಕಥಾನುಸಾರವೆಂದೂ ಕರೆಯುತ್ತಿದ್ದರು. ಅಜ್ಜ ಬಲಿಪ ನಾರಾಯಣ ಭಾಗವತರ ಕಾಲ ಮತ್ತು ಅದಕ್ಕೂ ಮೊದಲು ಪ್ರಸಂಗದ ಕಥಾಸಾರವನ್ನು ಪ್ರದರ್ಶನದ ವೇಳೆ ಕೈ ಬಿಡುವ ಪದ್ಧತಿ ಇರಲಿಲ್ಲ.ಸದ್ಯದ ಸಂದರ್ಭ ಕಥಾಸಾರ ಅಂದರೇನೆಂಬುದೇ ಅರಿವಿಲ್ಲದ ಸ್ಥಿತಿ ನಿರ್ಮಾಣವಾಗಿದೆ. 

Read More

ನಿಮ್ಮಪ್ಪ ನಿಂಗೆ ಬೇರೆ ಪ್ಯಾಂಟ್‌ ಕೊಡ್ಸಿಲ್ವಾ?

ಹಾಸ್ಟೆಲ್‌ನಲ್ಲಿ ನಮಗೆ ಪ್ರತಿ ತಿಂಗಳು ಸ್ನಾನಕ್ಕೆ ಮೈಸೋಪು, ತಲೆಗೆ ಎಣ್ಣೆ, ಬಟ್ಟೆ ತೊಳೆಯಲು ಹರಸನ್ ಸೋಪು ಕೊಡುತ್ತಿದ್ದರು. ವಾರ್ಡನ್ ನಿರಂಜನಾಚಾರಿ ಕೆಲವೊಮ್ಮೆ ತಿಂಗಳ ಪ್ರಾರಂಭದಲ್ಲೆ ಎಲ್ಲ ಸಾಮಗ್ರಿಗಳನ್ನ ತಂದು ಗೋಡೊನ್ ತುಂಬಿಸಿರುತ್ತಿದ್ದರು. ಆದರೆ ಎರಡು ಮೂರು ತಿಂಗಳಾದರೂ ಅವು ನಮ್ಮ ಕೈಸೇರುತ್ತಿರಲಿಲ್ಲ. ಕೊಂಡು ತರಲು ಹಾಸ್ಟೆಲ್ನ ಯಾವ ಹುಡುಗರ ಹತ್ತಿರವೂ ಬಿಡಿಗಾಸೂ ಇರುತ್ತಿರಲಿಲ್ಲ. ಬಟ್ಟೆಗಳಂತೂ ಮಾಸಿ ಚುಮ್ಮಟವಾಗಿರುತ್ತಿದ್ದವು.
‘ಟ್ರಂಕು ತಟ್ಟೆ’ ಸರಣಿಯಲ್ಲಿ ಗುರುಪ್ರಸಾದ್ ಕಂಟಲಗೆರೆ ಅನುಭವ ಕಥನದ ಹತ್ತನೆಯ ಕಂತು.

Read More

ಜನಮತ

ಬದುಕು...

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ