ಆನೆಗಳ ಭಾವ ಪ್ರಪಂಚದ ಚಿತ್ರಗಳು
ಆನೆಗಳಿಗೆ ಕೈಗಳಿಲ್ಲದಿರಬಹುದು. ಆದರೆ, ಸೊಂಡಿಲು ಇದೆ. ನಾವು ಕೈಗಳಿಂದ ಮಾಡುವ ಎಷ್ಟೋ ಕಾರ್ಯಗಳನ್ನು ಆನೆಗಳು ತಮ್ಮ ಸೊಂಡಿಲ ಮೂಲಕ ಮಾಡುತ್ತವೆ. ಅವುಗಳಲ್ಲಿ ಚಿತ್ರರಚನೆಯೂ ಒಂದು. ಸರ್ಕಸ್ಗಳಲ್ಲಿ, ಯೂಟ್ಯೂಬ್ ವಿಡಿಯೋಗಳಲ್ಲಿ ಆನೆಗಳು ಪೇಂಟ್ ಬ್ರಶ್ ಹಿಡಿದು ಚಿತ್ರ ಬರೆಯುವುದನ್ನು ನಾವು ನೋಡಬಹುದು. ಆದರೆ, ಇದನ್ನು, ಬಹು ಮಟ್ಟಿಗೆ ಕಲಾ ಸೃಷ್ಟಿ ಎನ್ನಲಾಗದು. ಅದರಲ್ಲಿರುವುದು, ನಿರಂತರ ತರಬೇತಿನಿಂದ ನಿರ್ಮಿತವಾಗಿರುವ ಯಾಂತ್ರೀಕತೆ ಮಾತ್ರ. ‘ಇಂತಹ ಗೆರೆಗಳನ್ನೆಳೆದರೆ ಬಾಳೆಯ ಗೊನೆ ಸಿಗುತ್ತದೆ; ಇಲ್ಲದಿದ್ದರೆ, ಅಂಕುಶದಿಂದ ತಿವಿತ ಸಿಗುತ್ತದೆ’ ಎಂಬ ಪ್ರೋತ್ಸಾಹ-ಶಿಕ್ಷೆಗಳ ಪರಿಣಾಮವಷ್ಟೇ ಅದು.
Read More
