ಅಣಶಿ ಘಟ್ಟದ ಮೇಲಿನ ಹಾದಿ
ಈ ಘಟ್ಟದ ಮಾರ್ಗದಲ್ಲಿ ಸಾಗುತ್ತಿದ್ದರೆ ಯಾರೋ ಹಿಂಬದಿಯಿಂದ ನಮ್ಮನ್ನು ಗಮನಿಸುತ್ತ ಅನುಸರಿಸುತ್ತ ಬಂದ ಹಾಗೆ ಅನಿಸುತ್ತದೆ. ಪಡ್ಡೆ ಹುಡುಗರ ಹಾಗೆ ಸೀಟಿ ಹಾಕುತ್ತ ನಮ್ಮ ಬೆನ್ನ ಹಿಂದೆಯೇ ಯಾರೋ ಬಂದಂತೆ ಅನಿಸಿ, ತಿರುಗಿ ನೋಡಿದರೆ ಯಾರೂ ಕಾಣುವುದಿಲ್ಲ. ಇದ್ದಕ್ಕಿದ್ದಂತೆ ಸೀಟಿಯ ಸದ್ದು ನಿಲ್ಲುತ್ತದೆ. ಹೀಗೆ ಕಾಡುವ ಪಡ್ಡೆ ಹುಡುಗನ ಹೆಸರು ‘ನೀಲಿ ಸಿಳ್ಳಾರ’. ಈ ವಿಶಿಷ್ಟ ಹಕ್ಕಿರಾಯ ಕಾಡಿನ ಸೊಬಗು ಹೆಚ್ಚಿಸುವವ. -ಅಕ್ಷತಾ ಕೃಷ್ಣಮೂರ್ತಿ ಬರೆಯುವ ‘ಕಾಳಿಯಿಂದ ಕಡಲಿನವರೆಗೆ’ ಸರಣಿಯಲ್ಲಿ ಕಾಡಿನ ವಿಸ್ಮಯಗಳ ವಿವರ.
Read More
