Advertisement

Category: ಅಂಕಣ

ಹೊಸವರ್ಷ, ಹೊಸಜೀವನದ ಮಜಲುಗಳು: ವಿನತೆ ಶರ್ಮ ಅಂಕಣ

ನಾನೇನೋ ಒಂದಷ್ಟು ಹನಿ ಬಿತ್ತು ಅಂದೆ ಸರಿ. ಆದರೆ ಸಣ್ಣ ಮಳೆ ಬಿದ್ದದ್ದು ಬ್ರಿಸ್ಬೇನ್, ಸಿಡ್ನಿ, ಮೆಲ್ಬೋರ್ನ್ ನಗರಗಳಲ್ಲಿ. ಇದನ್ನು ಅಪಹಾಸ್ಯ ಮಾಡುವಂತೆ ಉತ್ತರ ಕ್ವೀನ್ಸ್‌ಲ್ಯಾಂಡ್‌ನಲ್ಲಿರುವ (ಬ್ರಿಸ್ಬೇನ್ ನಗರದಿಂದ ೧,೪೦೦ ಕಿಮೀ ದೂರ) Townsville ನಗರ ಮತ್ತು ಅದರ ಆಸುಪಾಸಿನಲ್ಲಿ ಭಾರಿ ಮಳೆ ಬಿದ್ದು, ಪ್ರವಾಹ ಸ್ಥಿತಿ ಉದ್ಭವಿಸಿ ಈಗ ಅದನ್ನು ಕ್ವೀನ್ಸ್‌ಲ್ಯಾಂಡ್ ರಾಜ್ಯ ಸರ್ಕಾರ ಮತ್ತು ಕೇಂದ್ರ ಸರ್ಕಾರಗಳು ನಿಭಾಯಿಸುತ್ತಿವೆ. ಸಾವಿರಾರು ಜನರು ಪ್ರವಾಹಪೀಡಿತ ಸಂತ್ರಸ್ತರು ಎಂದು ನೋಂದಾಯಿಸಿಕೊಂಡಿದ್ದಾರೆ. ಅನೇಕ ಕಡೆ ರಸ್ತೆಗಳು ಮುಚ್ಚಿವೆ.
ಡಾ. ವಿನತೆ ಶರ್ಮ ಬರೆಯುವ “ಆಸ್ಟ್ರೇಲಿಯಾ ಪತ್ರ”

Read More

ಯಾಕೆ ಮಾಡುತ್ತೇವೆ ನಾವು ಮನುಷ್ಯರು ಬದುಕಿನೊಂದಿಗೆ ಇಷ್ಟೊಂದು ಚೌಕಾಸಿ!?: ಎಲ್.ಜಿ.ಮೀರಾ ಅಂಕಣ

ಕೋತಿಗಳನ್ನು ಹಿಡಿಯುವವರು ಒಂದು ಉಪಾಯ ಮಾಡುತ್ತಾರಂತೆ. ಚಿಕ್ಕ ಬಾಯಿಯುಳ್ಳ ಒಂದು ತಂಬಿಗೆಯಂತಹ ಪಾತ್ರೆಯೊಳಗೆ ಒಂದಿಷ್ಟು ಕಡಲೆಕಾಯಿಗಳನ್ನು ತಾವು ಹಿಡಿಯಬಯಸುವ ಕೋತಿಗೆ ಕಾಣಿಸುವ ಹಾಗೆ ಹಾಕುತ್ತಾರಂತೆ. ಕೋತಿ ಆ ಕಡಲೆಕಾಯಿಗಳನ್ನು ತಿನ್ನುವ ಆಸೆಯಿಂದ ಆ ತಂಬಿಗೆಯೊಳಕ್ಕೆ ಕೈಹಾಕುತ್ತದೆ, ತನ್ನ ಮುಷ್ಟಿಯಲ್ಲಿ ಆ ಕಡಲೆಕಾಯಿಗಳನ್ನು ಹಿಡಿದುಕೊಳ್ಳುತ್ತದೆ. ತಂಬಿಗೆಯಿಂದ ತನ್ನ ಕೈ ಹೊರತೆಗೆಯದಿದ್ದರೆ ಕೋತಿಗೆ ತಪ್ಪಿಸಿಕೊಂಡು ಓಡಿಹೋಗಲಾಗುವುದಿಲ್ಲ, ಆದರೆ ಕಡಲೆಕಾಯಿಯ ಮೇಲಿನ ಆಸೆಯು ಅವುಗಳನ್ನು ವಾಪಸ್ ತಂಬಿಗೆಗೆ ಹಾಕಲು ಕೋತಿಗೆ ಬಿಡುವುದಿಲ್ಲ!
ಡಾ. ಎಲ್.ಜಿ. ಮೀರಾ ಬರೆಯುವ “ಮೀರಕ್ಕರ” ಅಂಕಣ

Read More

ಭಾರತೀಯ-ಬ್ರಿಟಿಷ್ ಸಂಧಿಯಾದ ಸೆಂಚುರಿ ಕ್ಲಬ್: ವಿನತೆ ಶರ್ಮ ಅಂಕಣ

ನಾನು ಇದನ್ನೆಲ್ಲಾ ಕಲ್ಪಿಸಿಕೊಳ್ಳುತ್ತಾ ನಡೆದಾಡುತ್ತಾ, ಫೋಟೋಗಳನ್ನ ತೆಗೆಯುತ್ತಾ ಇತಿಹಾಸದ ಕಾಲಘಟ್ಟಗಳಲ್ಲಿ ಕಳೆದುಹೋಗಲು ಶತಾಯಗತಾಯ ಪ್ರಯತ್ನ ಮಾಡುತ್ತಿದ್ದೆ. ಅತ್ತ ಕಡೆ ನನ್ನ ಗಂಡ, ‘ನಾವಿಲ್ಲಿ ಕೂತಿದ್ದು, ಅಲ್ಲಿ ಆ ಲಾನ್‌ನಲ್ಲಿ ಒಂದು ಆನೆ ಕುಟುಂಬ ಓಡಾಡುತ್ತಿದ್ದಾರೆ ಎಷ್ಟು ಚೆನ್ನ, ಅಲ್ವಾ’ ಎಂದರು. ನನ್ನ ಬ್ರಿಟಿಷ್ ಗಂಡನ ಮಾತು ಕೊಲೊನಿಯಲ್ ಟೈಮ್ಸ್ ಕಲ್ಪನೆಗಳಲ್ಲಿ ಮುಳುಗಿದ್ದ ನನ್ನ ಭಾರತೀಯ ಮನಸ್ಸನ್ನು ತಾಕಿತ್ತು. ಆ ಕ್ಷಣದಲ್ಲಿ ಅಲ್ಲೊಂದು ಭಾರತೀಯ-ಬ್ರಿಟಿಷ್ ಸಂಧಿ-ಸಮಾಗಮವಾಗಿತ್ತು. ಖಂಡಿಸಬೇಕೊ, ನಗಬೇಕೊ ತಿಳಿಯದೇ ಕಕ್ಕಾಬಿಕ್ಕಿಯಾಗಿತ್ತು.
ಡಾ. ವಿನತೆ ಶರ್ಮ ಬರೆಯುವ “ಆಸ್ಟ್ರೇಲಿಯಾ ಪತ್ರ”

Read More

ಅಕ್ಕಮಹಾದೇವಿ ಮತ್ತು ಗೂಗಲ್ ಗುರು: ಎಲ್.ಜಿ.ಮೀರಾ ಅಂಕಣ

ಬದಲಾವಣೆಗಳಾಗುತ್ತಿರುವುದು ಕೇವಲ ಹೆಂಗಸರ ಬದುಕಿನಲ್ಲಲ್ಲ. ಕಳೆದ ಮೂವತ್ತು – ಮೂವತ್ತೈದು ವರ್ಷಗಳಲ್ಲಿ ಬದುಕಿನ ಎಲ್ಲ ಆಯಾಮಗಳಲ್ಲೂ ಪ್ರಾದೇಶಿಕ ಮತ್ತು ಜಾಗತಿಕ ಮಟ್ಟದಲ್ಲಿ ದೊಡ್ಡ ಪ್ರಮಾಣದ ಬದಲಾವಣೆಗಳಾಗಿವೆ. ನಮ್ಮ ಕುಟುಂಬ ವ್ಯವಸ್ಥೆ ಸಹ ಈ ಬದಲಾವಣೆಗಳಿಗೆ ಹೊರತಾಗಿಲ್ಲ. ಹೊಸಹೊಸ ರೀತಿಯ ಆರೋಗ್ಯ ಸಮಸ್ಯೆಗಳು, ಜೀವನಶೈಲಿಯ ಕಾಯಿಲೆಗಳು, ಒಟ್ಟುಕುಟುಂಬಗಳಿರಲಿ, ಬೀಜಕೇಂದ್ರ ಕುಟುಂಬಗಳೇ(ನ್ಯೂಕ್ಲಿಯರ್ ಫ್ಯಾಮಿಲಿ ಎನ್ನುವ ಅರ್ಥದಲ್ಲಿ) ಒಡೆದು ಹೊಸ ರೀತಿಯ ಸಹಜೀವನದ ವ್ಯವಸ್ಥೆಗಳು ಉಗಮವಾಗಿವೆ.
ಡಾ. ಎಲ್.ಜಿ. ಮೀರಾ ಬರೆಯುವ “ಮೀರಕ್ಕರ” ಅಂಕಣದ ಹನ್ನೊಂದನೆಯ ಬರಹ

Read More

ಹೊಳೆಯೊಂದು ಹರಿದ್ಹಾಂಗೆ…..: ಸುಧಾ ಆಡುಕಳ ಅಂಕಣ

ತಮ್ಮೂರಿನ ಹೊಳೆಗೂ ಒಂದು ಪುರಾಣವಿರುವುದು ತಿಳಿದು ನೀಲಿಗೆ ಬಹಳ ಖುಶಿಯಾಯಿತು. ಮರುಕ್ಷಣವೇ ಇನ್ನಿಲ್ಲವಾಗುತ್ತಿರುವ ಹೊಳೆಯ ನೆನಪಾಗಿ ವಿಷಾದ ಆವರಿಸಿತು. ಅವಳ ಇತಿಹಾಸದ ಶಿಕ್ಷಕರು ಕಾಣೆಯಾಗಿರುವ ನದಿಗಳ ಬಗೆಗೆ ಎಷ್ಟೊಂದು ವಿಷಯಗಳನ್ನು ಹೇಳಿದ್ದರು. ತಮ್ಮೂರಿನ ಹೊಳೆ ಹೋಗಿ ಸೇರುವ ನದಿಯೆಲ್ಲಿಯಾದರೂ ಕಾಣೆಯಾದರೆ ಅದೊಂದು ವಿದ್ಯಮಾನವಾಗಿ ಉಳಿಯುತ್ತದೆ. ಹೊಳೆ ಕಾಣೆಯಾದರೆ ಹೇಳಹೆಸರಿಲ್ಲದೇ ಮರೆಯಾಗಿಬಿಡುತ್ತದೆ. ಹೀಗೆಲ್ಲ ಯೋಚನೆಗಳು ರಾತ್ರಿಯಿಡೀ ಅವಳನ್ನು ಕಾಡತೊಡಗಿದವು.
ಸುಧಾ ಆಡುಕಳ ಬರೆಯುವ “ಹೊಳೆಸಾಲು” ಅಂಕಣದ ಇಪ್ಪತ್ತೈದನೆಯ ಹಾಗೂ ಕೊನೆಯ ಕಂತು ನಿಮ್ಮ ಓದಿಗೆ

Read More

ಜನಮತ

ಬದುಕಲು ನಿಮಗೆ....

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ