ಸಸ್ಯ ನೆಡುವವರ ಸಂತಸದ ಘಳಿಗೆಗಳು: ವಿನತೆ ಶರ್ಮ ಅಂಕಣ
ಚಕ್ರಮುನಿ ಸೊಪ್ಪಿನ ಗಿಡ ಖರೀದಿಗಿದ್ದದ್ದು ನೋಡಿ ನನ್ನ ಕಣ್ಣರಳಿತು! ಬೆಂಗಳೂರು, ಮೈಸೂರಿನಲ್ಲಿ ಈ ಚಕ್ರಮುನಿ ಎಲೆಗಳನ್ನು ತಿನ್ನುವ ಅಭ್ಯಾಸವಿತ್ತು. ಬ್ರಿಸ್ಬೇನ್ನಿನಲ್ಲಿ ಅಪರೂಪಕ್ಕೆ ವಾರಾಂತ್ಯ ತರಕಾರಿ-ಹಣ್ಣು ಮಾರ್ಕೆಟ್ಟಿನಲ್ಲಿ ವಿಯೆಟ್ನಮೀಸ್ ಮಾರಾಟಗಾರರು ತರುತ್ತಿದ್ದ ಚಕ್ರಮುನಿ ಸೊಪ್ಪನ್ನು ಕಂಡು ಸಂಭ್ರಮಿಸಿದ್ದೆ. ಅದನ್ನು ಕೊಂಡು ಅದರ ಕೊಂಬೆಗಳನ್ನು ನೆಟ್ಟು ಎರಡು ಬಾರಿ ಇದನ್ನು ಬೆಳೆಯಲು ಪ್ರಯತ್ನಿಸಿ ಸೋತಿದ್ದೆ. ಜೆರ್ರಿ ಅವರ ಸ್ವಾವಲಂಬಿ ಕೈತೋಟದಲ್ಲಿ ಚೆನ್ನಾಗಿ ಬೆಳೆದಿದ್ದ ಗಿಡವನ್ನು ನೋಡಿ ಸಂತೋಷವಾಗಿತ್ತು.
ಡಾ. ವಿನತೆ ಶರ್ಮ ಬರೆಯುವ “ಆಸ್ಟ್ರೇಲಿಯಾ ಪತ್ರ”