‘ಕಟ್ಟುತ್ತಿರುವೆ ಕವಿತೆ ನೋಡಾ…..’
‘ತಲೆಮಾರು’ ಕವಿತೆಯಲ್ಲಿನ ‘ಮೂಕಹಕ್ಕಿ’ ಪೂರ್ವಜರನ್ನು ಕುರಿತ ಕವಿತೆಯೆನ್ನಲು ಅನೇಕ ಪುರಾವೆಗಳು ಸಿಗುತ್ತವೆ. ಆಧುನಿಕತೆ ಮತ್ತು ಗತಕಾಲದ ಪಳೆಯುಳಿಕೆಗಳ ನಡುವೆ ತಣ್ಣನೆಯ ಪ್ರತಿರೋಧವನ್ನು ಇಲ್ಲಿ ಗಮನಿಸಬಹುದಾಗಿದೆ. ಅವ್ವನ ತಾಯ್ತನದ ಕುರಿತು ‘ಮೀಯುವುದೆಂದರೆ ಚೈತನ್ಯಗಳ ಹುಟ್ಟು’ ಕವಿತೆಯಲ್ಲಿ ಆಪ್ತ ದಾಟಿಯಲ್ಲಿ ಬರೆಯುವ ಕವಯತ್ರಿಗೆ ಇಲ್ಲಿ ಬಾಲ್ಯದ ನೆನಪು ಮರುಕಳಿಸಿದೆ. ‘ಮಿಂದಾಗಲೆಲ್ಲ ಅವ್ವನದು ಶೀತದ ಚಡಪಡಿಕೆ’ ಎನ್ನುವಲ್ಲಿ ಅವ್ವನ ಕಾಳಜಿಯೊಂದಿಗೆ ಆಕೆಯ ಜವಾಬ್ದಾರಿಯನ್ನು ಕಂಡು ಮರುಗಲೇಬೇಕಾಗುತ್ತದೆ.
ಅಭಿಷೇಕ್ ವೈ.ಎಸ್. ಬರೆಯುವ “ಕಾವ್ಯದ ಹೊಸ ಕಾಲ” ಅಂಕಣ