Advertisement

Category: ಅಂಕಣ

ಕೈ ಕೆಸರಾಗಿ ಬಾಯಿ ಮೊಸರು: ಗುರುಪ್ರಸಾದ್‌ ಕುರ್ತಕೋಟಿ ಅಂಕಣ

ಕೃಷಿಯನ್ನು ಕಲಿಯುವುದರ ಜೊತೆ ಜೊತೆಗೆ, ಉತ್ಪನ್ನಗಳನ್ನು ಹೇಗೆ ಮಾರಬೇಕು ಎಂಬುದನ್ನು ಕೂಡ ರೈತನಾಗುವವನು ಕಲಿಯಬೇಕು. ಹಿಂದೊಮ್ಮೆ ಬೆಂಗಳೂರನ್ನು ಬಿಟ್ಟು ಹಳ್ಳಿಗೆ ಖಾಯಂ ಆಗಿ ಬಂದು ಬಿಡಲೇ ಎಂದು ಯೋಚನೆ ಮಾಡುತ್ತಿದ್ದ ಸಮಯದಲ್ಲಿ ಅಲ್ಲಿನ ಸ್ನೇಹಿತರೊಬ್ಬರಿಗೆ ಹಳ್ಳಿಯಲ್ಲಿ ನಾನು ಸಂಪಾದನೆ ಮಾಡಲು ಏನು ಮಾಡಬಹುದು ಅಂತ ಕೇಳಿದಾಗ, ಅವರು ಬಿಳೆ (ಭತ್ತದ) ಹುಲ್ಲಿನ business ಮಾಡಿ ಅಂತ ನಕ್ಕಿದ್ದರು. ಆದರೆ ಅವರು ಹೇಳಿದ್ದು ತುಂಬಾ ಸತ್ಯ ಅಂತ ಈಗ ಅರಿವಾಗಿತ್ತು. ಭತ್ತದ ಹುಲ್ಲಿಗೆ ತುಂಬಾ ಬೆಲೆ ಹಾಗೂ ಬೇಡಿಕೆ ಇದೆ.
ಗುರುಪ್ರಸಾದ ಕುರ್ತಕೋಟಿ ಬರೆಯುವ “ಗ್ರಾಮ ಡ್ರಾಮಾಯಣ” ಅಂಕಣ ನಿಮ್ಮ ಓದಿಗೆ

Read More

ಸಸ್ಯ ನೆಡುವವರ ಸಂತಸದ ಘಳಿಗೆಗಳು: ವಿನತೆ ಶರ್ಮ ಅಂಕಣ

ಚಕ್ರಮುನಿ ಸೊಪ್ಪಿನ ಗಿಡ ಖರೀದಿಗಿದ್ದದ್ದು ನೋಡಿ ನನ್ನ ಕಣ್ಣರಳಿತು! ಬೆಂಗಳೂರು, ಮೈಸೂರಿನಲ್ಲಿ ಈ ಚಕ್ರಮುನಿ ಎಲೆಗಳನ್ನು ತಿನ್ನುವ ಅಭ್ಯಾಸವಿತ್ತು. ಬ್ರಿಸ್ಬೇನ್ನಿನಲ್ಲಿ ಅಪರೂಪಕ್ಕೆ ವಾರಾಂತ್ಯ ತರಕಾರಿ-ಹಣ್ಣು ಮಾರ್ಕೆಟ್ಟಿನಲ್ಲಿ ವಿಯೆಟ್ನಮೀಸ್ ಮಾರಾಟಗಾರರು ತರುತ್ತಿದ್ದ ಚಕ್ರಮುನಿ ಸೊಪ್ಪನ್ನು ಕಂಡು ಸಂಭ್ರಮಿಸಿದ್ದೆ. ಅದನ್ನು ಕೊಂಡು ಅದರ ಕೊಂಬೆಗಳನ್ನು ನೆಟ್ಟು ಎರಡು ಬಾರಿ ಇದನ್ನು ಬೆಳೆಯಲು ಪ್ರಯತ್ನಿಸಿ ಸೋತಿದ್ದೆ. ಜೆರ್ರಿ ಅವರ ಸ್ವಾವಲಂಬಿ ಕೈತೋಟದಲ್ಲಿ ಚೆನ್ನಾಗಿ ಬೆಳೆದಿದ್ದ ಗಿಡವನ್ನು ನೋಡಿ ಸಂತೋಷವಾಗಿತ್ತು.
ಡಾ. ವಿನತೆ ಶರ್ಮ ಬರೆಯುವ “ಆಸ್ಟ್ರೇಲಿಯಾ ಪತ್ರ”

Read More

ಬೆಳೆದ ಅಕ್ಕಿಯ ಉಣ್ಣುವ ತವಕ…: ಗುರುಪ್ರಸಾದ ಕುರ್ತಕೋಟಿ ಅಂಕಣ

ಇದೊಂಥರ ವೈರುಧ್ಯ. ಚೆನ್ನಾಗಿದೆ ಆದರೂ ತಿನ್ನೋಲ್ಲ! ಯಾಕಿರಬಹುದು? ಬಹುಶಃ ಬೆಳ್ಳಗೆ ಪಾಲಿಶ್ ಮಾಡಿದ ರೇಷನ್ ಅಕ್ಕಿಯನ್ನು ತಿಂದು ತಿಂದು ಅವರಿಗೆ ರೂಡಿ ಆಗಿಬಿಟ್ಟಿದೆಯೋ ಏನೋ. ತವಡನ್ನು ತೆಗೆದು ಅದರಲ್ಲಿ ಏನೂ ಇರದಂತೆ ಮಾಡಿ ಪಾಲಿಶ್ ಮಾಡಿ ಕೊಡುವ ಅಕ್ಕಿಯೇ ಎಲ್ಲರಿಗೂ ಪ್ರಿಯ. ಶ್ರೀಮಂತರು ಅಷ್ಟೇ ಯಾಕೆ ತಿನ್ನಬೇಕು ಎಲ್ಲರೂ ತಿನ್ನೋಣ ಅಂತ ಇವರೂ ಪಾಲಿಶ್ ಅಕ್ಕಿಯ ಮೊರೆ ಹೋದರೆ? ಇದೆ ಕಾರಣಕ್ಕೆ ಶ್ರೀಮಂತರಿಗೆ ಬರುವ ಸಕ್ಕರೆ ಕಾಯಿಲೆ, ಹೃದಯ ರೋಗ ಈಗ ಎಲ್ಲರಿಗೂ ಬರುತ್ತಿದೆ.
ಗುರುಪ್ರಸಾದ ಕುರ್ತಕೋಟಿ ಬರೆಯುವ “ಗ್ರಾಮ ಡ್ರಾಮಾಯಣ” ಅಂಕಣ ನಿಮ್ಮ ಓದಿಗೆ

Read More

ನೋವಿನಲ್ಲೂ ನಗುವುದ ಕಲೀಬೇಕು: ನಾಗಶ್ರೀ ಅಜಯ್‌ ಅಂಕಣ

“ಕೆಲವೊಮ್ಮೆ ಈ ಗಂಡ, ಮಗು, ಸಂಸಾರ, ದುಡಿಮೆ, ಸಂಪಾದನೆ, ಕೊಂಕು ಮಾತು, ಅನಾರೋಗ್ಯ ಎಲ್ಲದರಿಂದ ಬಹಳ ದೂರ ಹೋಗಿ, ನಾನೊಬ್ಬಳೇ ಪ್ರಶಾಂತವಾಗಿ ಕೆಲಕಾಲ ಕಳೆಯಬೇಕನ್ನಿಸುತ್ತೆ. ಆದರೆ ಎಲ್ಲಿ ಹೋಗುವುದು? ಹೀಗೆ ವಾಸ್ತವ ಹಿಂಸೆಯೆನಿಸಿದಾಗೆಲ್ಲ, ಬೇಸರದಲ್ಲೇ ಕತ್ತಲಕೋಣೆಯಲ್ಲಿ ಉಳಿಯುವುದರ ಬದಲು, ಮನೆತುಂಬ ಬೆಳಕಾಗುವಂತೆ ಝಗಮಗಿಸಿ, ಸ್ನಾನ ಮಾಡಿ, ನಾನು ಹೊಸದಾಗಿ ಕೊಂಡ ಬಟ್ಟೆ ತೊಟ್ಟು, ನನಗೇ ಹೆಮ್ಮೆಯಾಗುವಷ್ಟು ಚೆಂದಕ್ಕೆ ಅಲಂಕರಿಸಿಕೊಂಡು ಅರ್ಧಗಂಟೆ ಕನ್ನಡಿಯ ಮುಂದೆ ನಗುಮುಖದಲ್ಲಿ ಕೂತಿರುತ್ತೇನೆ.”
ಎಸ್. ನಾಗಶ್ರೀ ಅಜಯ್‌ ಬರೆಯುವ ಲೋಕ ಏಕಾಂತ ಅಂಕಣದಲ್ಲಿ ಹೊಸ ಬರಹ

Read More

150 ವರ್ಷಗಳ ಕ್ರಿಕೆಟ್ ಟೆಸ್ಟ್‌ಗಳಲ್ಲಿ ಎರಡೇ ‘ಟೈ’ ಮ್ಯಾಚುಗಳು!: ಇ.ಆರ್. ರಾಮಚಂದ್ರನ್ ಅಂಕಣ

ಕೊನೆಯ ರನ್ – ಗೆಲುವಿನ ರನ್ ಇಯನ್ ಮೆಕಿಫ್ ಓಡುತ್ತಿದ್ದಾಗ ಜೊ ಸೊಲೊಮನ್ ಬಾಲನ್ನು ಅಟ್ಟಿಸಿಕೊಂಡು ಹೋಗಿ ಹಿಡಿದು ಅದನ್ನು ವಿಕೆಟ್‌ಗೆ ಎಸೆದು ಮೆಕಿಫ್‌ಅನ್ನು ರನ್ ಔಟ್ ಮಾಡಿದರು. ಸೋಲೊಮನ್ ಬಾಲ್ ಎಸೆದಾಗ ಮೂರು ವಿಕೆಟ್‌ಗಳಿದ್ದರೂ ಅವರು ಸ್ಕೊಯರ್ ಲೆಗ್‌ನಲ್ಲಿ ಇದ್ದುದ್ದರಿಂದ ಆ ಜಾಗದಿಂದ ಅವರಿಗೆ ಕಾಣಿಸುತ್ತಿದ್ದ ವಿಕೆಟ್ ಒಂದೇ! ಅವರು ಗುರಿ ಇಟ್ಟು ಹೊಡೆದು ವಿಕೆಟ್‌ಗೆ ಬಿದ್ದು ಮೆಕಿಫ್ ರನ್ ಔಟಾದರು. ಇ.ಆರ್. ರಾಮಚಂದ್ರನ್ ಬರೆಯುವ “ಕ್ರಿಕೆಟಾಯ ನಮಃ” ಅಂಕಣದಲ್ಲಿ ಟೆಸ್ಟ್‌ಮ್ಯಾಚ್‌ಗಳಲ್ಲಿ ಇದುವರೆಗೂ ಆದ ಎರಡು ಟೈ ಮ್ಯಾಚುಗಳ ಕುರಿತ ಬರಹ ನಿಮ್ಮ ಓದಿಗೆ

Read More

ಜನಮತ

ಬದುಕಲು ನಿಮಗೆ....

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ