Advertisement

Category: ಅಂಕಣ

ಇದು ನಿಮ್ಮ ಮನೆ…

ಜೀವನದಲ್ಲಿ ಆಗಾಗ ಬದಲಾವಣೆಗಳನ್ನು ತಂದಾಗ ಅದು ಖಂಡಿತ ಒಂದು ಹೊಸ ಚೈತನ್ಯವನ್ನು ಹುಟ್ಟುಹಾಕುತ್ತದೆ. ನನಗೆ ಜೀವನ ಒಂದೇ ಗತಿಯಲ್ಲಿ ಅಥವಾ ಲಯದಲ್ಲಿ ಹೋಗುತ್ತಿದ್ದರೆ ಏನೋ ಇರಿಸುಮುರುಸು! ಮತ್ತೊಂದು ಹೊಸ ಯೋಜನೆ ಶುರು ಮಾಡಿರುತ್ತೇನೆ. ಹಾಗಂತ ಏನೇನೋ ಮಾಡೋದು ಅಂತಲ್ಲ. ನನ್ನ ಗುರಿ ಮಾತ್ರ ಅದೇ ಇತ್ತು. ಆ ದಾರಿಯಲ್ಲೇ ಇದು ನನ್ನ ಮತ್ತೊಂದು ಹೆಜ್ಜೆಯಾಗಿತ್ತು. ಈ ಗ್ರಾಮ ವಾಸ್ತವ್ಯ ಎಂಬ ಬದಲಾವಣೆ ನನ್ನಲ್ಲಿ ಹೊಸ ಉತ್ಸಾಹ ತಂದಿತ್ತು. ನನ್ನ ಕಂಫರ್ಟ್ ಜೋನ್ ನಿಂದ ಎದ್ದು ಹೊರ ಬಂದಿದ್ದೆ.
ಗುರುಪ್ರಸಾದ ಕುರ್ತಕೋಟಿ ಬರೆಯುವ “ಗ್ರಾಮ ಡ್ರಾಮಾಯಣ” ಅಂಕಣ

Read More

ಅಳಿವಿನಂಚಿನಲ್ಲಿರುವ ಪದ್ಧತಿಗಳ ನೇಯ್ಗೆ

ಇದು ಅನಿರೀಕ್ಷಿತ ತಿರುವುಗಳಿಲ್ಲದ, ಊಹಿಸಲಾಧ್ಯವಾದ ಸಂಗತಿಗಳಿರುವ ಕಾದಂಬರಿಯೂ ಅಲ್ಲ. ಪ್ರಧಾನ ಕತೆ ಒಂದು ಕಾದಂಬರಿಯಾಗಿ ಸಾಗಲು ಒಂದು ನೆಪವಷ್ಟೇ. ಮುಖ್ಯವಾಗಿ ಮಧ್ಯಘಟ್ಟ ಆ ಭಾಗದ ಮಲೆನಾಡಿನ ೭೦-೮೦ ವರ್ಷಗಳ‌ ಹಿಂದಿನ ಜೀವನ ಪದ್ಧತಿ, ನಿಸರ್ಗದ ಜೊತೆಗಿನ ಸಂಬಂಧ, ಆಹಾರ ಪದ್ಧತಿ, ಕಷ್ಟ ಸುಖಗಳು, ವಿವಿಧ ಸಮುದಾಯಗಳು‌ ಮತ್ತು ಆ ಸಮುದಾಯಗಳ‌ ನಡುವಣ ಅನುಬಂಧ, ವಿಶಿಷ್ಟವಾದ ನಾಟೀ ಔಷಧಿಗಳು ಇತ್ಯಾದಿಗಳ ಕುರಿತು ಬಹಳ ಆಪ್ತವಾಗಿ ಹೇಳುತ್ತಾ ಹೋಗುತ್ತದೆ‌.
ಓದುವ ಸುಖ ಅಂಕಣದಲ್ಲಿ ಗಿರಿಧರ್ ಗುಂಜಗೋಡು ಬರಹ

Read More

ಒಂದು ಮುತ್ತು ನಿಮ್ಮನ್ನು ಅಷ್ಟು ಭಯ ಪಡಿಸಿತಾ?

ಜೀವನದಲ್ಲಿ ನಾನು ಯಾರನ್ನು ನೋಡುತ್ತೇನೆಯೋ ಅವರಂತೆ ಆಗಲು, ಅವರಲ್ಲಿ ತಾನು ಇಷ್ಟಪಟ್ಟದ್ದನ್ನು ತನ್ನ ಭಾಗವಾಗಿಸಿಕೊಳ್ಳುವ ತನ್ನ ಗುಣಕ್ಕೆ ಏನೆನ್ನಬೇಕು? ಆ ರೀತಿ ಎಲ್ಲರೊಳಗಿನಿಂದ ಒಂದೊಂದು ಹೆಕ್ಕುತ್ತಾ ಅರಗಿಸಿಕೊಂಡು ಬರುತ್ತಾ ಇದ್ದ ತನಗೆ ತನ್ನ ನಿಜವಾದ ಅಸ್ಮಿತೆ ಯಾವುದು? ಎಂದು ಪ್ರತಿಸಲ ಗೊಂದಲಕ್ಕೆ ಬೀಳುತ್ತಾನೆ. ಅದೇ ಹೊತ್ತಿಗೆ ಆ ಹುಡುಗ ಅವನು ಕೂತಿದ್ದ ಜಾಗದಿಂದಲೇ ”ಅಂಕಲ್, ನೀವು ರೈಟರ್ ಆಲ್ವಾ?” ಎಂದು ಜೋರಾಗಿ ಕೇಳಿದ. ಅವನು ಸುಮ್ಮನೆ ತಲೆ ಅಲ್ಲಾಡಿಸಿದ.
ದಾದಾಪೀರ್‌ ಜೈಮನ್‌ ಬರೆಯುವ “ಜಂಕ್ಷನ್‌ ಪಾಯಿಂಟ್‌” ಅಂಕಣ

Read More

ಗೆಟ್ ಅಪ್, ಸ್ಟಾಂಡ್ ಅಪ್, ಶೋ ಅಪ್….

ಆಸ್ಟ್ರೇಲಿಯಾ ದೇಶದ ಅಬೊರಿಜಿನಲ್ ಮತ್ತು ಟೊರ್ರೆ ಸ್ಟ್ರೇಟ್ ದ್ವೀಪವಾಸಿ ಜನಪಂಗಡಗಳು ಎಷ್ಟೋ ಸಾವಿರ ವರ್ಷಗಳಿಂದ ಈ ನಾಡಿನಲ್ಲಿ ಬದುಕಿ ಬಾಳಿ, ನೆಲ-ಜಲ-ಪ್ರಕೃತಿಯನ್ನು ಕಾಪಾಡಿಕೊಂಡು ಬಂದಿದ್ದಾರೆ. ಸುಮಾರು ಅರವತ್ತು ಸಾವಿರ ವರ್ಷಗಳಿಗೂ ಹೆಚ್ಚಿನ ಕಾಲದಿಂದ ಈ ಖಂಡದಲ್ಲಿ ಅಬೊರಿಜಿನಲ್ ಜನರ ಇರುವಿಕೆಯ ಬಗ್ಗೆ ಅಧಿಕೃತ ಪುರಾವೆಗಳಿವೆ. ಬ್ರಿಟಿಷರ ವಸಾಹತು ಸ್ಥಾಪನೆಯಿಂದ ಆರಂಭವಾಗಿ ಇಲ್ಲಿನ ಮೂಲನಿವಾಸಿಗಳ ನಿರ್ಮೂಲನೆಗೆ ನಡೆದ ಪ್ರಯತ್ನಗಳು, ಅವರ ಅತ್ಯಂತ ಕ್ರೂರ ಆಡಳಿತದೊಡನೆ ಮುಂದುವರೆದು ಅನ್ಯಾಯಗಳ ನಡುವೆಯೂ ಬದುಕುಳಿದ ಅಬೊರಿಜಿನಲ್ ಜನರ ಜೀವನಗಾಥೆ ಇನ್ನೂ ಜ್ವಲಂತವಾಗಿದೆ.
ಡಾ. ವಿನತೆ ಶರ್ಮಾ ಅಂಕಣ

Read More

ಎರಡು ಕಣ್ಣುಗಳು… ಆರು ಕೈಗಳು…!

ಈ ಲಿಸ್ಟ್ ನಲ್ಲಿದ್ದ ಕೆಲವು ಪ್ರಶ್ನೆಗಳನ್ನು ನೋಡಿ ಗಾಬರಿಯಾಗಿದ್ದು ಹೌದು. ಈ ಹುಡುಗರನ್ನು ಕರೆದುಕೊಂಡು ಹೋಗಿ ಅಲ್ಲಿ ಇರುವುದು ಸಾಧ್ಯವೇ ಎಂಬ ಸಂಶಯ ನನ್ನಲ್ಲಿ ಮೂಡಲು ಶುರುವಾಯಿತು. ಇಲ್ಲಿನ ನಗರ ಜೀವನಕ್ಕೆ ಹೊಂದಿಕೊಂಡಿರುವ ಹುಡುಗರು (ನಾನೂ ಸೇರಿ!) ಹಳ್ಳಿಯಲ್ಲಿ ಹೊಂದಿಕೊಳ್ಳುವುದು ತುಸು ಕಷ್ಟಸಾಧ್ಯ ಅನಿಸಿತಾದರೂ ಈ ಎರಡು ಹುಡುಗರು ಬರಲು ತಯಾರಾಗಿದ್ದು ನನ್ನಲ್ಲಿ ಒಂದು ಹೊಸ ಹುರುಪು ಮೂಡಿಸಿತ್ತು. ಅದರಲ್ಲಿ ವಿನೋದ ಅವರು ಇನ್ನೂ ನೌಕರಿ ಮಾಡಿಕೊಂಡಿದ್ದರು.
ಗುರುಪ್ರಸಾದ ಕುರ್ತಕೋಟಿ ಬರೆಯುವ ಗ್ರಾಮ ಡ್ರಾಯಾಯಣ ಅಂಕಣ

Read More

ಜನಮತ

ಈ ಸಲದ ಚಳಿಗಾಲಕ್ಕೆ....

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಮನದಲ್ಲೇ ಉಳಿದುಹೋದ ಪತ್ರಗಳು: ದೀಪಾ ಗೋನಾಳ ಬರಹ

ಒಬ್ಬ ಸಂತನಂತವನನ್ನ ನಂಬಿ ಭಾರತಕ್ಕೆ ಬಂದು ಆತನ ಮಗಳಾಗಿ ಆತನ ಹೋರಾಟಗಳಿಗೆ ಹೆಗಲಾದ ಮೆಡಲಿನ್ ಸ್ಲೇಡ್‌ಗೆ ಬಾಪು ಯಕಃಶ್ಚಿತ್ ಒಂದು ಪಾನ್‌ ಬೀಡ ತಿಂದರೂ ಕ್ಲಾಸ್ ತೆಗೆದುಕೊಂಡ…

Read More

ಬರಹ ಭಂಡಾರ